ದಾಬಸ್‍ಪೇಟೆ: ಆಹಾರ ಪದ್ಧತಿ ಬದಲಾದಂತೆ, ರೋಗಗಳೂ ಹೆಚ್ಚಾಗುತ್ತಿವೆ. ಸ್ವದೇಶಿ ಮತ್ತು ಪಾರಂಪರಿಕ ಗ್ರಾಮೀಣ ಆಹಾರ ಪದ್ಧತಿ ಅಳವಡಿಸಿಕೊಳ್ಳಿ ಎಂದು ಪವಾಡ ಬಸವಣ್ಣದೇವರ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ಚಿಲುಮೆ ಟ್ರಸ್ಟ್ ನ ಮುಖ್ಯಸ್ಥ ರವಿಕುಮಾರ್ ಮಾತನಾಡಿ, ಸ್ವಗ್ರಾಮದಲ್ಲಿ ಸಮಾಜಮುಖಿ ಕಾರ್ಯಕ್ಕೆ ಬೆಂಬಲವಾಗಿ ನಿಂತ ಎಲ್ಲಾ ಸ್ವಯಂ ಸೇವಕರಿಗೆ ಧನ್ಯವಾದಗಳು. ಮುಂದಿನ ದಿನಗಳಲ್ಲಿ ಸಾರ್ವಜನಿಕರ ಸೇವೆಯೇ ನನ್ನ ಗುರಿ ಎಂದರು.
ಕಿಸಾನ್ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಸರಘಟ್ಟ ಗಂಗಾಧರ್, ಪ್ರೆಸ್ ಕ್ಲಬ್ ರಾಜ್ಯ ಘಟಕದ ಆರ್.ಕೊಟ್ರೇಶ್, ವೀರಸಾಗರ ಗಂಗರುದ್ರಯ್ಯ, ಆರ್.ಎಸ್.ಎಸ್. ಚಂದ್ರಣ್ಣ, ಮುಖಂಡರಾದ ಭಾರತೀಪುರ ಕೆಂಪಣ್ಣ, ಗಂಗಣ್ಣ, ಚಂದ್ರಪ್ಪ, ಚಂದ್ರಶೇಖರ್, ಐಶ್ವರ್ಯ ರವಿಕುಮಾರ್, ಕೋಮಲ, ಅರೇಬೊಮ್ಮನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ರಂಗಸ್ವಾಮಿ ಹಾಜರಿದ್ದರು.(ಫೋಟೊ ಕ್ಯಾಫ್ಷನ್)
ಕೆಂಪಯ್ಯನಪಾಳ್ಯ) ಚಿಲುಮೆ ರವಿಕುಮಾರ್ ಫೌಂಡೇಶನ್, ಆರೋಗ್ಯ ವರ್ಧಕ ಹೃದಯ ರಕ್ಷಾ ಸಂಜೀವಿನಿ ಲಡ್ಡು ವಿತರಣೆ, ರೈತರಿಗೆ ಸನ್ಮಾನ ಕಾರ್ಯಕ್ರಮಕ್ಕೆ ಸಿದ್ಧಲಿಂಗ ಸ್ವಾಮೀಜಿ ಚಾಲನೆ ನೀಡಿದರು.