ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಚೋದನೆ ಮಾಡುವವರ ಮೇಲೆ ಸರ್ಕಾರದ ಸೂಚನೆ ಮೇರೆಗೆ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ. ಆದರೆ ಕೋಮುವಾದ ಬಿತ್ತುವ ಮತಗ್ರಂಥಗಳ ಮೇಲೆ ಯಾವಾಗ ಕ್ರಮ ಕೈಗೊಳ್ಳುತ್ತೀರಿ? ತಾಕತ್ತಿದ್ದರೆ ಮತಗ್ರಂಥಗಳ ವಿರುದ್ದ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲಿ. ಕಮ್ಯೂನಲ್ ಎನ್ನುವುದು ಭಾರತದ ಗ್ರಂಥಗಳಲ್ಲೇ ಇಲ್ಲ. ಆದರೆ ಪರಕೀಯ ಮತಗ್ರಂಥಗಳಲ್ಲಿ ಅದರ ಉಲ್ಲೇಖ ಇದೆ, ಅವುಗಳ ಮೇಲೆ ಕ್ರಮ ಕೈಗೊಳ್ಳಿ ಎಂದರು. ಮತಗ್ರಂಥಗಳಲ್ಲಿ ಕಾಫಿರರನ್ನು ಕೊಲ್ಲಿ ಎನ್ನುತ್ತಾರೆ. ಅದರ ಮೇಲೆ ಕ್ರಮ ಕೈಗೊಂಡರೆ ಜಗತ್ತಿನಲ್ಲೇ ಶಾಂತಿ ನೆಲೆಸುತ್ತದೆ. ಅದು ಬಿಟ್ಟು ಕಾಂಗ್ರೆಸ್ ಮತ ಬ್ಯಾಂಕ್ ರಾಜಕಾರಣ ಮಾಡಬಾರದು. ಮತೀಯ ಭಾವ ಬಿತ್ತುವ ಮತ ಗ್ರಂಥಗಳನ್ನು ನಿಷೇಧಿಸುವ ಧೈರ್ಯ ರಾಜ್ಯ ಸರ್ಕಾರಕ್ಕೆ ಇದೆಯಾ ಎಂದು ಪ್ರಶ್ನಿಸಿದರು.
ಸಂಘರ್ಷದ ಮೂಲ ಪತ್ತೆ ಮಾಡಿ:ಸೋಮವಾರ ಮಂಗಳೂರಿಗೆ ಬಿಜೆಪಿ ನಿಯೋಗ ಆಗಮಿಸಲಿದೆ. ದ. ಕ. ಜಿಲ್ಲೆಗೆ ಭೇಟಿ ನೀಡಿ ಸುಹಾಸ್ ಶೆಟ್ಟಿ ಹತ್ಯೆ, ರೆಹಮಾನ್ ಹತ್ಯೆ ಹಾಗೂ ಸರಣಿ ಘಟನೆಗಳ ಅಧ್ಯಯನ ನಡೆಸಲಿದೆ. ಜಿಲ್ಲೆಯಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ವಿಪಕ್ಷ ನಿಯೋಗ ಬರಲಿದೆ. ಜಿಲ್ಲೆಯಲ್ಲಿ ಶಾಂತಿ ನೆಲೆಸಲೇ ಬೇಕು, ಇತ್ತೀಚೆಗೆ ಕಾಂಗ್ರೆಸ್‌ನ ಹರಿಪ್ರಸಾದ್ ಹಾಗೂ ನಾಸಿರ್ ನೇತೃತ್ವದ ನಿಯೋಗ ಕೂಡ ಶಾಂತಿ ಪ್ರಸ್ತಾಪನೆ ಮಾಡಿದ್ದಾರೆ. ನಾಸಿರ್ ಹುಸೇನ್ ವರದಿ ಎಷ್ಟು ಪ್ರಾಮಾಣಿಕ ವರದಿಯಾಗಿರುತ್ತದೆ ಎನ್ನುವ ಸಂಶಯ ಇದೆ. ನಾಸಿರ್ ರಾಜ್ಯಸಭೆಗೆ ಆಯ್ಕೆಯಾದಾಗ ವಿಧಾನ ಸೌಧದಲ್ಲೇ ಪಾಕಿಸ್ತಾನ ಜಿಂದಾಬಾದ್ ಎಂದು ಬೆಂಬಲಿಗರು ಘೋಷಣೆ ಕೂಗಿದ್ದರು ಎಂದರು.
