- ದಾವಣಗೆರೆ ತಾಲೂಕುಮಟ್ಟದ ಪೋಷಣ್ ಮಾಸ ಕಾರ್ಯಕ್ರಮ
- - - ದಾವಣಗೆರೆ: ಪೋಷಣ್ ಮಾಸಾಚರಣೆ ಕೇವಲ ಒಂದು ತಿಂಗಳಿಗೆ ಸೀಮಿತವಾಗದೇ, ಪ್ರತಿ ತಿಂಗಳು ನಡೆಯುವಂತಾಗಬೇಕು. ಕಿಶೋರಿಯರು ಪೌಷ್ಠಿಕಾಂಶಯುಕ್ತ ಆಹಾರ ಸೇವನೆ ಮಾಡುವುದು ಅವಶ್ಯ ಎಂದು ಆಯುಷ್ ಅಧಿಕಾರಿ ಡಾ.ಅನುರಾಧ ಹೇಳಿದರು.
ಶನಿವಾರ ನಗರದ ತರಳಬಾಳು ನಗರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಸಹಯೋಗದಲ್ಲಿ ನಡೆದ ತಾಲೂಕುಮಟ್ಟದ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಬೆಳವನೂರು ಗ್ರಾಪಂ ಪಿಡಿಒ ರೇವತಿ ಮಾತನಾಡಿ, ಪ್ರತಿಯೊಬ್ಬರೂ ಕೂಡ ವೈಯಕ್ತಿಕ ಸ್ವಚ್ಛತೆ ಮತ್ತು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಹೇಳಿದರು.
ಸುಪೋಷಿತ ಕಿಶೋರಿ ಸಶಕ್ತ ನಾರಿ ಘೋಷವಾಕ್ಯದೊಂದಿಗೆ ಕಾರ್ಯಕ್ರಮ ನಡೆಯಿತು. ತಾಯಿ ಹೆಸರಿನಲ್ಲಿ ಸಸಿ ನೆಡುವುದು, ಸೀಮಂತ, ಅನ್ನಪ್ರಾಶನ ಕಾರ್ಯಕ್ರಮಗಳು ಜರುಗಿದವು.
ದಾವಣಗೆರೆಯಲ್ಲಿ ನಡೆದ ತಾಲೂಕುಮಟ್ಟದ ಪೋಷಣ್ ಮಾಸ ಕಾರ್ಯಕ್ರಮವನ್ನು ಆಯುಷ್ ಅಧಿಕಾರಿ ಡಾ.ಅನುರಾಧ ಉದ್ಘಾಟಿಸಿದರು.