ಹೊಸಕೋಟೆ: ನವೆಂಬರ್ 1ರಂದು ನಾಡಿನ ಪ್ರಜೆಗಳೆಲ್ಲರೂ ಎಲ್ಲೇ ಇದ್ದರೂ ಕನ್ನಡ ನಾಡಿನ ಜನ್ಮ ದಿನವನ್ನು ಗೌರವಾಭಿಮಾನಗಳಿಂದ ಆಚರಣೆ ಮಾಡಬೇಕು ಎಂದು ಗ್ರಾಪಂ ಅಧ್ಯಕ್ಷ ಪೂಜೇನ ಅಗ್ರಹಾರ ಸುರೇಶ್ ತಿಳಿಸಿದರು.
ಪಿಡಿಒ ಸುಬ್ರಹ್ಮಣಿ ಮಾತನಾಡಿ, ಕನ್ನಡ ನಾಡು ನುಡಿಗಾಗಿ ಹಲ ಹೋರಾಟಗಾರರು, ಕನ್ನಡಾಭಿಮಾನಿಗಳು ಹೋರಾಟಗಳನ್ನು ಮಾಡಿದ ಫಲವೇ ಕರ್ನಾಟಕ ರಾಜ್ಯ ಉದಯವಾಗಲು ಕಾರಣ. ನವೆಂಬರ್ 1ಕ್ಕೆ ಮಾತ್ರ ರಾಜ್ಯೋತ್ಸವ ಆಚರಣೆ ಸೀಮಿತವಾಗದೆ ವರ್ಷಪೂರ್ತಿ ಆಚರಿಸಬೇಕು. ಅಲ್ಲದೆ ನಿತ್ಯ ವ್ಯವಹಾರದಲ್ಲಿ ಕನ್ನಡ ಭಾಷೆ ಬಳಕೆ ಹೆಚ್ಚಾಗಿ ಮಾಡಿದರೆ ಮಾತ್ರ ಭಾಷೆಯ ಉಳಿವು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಪಂಚಾಯತಿ ಉಪಾಧ್ಯಕ್ಷೆ ರೂಪ, ಸದಸ್ಯರಾದ ಎಸ್‌ಟಿಬಿ ಮುನಿರಾಜು, ಮೀನಮ್ಮ, ಮಮತ, ರಮೇಶ್, ನಿರ್ಮಲ, ಶೈಲಮ್ಮ, ಗಿರಿಜಾ, ನಾಗವೇಣಿ, ಕಾರ್ಯದರ್ಶಿ ಚೌಡರೆಡ್ಡಿ ಹಾಗು ಸಿಬ್ಬಂದಿ ಹಾಜರಿದ್ದರು.ಫೋಟೋ: 1 ಹೆಚ್‌ಎಸ್‌ಕೆ 1
ಹೊಸಕೋಟೆ ತಾಲೂಕಿನ ದೊಡ್ಡಘಟ್ಟಿಗನಬ್ಬೆ ಗ್ರಾಪಂ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಗ್ರಾಪಂ ಅಧ್ಯಕ್ಷ ಪೂಜೇನ ಅಗ್ರಹಾರ ಸುರೇಶ್ ಧ್ವಜಾರೋಹಣ ನೆರವೇರಿಸಿದರು.