ಇವರಿಗೆ ಹಣದ ಮೂಲ ಯಾವುದು?:
ಕಾಂಗ್ರೆಸ್ ಸರ್ಕಾರ ದಿನನಿತ್ಯ ಹಗರಣ ಮಾಡುತ್ತಿದೆ. ಒಂದು ಹಗರಣ ಇನ್ನೊಂದು ಹಗರಣವನ್ನು ಬದಿಗೆ ಸರಿಸುತ್ತಿದೆ. ಸಂವೇದನೆ, ನೈತಿಕತೆ ಹೊತ್ತಿಕೊಳ್ಳಬೇಕಾದವರು ಹೊತ್ತಿಕೊಳ್ಳೋದಿಲ್ಲ. ಈಗ ಹಗರಣವನ್ನೇ ಜೀರ್ಣಿಸುವಷ್ಟು ಶಕ್ತಿ ಕಾಂಗ್ರೆಸ್‌ಗೆ ಇದೆ ಎಂದು ಸಿ.ಟಿ. ರವಿ ಲೇವಡಿ ಮಾಡಿದರು.
--------------------ಆರ್‌ಸಿಬಿ ಸನ್ಮಾನ ಆಯೋಜಿಸಿದ್ದು ಕಮಿಷನರ್!ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಅಮಾನತಿನ ಬಗ್ಗೆ ಸಿ.ಟಿ.ರವಿ ವ್ಯಂಗ್ಯವಾಡಿದರು. ವಿಧಾನಸೌಧದಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜನೆ ಮಾಡಿದ್ದು ಬೆಂಗಳೂರು ಕಮೀಷನರ್, ಸರ್ಕಾರ ರಾಜಕೀಯ ಲಾಭ ತೆಗೆದುಕೊಳ್ಳಬೇಕು ಎನ್ನುವುದು ಕಮೀಷನರ್ ಆಸೆಯಾಗಿತ್ತು. ಕ್ರಿಕೆಟ್ ಆಟಗಾರರ ಜೊತೆ ಕಾಂಗ್ರೆಸ್ ಪಕ್ಷದ ಮುಖಂಡರ ಮಕ್ಕಳು, ಮೊಮ್ಮಕ್ಕಳು ಸೆಲ್ಫಿ ತೆಗೆದುಕೊಳ್ಳಲಿ ಎಂದು ಕಮಿಷನರ್ ವ್ಯವಸ್ಥೆ ಮಾಡಿದ್ರು. ಹೀಗೆ ಕಮಿಷನರ್‌ರೇ ಎಲ್ಲವನ್ನೂ ಸಂಘಟಿಸಿದಂತೆ ಸರ್ಕಾರ ಅವರ ಮೇಲೆ ಕ್ರಮ ಕೈಗೊಂಡಿದೆ ಎಂದು ಸಿ.ಟಿ. ರವಿ ಆರೋಪಿಸಿದರು.
ಶಾಸಕ ವೇದವ್ಯಾಸ್ ಕಾಮತ್, ಮುಖಂಡರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ಸಂತೋಷ್, ರಾಜಗೋಪಾಲ ರೈ, ಮನೋಹರ ಶೆಟ್ಟಿ, ಶೈಲೇಶ್, ಅರುಣ್ ಶೇಟ್ ಇದ್ದರು.