ಮೌಢ್ಯ ತೊಡೆದು ಸುಜ್ಞಾನದ ಕಡೆಗೆ ಸಾಗೋಣ: ನಿವೃತ ನ್ಯಾಯಾದೀಶ ಎಚ್.ಬಿಲ್ಲಪ್ಪ

KannadaprabhaNewsNetwork | Published : Nov 11, 2023 1:15 AM

ಸಾರಾಂಶ

ಹೊಸದುರ್ಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಾಗಾರ

ಕನ್ನಡಪ್ರಭ ವಾರ್ತೆ ಹೊಸದುರ್ಗ

ಸಮಾಜದಲ್ಲಿ ಅಸ್ಪ್ಋಶ್ಯತೆ ಮೌಢ್ಯ ತುಂಬಿ ತುಳುಕುತಿದೆ. ಇವುಗಳನ್ನೆಲ್ಲ ಹೋಗಲಾಡಿಸಲು ನಾವು ಜ್ಞಾನದ ಕಡೆಗೆ ಹೋಗುವುದು ಅತ್ಯಂತ ಅವಶ್ಯಕ. ಎಲ್ಲಿ ಜ್ಞಾನ ಅರಿವು ಇರುತ್ತದೋ ಅಲ್ಲಿ ಸುಜ್ಞಾನದ ಹಾದಿ ಹಸನಾಗಿರುತ್ತದೆ ಎಂದು ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶ ಎಚ್ ಬಿಲ್ಲಪ್ಪ ರವರು ತಿಳಿಸಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಮಡಿಲು ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಗಾರಕ್ಕೆ ಚಾಲನೆ ನೀಡಿ ಮಾತನಾಡಿ, ಮೊದಲು ನಾವು ಜ್ಞಾನವಂತರಾಗಿ ಸಮಾಜದ ಪಿಡುಗುಗಳನ್ನು ತೊಡೆದು ಹಾಕಿದರೆ ಸುಜ್ಞಾನದ ದಾರಿ ದೊರೆಯುತ್ತದೆ ಎಂದರುದೇಶದಲ್ಲಿ ಪೋಕ್ಸೋ ಕಾಯ್ದೆ ಬರದೇ ಇದ್ದಿದ್ದರೆ ಅದೆಷ್ಟು ಮಕ್ಕಳ ಭವಿಷ್ಯ ಹಾಳಾಗುತ್ತಿತ್ತು. ಭಾರತ ಸಂವಿಧಾನದ ಅಡಿಯಲ್ಲಿ ಪೋಕ್ಸೋ ಕಾಯ್ದೆ ವಿಶೇಷ ಸ್ಥಾನಮಾನವನ್ನು ನೀಡಿ ಮಕ್ಕಳ ಅಭಿವೃದ್ಧಿಗೆ ಸಹಕಾರ ನೀಡಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳನ್ನು ತಪ್ಪಿಸುವ ಸಲುವಾಗಿ ಕಾನೂನನ್ನು ಮಾಡಲಾಗಿದೆ ಅಂತಹ ಕಾನೂನಿನ ಭದ್ರತೆಯಿಂದಲೇ ಮಕ್ಕಳಿಗೆ ನ್ಯಾಯ ದೊರಕುತ್ತಿದೆ ಎಂದರು.ಭಾರತ ದೇಶದ ಸಂವಿಧಾನ ಒಂದು ಧರ್ಮವಾದರೆ ಅದನ್ನು ನಾವು ಅನುಸರಿಸಿ ಬದುಕಿದರೆ ಉತ್ತಮ ಸಮಾಜವನ್ನು ಕಟ್ಟಬಹುದು, ನಮ್ಮ ನಡವಳಿಕೆಗಳು ಚೆನ್ನಾಗಿದ್ದರೆ ನಮ್ಮ ಹೆಸರು ಕೂಡ ಶಾಶ್ವತವಾಗಿ ಉಳಿಯುತ್ತದೆ. ನಮ್ಮ ಹೆಸರು ದೇಶದ ಪುಟ್ಟಗಳಲ್ಲಿ ಉಳಿಯಬೇಕಾದರೆ ಉತ್ತಮ ಸಾಧನೆಗಳ ಮೂಲಕ ನಮ್ಮ ಹೆಸರುಗಳನ್ನು ನಾವು ಉನ್ನತ ಮಟ್ಟದಲ್ಲಿ ಕಾಣಬಹುದು ಎಂದು ತಿಳಿಸಿದರು.ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿ ಬಸವರಾಜ್ ವಿದ್ಯಾರ್ಥಿಗಳಿಗಾಗಿ ಟ್ರಾಫಿಕ್ ನಿಯಮಾವಳಿಗಳ ಕುರಿತು ಮಾತನಾಡಿ, ಇವತ್ತಿನ ಯುಗದಲ್ಲಿ ಯುವಕರು ಅತಿ ಹೆಚ್ಚಾಗಿ ಬೈಕ್ ವೀಲಿಂಗ್ ಮಾಡುವುದರ ಮೂಲಕ ತಮ್ಮ ಪ್ರಾಣಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಅಂತಹ ಅಪಾಯಕಾರಿ ಆಟಗಳನಾಡುವುದನ್ನು ನಿಲ್ಲಿಸಬೇಕು. ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಸಂಚರಿಸಿದರೆ ನಮ್ಮ ಪ್ರಾಣಕ್ಕೆ ಆಪತ್ತು ಎದುರಾಗುತ್ತದೆ ಎಂದು ತಿಳಿಸಿದರು.ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಅಪರಾಧ. ಮೊಬೈಲ್ ಬಳಸಿಕೊಂಡು ದ್ವಿಚಕ್ರ ವಾಹನಗಳು ಚಲಾಯಿಸುವುದು ಪ್ರಾಣಕ್ಕೆ ಆಪತ್ತು ತಂದಂತೆ. ಇದರ ಜೊತೆಗೆ ಫ್ಯಾಷನ್ ಅಭಿವೃದ್ಧಿಗಾಗಿ ಬೈಕಿನಲ್ಲಿ ಧೂಮಪಾನ ಮಾಡುತ್ತಾ ಓಡಾಡುವುದು ಅಪಾಯಕ್ಕೆ ಆಹ್ವಾನ ಮಾಡಿಕೊಟ್ಟಂತೆ ಎಂದರು.ಕೌಶಲ್ಯ ತರಬೇತಿ ವಿಚಾರ ಕುರಿತು ಎಂ.ಕೆ.ಹರೀಶ್ ಅವರು ಮಾತನಾಡಿ, ವಿದ್ಯಾರ್ಥಿಯ ಜೀವನದಲ್ಲಿ ಕ್ರೀಡೆ ಸಾಹಿತ್ಯ ಜಾನಪದ ಇತರೆ ಕ್ಷೇತ್ರಗ ಳಲ್ಲಿ ತೊಡಗಿಕೊಳ್ಳುವ ಬದಲಿಗೆ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಬೇಸರದ ವಿಚಾರವಾಗಿದೆ ಎಂದರು ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಭ್ರಮರಾಂಬಾ, ಮಡಿಲು ಗ್ರಾಮೀಣ ಮತ್ತು ನಗರ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಕುಮಾರಸ್ವಾಮಿ, ಪತ್ರಕರ್ತ ಸಿಎನ್ ಕುಮಾರ್, ಉಪಾಧ್ಯಕ್ಷರಾದ ಕಿರಣ್ ಕಾರ್ಯದರ್ಶಿ ಆನಂದ್.ಡಿ, ನಿರ್ದೇಶಕರು ಗಳಾದ ಪ್ರದೀಪ್ ದ್ಯಾಮ ಕುಮಾರ್, ಪ್ರವೀಣ್, ಅಭಿಷೇಕ್, ಕಾಲೇಜಿನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಫೋಟೋ 10 ಎಚ್ ಎಸ್ ಡಿ 6: ಹೊಸದುರ್ಗ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮವನ್ನು ನಿವೃತ್ತ ಹೈಕೋರ್ಟ್ ನ್ಯಾಯಾಧೀಶ ಎಚ್ ಬಿಲ್ಲಪ್ಪ ಉದ್ಘಾಟಿಸಿದರು

Share this article