ಕನ್ನಡಪ್ರಭ ವಾರ್ತೆ, ತರೀಕೆರೆ
ಅರ್ಥಪೂರ್ಣ ಮತ್ತು ವೈಭವದಿಂದ 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಚರಿಸೋಣ ಎಂದು ಸಮ್ಮೇಳನ ಸ್ವಾಗತ ಸಮಿತಿ ಗೌರವ ಉಪಾಧ್ಯಕ್ಷ ಕನ್ನಡಶ್ರೀ ಬಿ.ಎಸ್.ಭಗವಾನ್ ಹೇಳಿದ್ದಾರೆ.ಸೋಮವಾರ ಚಿಕ್ಕಮಗಳೂರು ಜಿಲ್ಲಾ ಕಸಾಪದಿಂದ ಪಟ್ಟಣದ ಬಯಲು ರಂಗ ಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಮಂಟಪ ಪೂಜೆಯಲ್ಲಿ ಮಾತನಾಡಿ, ಎಲ್ಲರೂ ಸೇರಿ ಕನ್ನಡ ದೇವಿ ಪೂಜೆ ಸಲ್ಲಿಸಿ, ಒಟ್ಟಾಗಿ ಕಾರ್ಯನಿರ್ವಹಿಸಿ ಸಮ್ಮೇಳನ ಯಶಸ್ವಿಗೊಳಿಸೋಣ ಎಂದರು.
ತಾಲೂಕು ಕಸಾಪ ಅಧ್ಯಕ್ಷ ರವಿದಳವಾಯಿ ಮಾತನಾಡಿ ತರೀಕೆರೆಯಲ್ಲಿ 1967ರಲ್ಲಿ ಅಖಿಲ ಭಾರತ ಜಾನಪದ ಸಮ್ಮೇಳನ ನಡೆದಿತ್ತು. ತರೀಕೆರೆಗೆ ವಿಶಿಷ್ಟ ಸ್ಥಾನ ಇದೆ ಎಂದು ಹೇಳಿದರು.ಶಾಸಕ ಜಿ.ಎಚ್.ಶ್ರೀನಿವಾಸ್, ಉಪ ವಿಭಾಗಾಧಿಕಾರಿ ಡಾ.ಕೆ.ಜಿ.ಕಾಂತರಾಜ್ ಸಮ್ಮೇಳನಕ್ಕೆ ಬೆನ್ನೆಲುಬಾಗಿದ್ದಾರೆ. ಕಡೂರು, ಎನ್.ಆರ್.ಪುರ ಸೇರಿ ಜಿಲ್ಲೆಯ ವಿವಿಧ ಭಾಗಗಳಿಂದ ಎಲ್ಲಾ ಅಧಿಕಾರಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಜಿಲ್ಲಾ ಕಸಾಪ ಸಂಘಟನಾ ಕಾರ್ಯದರ್ಶಿ ನವೀನ್ ಪೆನ್ನಯ್ಯ ಮಾತನಾಡಿ ತರೀಕೆರೆಯಲ್ಲಿ 1967ರಲ್ಲಿ ಅಖಿಲ ಭಾರತ ಜಾನಪದ ಸಮ್ಮೇಳನ ಅದ್ಧೂರಿಯಾಗಿ ನಡೆದು ಯಶಸ್ವಿಯಾಗಿದೆ. ಅದೇ ರೀತಿ ಈಬಾರಿ ಸಮ್ಮೇಳನ ಯಶಸ್ವಿಯಾಗಿಸೋಣ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅನಂತಪ್ಪ ಮಾತನಾಡಿ ಹಲವಾರು ವರ್ಷಗಳ ನಂತರ ತರೀಕೆರೆಯಲ್ಲಿ 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಇದು ನಮ್ಮ ಮನೆ ಕೆಲಸ ಎಂದು ತಿಳಿದು ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು.ಶಿಕ್ಷಕ ಎಸ್.ಟಿ.ತಿಪ್ಪೇಶಪ್ಪ, ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಸುನಿತ ಕಿರಣ್ ಕುಮಾರ್, ಉಪನ್ಯಾಸಕ ದಾದಾಪೀರ್, ಕಸಾಪ ಹಿರಿಯ ಸದಸ್ಯ ಕೆ.ಎಸ್.ಶಿವಣ್ಣ, ಲೇಖಕ ತ.ಮ.ದೇವಾನಂದ್, ನಾಗೇನಹಳ್ಳಿ ತಿಮ್ಮಯ್ಯ, ಮಂಜುನಾಥ್, ಗಿರೀಶ್ ಚವ್ಹಾಣ್, ಕ್ರೀಸ್ತ ದಯಾಕುಮಾರ್, ಟಿ.ಸಿ.ದರ್ಶನ್, ಜಯಸ್ವಾಮಿ, ಟಿ.ಎನ್.ಲೋಕೇಶ್, ಲೋಕೇಶ್, ಲತಾ ಗೋಪಾಲಕೃಷ್ಣ ಭಾಗವಹಿಸಿದ್ದರು.3ಕೆಟಿಆರ್.ಕೆ.4ಃ ತರೀಕೆರೆಯಲ್ಲಿ ಜಿಲ್ಲಾ ಕಸಾಪದಿಂದ 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮಂಟಪದ ಪೂಜೆ ನಡೆಸಲಾಯಿತು.ಕನ್ನಡಶ್ರೀ ಬಿ.ಎಸ್.ಭಗವಾನ್, ತಾ.ಕಸಾಪ ಅಧ್ಯಕ್ಷ ರವಿದಳವಾಯಿ, ಸಂಘಟನಾ ಕಾರ್ಯದರ್ಶಿ ನವೀನ್ ಪೆನ್ನಯ್ಯ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಅನಂತಪ್ಪ ಮತ್ತಿತರರು ಇದ್ದರು.