ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸುತ್ತಲಿನ ಪರಿಸರದಲ್ಲಿದ್ದ ಋಷಿಗಳ ತಪೋವನದಿಂದ ಜ್ಞಾನ ಸಂಪಾದನೆ ಮಾಡಿದ ವಾಲ್ಮೀಕಿ ಶ್ರೇಷ್ಠ ಋಷಿಗಳೇ ಆಗಿದ್ದಾರೆ ಎಂದರು.
ರಾಮರಾಜ್ಯದ ಪರಿಕಲ್ಪನೆ ಎಂದರೆ ಮಹಿಳೆಯರು, ಪುರುಷರು ಸೇರಿದಂತೆ ಎಲ್ಲರಿಗೂ ಸಮಾನತೆ ಕಲ್ಪಿಸುವುದೇ ಆಗಿದೆ. ಎಲ್ಲಾ ಜನರು ಸಾಮರಸ್ಯದಿಂದ ಸಹಬಾಳ್ವೆ ನಡೆಸಲು ಅವಕಾಶ ನೀಡುವುದೇ ಆಗಿದೆ. ಬುದ್ಧ, ಬಸವ, ಅಂಬೇಡ್ಕರ್ ಆಶಯಗಳು ಕೂಡ ಇದೇ ಆಗಿತ್ತು. ಜನರು ಮೂಢನಂಬಿಕೆ, ಕಂದಾಚಾರ ಬಿಡಿ, ನಮ್ಮ ಮುಂದೆ ಶ್ರೇಷ್ಠ ಸಂವಿಧಾನವಿದೆ. ರಾಮಾಯಣವನ್ನು ಎಲ್ಲರೂ ಓದಿ, ಅದರ ಮೌಲ್ಯಗಳನ್ನು ಅಳವಡಿಸಿಕೊಳ್ಳೋಣ, ಮಹರ್ಷಿ ವಾಲ್ಮೀಕಿ ಹಾಕಿಕೊಟ್ಟ ಹಾದಿಯಲ್ಲಿ ಮುನ್ನೆಡೆಯೋಣ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಎಂ.ಎಸ್.ಐ.ಎಲ್ ಅಧ್ಯಕ್ಷ ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ, ಮಹರ್ಷಿ ವಾಲ್ಮೀಕಿಯವರು ರಾಮಾಯಣದ ಮೂಲಕ ಸಮಾಜದಲ್ಲಿ ರಾಜ ಹಾಗೂ ಪ್ರಜೆಗಳ ನಡೆ-ನುಡಿ, ರೀತಿ ನೀತಿ ಹೇಗಿರಬೇಕು ಎಂಬ ಅದರ್ಶ ಪರಿಕಲ್ಪನೆಯನ್ನು ತಿಳಿಸಿಕೊಟ್ಟಿದ್ದಾರೆ. ರಾಮರಾಜ್ಯದಲ್ಲಿ ಪ್ರಜೆಗಳ ಮಾತಿಗೂ ಬೆಲೆ ಇತ್ತು. ಪಿತೃವಾಕ್ಯ ಪರಿಪಾಲನೆಯು ಮುಖ್ಯವಾಗಿತ್ತು. ವಾಲ್ಮೀಕಿ ಅವರ ಮಾರ್ಗದರ್ಶನದಲ್ಲಿ ಎಲ್ಲರೂ ನಡೆಯೋಣ. ಮುಂದಿನ ವರ್ಷದೊಳಗೆ ನಗರದಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿಯೂ ನಿರ್ಮಾಣವಾಗಲಿದೆ ಎಂದು ಹೇಳಿದರು.ಹಿರಿಯ ಪ್ರಾಧ್ಯಾಪಕ ಡಾ. ಜಿ. ಪ್ರಶಾಂತನಾಯಕ ಮಾತನಾಡಿ, ಮಹರ್ಷಿ ವಾಲ್ಮೀಕಿಯವರು ಈ ನೆಲದ ಸಂಸ್ಕೃತಿ ರೂಪಿಸಿ ಪರಿಚಯಿಸುವ ಮೂಲಕ ವಿಶ್ವಪ್ರಜ್ಞೆಯನ್ನು ಜಾಗೃತಗೊಳಿಸಿದರು. ಜಯಂತಿ ಆಚರಣೆ ಒಂದು ಸಮುದಾಯಕ್ಕೆ ಸೀಮಿತವಾಗಬಾರದು, ವರ್ಷದಿಂದ ವರ್ಷಕ್ಕೆ ನಮ್ಮ ಸಂಸ್ಕೃತಿ, ಪರಂಪರೆಯ ಯೋಗ್ಯತೆಯನ್ನು ಹೆಚ್ಚಿಸಿಕೊಳ್ಳುವಂತಾಗಬೇಕು. ಪ್ರತಿಯೊಬ್ಬ ವ್ಯಕ್ತಿಯು ಪರಿಪೂರ್ಣತೆ ಹೊಂದಲು ವಾಲ್ಮೀಕಿಯವರ ರಾಮನನ್ನು ಅನುಸರಿಸಬೇಕು ಎಂದರು.
ವಾಲ್ಮೀಕಿ ಭಾವಚಿತ್ರ ಮೆರವಣಿಗೆಗೆ ಚಾಲನೆ:
ಮಂಗಳವಾದ್ಯ, ಡೊಳ್ಳುಕುಣಿತ, ಗೊರುಕನ ನೃತ್ಯ, ಗಾರುಡಿಗ ಗೊಂಬೆ, ಕೊಂಬು ಕಹಳೆ, ತಮಟೆ ಹಾಗೂ ಬ್ಯಾಂಡ್‌ಸೆಟ್ ಸೇರಿದಂತೆ ವಿವಿಧ ಆಕರ್ಷಕ ಕಲಾತಂಡಗಳೊಂದಿಗೆ ನಡೆದ ಮರೆವಣಿಗೆಯು ಪ್ರವಾಸಿ ಮಂದಿರದಿಂದ ಆರಂಭಗೊಂಡು ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಭುವನೇಶ್ವರಿ ವೃತ್ತದ ಮೂಲಕ ಪೇಟೆ ಪ್ರೈಮರಿ ಶಾಲೆ ತಲುಪಿತು.