ಪುಟ್ಟರಾಜ ಗವಾಯಿಗಳ ಸಾಹಿತ್ಯ ಸಂಪುಟ ಹೊರತರಲಿ

KannadaprabhaNewsNetwork |  
Published : Oct 22, 2024, 12:01 AM IST
21ಡಿಡಬ್ಲೂಡಿ5ಧಾರವಾಡದ ರಂಗಾಯಣದಲ್ಲಿ ಪಂ. ಪುಟ್ಟರಾಜ ಸಾಹಿತ್ಯೋತ್ಸವದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗವಾಯಿಗಳ ಕುರಿತಾದ ರೂಪಕ ಪ್ರದರ್ಶನ.  | Kannada Prabha

ಸಾರಾಂಶ

ಗುರು ಪುಟ್ಟರಾಜರಿಗೆ ಭಾರತ ರತ್ನ ಪ್ರಶಸ್ತಿಗೆ ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು. ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಮತ್ತು ಅವಶ್ಯಕತೆ ಬಿದ್ದರೇ ನಿಯೋಗ ತೆಗೆದುಕೊಂಡು ಹೋಗಬೇಕು.

ಧಾರವಾಡ:

ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳ ಸಮಗ್ರ ಸಾಹಿತ್ಯ ಸಂಪುಟವನ್ನು ರಾಜ್ಯ ಸರ್ಕಾರ ಪ್ರಕಟಿಸಿ ಅವರ ಸಾಹಿತ್ಯವನ್ನು ಜನಸಾಮಾನ್ಯರಿಗೆ ಉಣಬಡಿಸಬೇಕೆಂದು ಗದಗ ಜಿಲ್ಲೆಯ ಕಡಣಿ ಸಂಸ್ಥಾನ ಹಿರೇಮಠದ ಚನ್ನವೀರ ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.

ಇಲ್ಲಿಯ ರಂಗಾಯಣದಲ್ಲಿ ಪಂ. ಪುಟ್ಟರಾಜ ಸಾಹಿತ್ಯೋತ್ಸವಕ್ಕೆ ಚಾಲನೆ ನೀಡಿದ ಅವರು, ಗವಾಯಿಗಳವರು ಕನ್ನಡ, ಹಿಂದಿ ಮತ್ತು ಸಂಸ್ಕೃತದಲ್ಲಿ ವಿವಿಧ ಪ್ರಕಾರದ ಸಾಹಿತ್ಯ ರಚಿಸಿದ್ದಾರೆ. ನಾಡಿಗೆ ಶ್ರೀಮಂತ ಸಾಹಿತ್ಯ ನೀಡಿದ್ದು, ಅವರ ಜನ್ಮದಿನವನ್ನು ಸಹ ಸರ್ಕಾರದಿಂದ ಆಚರಿಸಬೇಕು ಎಂದು ಸೇವಾ ಸಮಿತಿಯಿಂದ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಸರ್ಕಾರ ಸ್ಪಂದಿಸಿ ಪೂಜ್ಯರ ಜನ್ಮದಿನ ಆಚರಣೆಗೆ ಚಾಲನೆ ನೀಡಬೇಕು ಎಂದರು.

ಸಾಹಿತಿ ಡಾ. ಎ.ಎಲ್. ದೇಸಾಯಿ ಮಾತನಾಡಿ, ಪಂ. ಪಂಚಾಕ್ಷರಿ ಗವಾಯಿಗಳವರ ನಾಟಕ ರಂಗಾಯಣದ ಮೂಲಕ ಪ್ರಯೋಗವಾಗಬೇಕು. ಈ ಕೆಲಸ ರಂಗಾಯಣದ ನಿರ್ದೇಶಕರರಾದ ರಾಜು ತಾಳಿಕೋಟಿ ಅವರಿಂದಾಗಬೇಕು ಎಂದು ಮನವಿ ಮಾಡಿದರು.

ಸಾನ್ನಿಧ್ಯ ವಹಿಸಿದ್ದ ಮನಸೂರಿನ ರೇವಣಸಿದ್ಧೇಶ್ವರ ಮಠದ ಬಸವರಾಜ ದೇವರು, ಗುರು ಪುಟ್ಟರಾಜರಿಗೆ ಭಾರತ ರತ್ನ ಪ್ರಶಸ್ತಿಗೆ ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು. ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಮತ್ತು ಅವಶ್ಯಕತೆ ಬಿದ್ದರೇ ಡಾ. ರಾಜು ತಾಳಿಕೋಟಿ ಮತ್ತು ನಾವೆಲ್ಲರು ಸೇರಿ ಮುಖ್ಯಮಂತ್ರಿಗೆ ಭೇಟಿ ಆಗೋಣ ಎಂದರು.

ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಗೌರವ ಅಧ್ಯಕ್ಷರಾದ ಕೆಂಬಾವಿ ಸಂಸ್ಥಾನ ಹಿರೇಮಠದ ಚನ್ನಬಸವ ಶಿವಾಚಾರ್ಯರು ಮಾತನಾಡಿದರು. ರಂಗಾಯಣದ ನೂತನ ನಿರ್ದೇಶಕ ರಾಜು ತಾಳಿಕೋಟಿ ಅವರನ್ನು ಸನ್ಮಾನಿಸಲಾಯಿತು. ಡಾ. ಸುರೇಶ ಕಳಸನ್ನವರ ಸ್ವಾಗತಿಸಿದರು, ಬಸವರಾಜ ಹಡಪದ ನಿರೂಪಿಸಿದರು. ನಂತರ ಕವಿಗೋಷ್ಠಿ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು