ಬಸವ ಸಂಸ್ಕೃತಿ ಅಭಿಯಾನ ಅರ್ಥಪೂರ್ಣವಾಗಿಸೋಣ

KannadaprabhaNewsNetwork |  
Published : Aug 19, 2025, 01:01 AM IST
ವಿಜಯಪುರ ನಗರದ ಮನಗೂಳಿ ರಸ್ತೆಯಲ್ಲಿರುವ ಗದುಗಿನ ತೋಂಟದಾರ್ಯ ಮಠದ ಸಭಾಂಗಣದಲ್ಲಿ ಬಸವ ಸಂಸ್ಕೃತಿ ಅಭಿಯಾನದ ಪ್ರಥಮ ಪೂರ್ವಭಾವಿ ಸಭೆಯಲ್ಲಿ ಬಸವನಬಾಗೇವಾಡಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿದರು. | Kannada Prabha

ಸಾರಾಂಶ

ಸೆ.1ರಿಂದ ಬಸವ ಜನ್ಮಸ್ಥಳ ಬಸವನಬಾಗೇವಾಡಿಯಲ್ಲಿ ಆರಂಭವಾಗುವ ಬಸವ ಸಂಸ್ಕೃತಿ ಅಭಿಯಾನವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಯಶಸ್ವಿಗೊಳಿಸೋಣ.

ಕನ್ನಡಪ್ರಭ ವಾರ್ತೆ ವಿಜಯಪುರ

ಸೆ.1ರಿಂದ ಬಸವ ಜನ್ಮಸ್ಥಳ ಬಸವನಬಾಗೇವಾಡಿಯಲ್ಲಿ ಆರಂಭವಾಗುವ ಬಸವ ಸಂಸ್ಕೃತಿ ಅಭಿಯಾನವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಯಶಸ್ವಿಗೊಳಿಸೋಣ. ರಾಜ್ಯಾದ್ಯಂತ ಈ ಅಭಿಯಾನ ನಡೆಯುತ್ತಿದೆ ಎಂದು ಬಸವನಬಾಗೇವಾಡಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ನಗರದ ಮನಗೂಳಿ ರಸ್ತೆಯಲ್ಲಿರುವ ಗದುಗಿನ ತೋಂಟದಾರ್ಯ ಮಠದ ಸಭಾಂಗಣದಲ್ಲಿ ಬಸವ ಸಂಸ್ಕೃತಿ ಅಭಿಯಾನದ ಪ್ರಥಮ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಪ್ರಾರಂಭೋತ್ಸವ ಜವಾಬ್ದಾರಿಯನ್ನು ಸಚಿವ ಶಿವಾನಂದ ಪಾಟೀಲ ವಹಿಸಲಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಕ್ಟೋಬರ್‌ ತಿಂಗಳಲ್ಲಿ ನಡೆಯುವ ಸಮಾರೋಪ ಸಮಾರಂಭದ ಜವಾಬ್ದಾರಿಯನ್ನು ಸಚಿವ ಡಾ.ಎಂ.ಬಿ ಪಾಟೀಲ ವಹಿಸಿಕೊಂಡಿದ್ದು ಸಂತೋಷದ ವಿಷಯ ಎಂದರು.

ಅಥಣಿಯ ತಾಲೂಕಿನ ಡಾ.ಮಹಾಂತಪ್ರಭು ಸ್ವಾಮೀಜಿ ಮಾತನಾಡಿ, ಪ್ರತಿ ಗ್ರಾಮದಿಂದ ಬಸವ ಭಕ್ತರು ಸೇರಿದಂತೆ ಎಲ್ಲರೂ ಸಂಸ್ಕೃತಿ ಅಭಿಯಾನದಲ್ಲಿ ಭಾಗವಹಿಸುವಂತೆ ಪ್ರಚಾರಮಾಡುವುದು ಅವಶ್ಯ ಎಂದರು. ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ವಿ.ಸಿ.ನಾಗಠಾಣ ಮಾತನಾಡಿ, ಬಸವಪ್ರಜ್ಞೆಯನ್ನು ಈ ಅಭಿಯಾನದ ಮೂಲಕ ಹರಡಿಸೋಣ. ಬಹುಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಸಾಂಸ್ಕೃತಿಕ ನಾಯಕ ಬಸವಣ್ಣನವರ ವಿಚಾರ ಧಾರೆಗಳನ್ನು ಬಿತ್ತರಿಸೋಣ ಎಂದರು.

ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾ ಘಟಕದ ಅಧ್ಯಕ್ಷ ಬಸನಗೌಡ ಹರನಾಳ ಮಾತನಾಡಿ, ಬಸವಾಭಿಮಾನಿಗಳು ಅಭಿಯಾನದ ಜವಾಬ್ದಾರಿಯುತ ವಹಿಸಿಕೊಂಡು ಕಾರ್ಯ ನಿರ್ವಹಿಸಬೇಕು. ಪೂಜ್ಯರು, ಗಣ್ಯರು ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುವ ಬಸವ ಭಕ್ತರಿಗೆ ಸಂಪೂರ್ಣ ವ್ಯವಸ್ಥೆ ಕಲ್ಪಿಸಬೇಕು ಎಂದರು. ಬಸವನಬಾಗೇವಾಡಿಯ ಮುಖಂಡ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಸಚಿವ ಶಿವಾನಂದ ಪಾಟೀಲ ಮಾರ್ಗದರ್ಶನದಲ್ಲಿ ನಿರಂತರ ಸಭೆಗಳನ್ನು ನಡೆಸುತ್ತಿದ್ದೇವೆ. ಸಕಲ ಸಿದ್ಧತೆ ಭರದಿಂದ ಸಾಗಿದೆ. ಬಸವಾಭಿಮಾನಿಗಳ ಬರುವಿಗಾಗಿ ಬಸವನಬಾಗೇವಾಡಿ ಉತ್ಸುಕತೆಯಿಂದ ಕಾಯುತ್ತಿದೆ ಎಂದರು.

ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಜಂಬುನಾಥ ಕಂಚಾಣಿ, ಕಸಾಪ ಜಿಲ್ಲಾ ಗೌರವ ಕೋಶಾಧ್ಯಕ್ಷ ಅಭಿಷೇಕ ಚಕ್ರವರ್ತಿ, ಲಿಂಗಾಯತ ಪಂಚಮಸಾಲಿ ಜಿಲ್ಲಾಧ್ಯಕ್ಷ ಬಿ.ಎಂ.ಪಾಟೀಲ, ನೇಕಾರ ಸಂಘದ ಅಧ್ಯಕ್ಷ ಬಿ.ಎಂ ಮೂಲಿನಿ, ಹರಳಯ್ಯ ಸಮಾಜದ ಮುಖಂಡ ಅಶೋಕ ಸೌದಾಗರ, ವೀರಶೈವ ಮಹಾಸಭಾದ ಉಪಾಧ್ಯಕ್ಷ ವಿದ್ಯಾವತಿ ಅಂಕಲಗಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ದೇವರಹಿಪ್ಪರಗಿ ಗದಗಿನಮಠ ಮಹಾಂತ ಸ್ವಾಮೀಜಿ, ಡಾ.ರವಿಕುಮಾರ ಬಿರಾದಾರ, ಮಹಾದೇವಿ ಗೋಕಾಕ, ಸುಜಾತಾ ಕಳ್ಳಿಮನಿ, ಶಶಿಕಲಾ ಕೋಟಗಿ, ಸಿದ್ರಾಮಯ್ಯ ಲಕ್ಕುಂಡಿಮಠ, ಡಾ.ಮಿನಾಕ್ಷಿ ಪಾಟೀಲ, ಖಾಜಾಮೈನುದ್ದೀನ್ ಪಾಟೀಲ, ಶಿವಲಿಂಗ ಕಲಬುರ್ಗಿ, ಎಫ್.ಡಿ.ಮೇಟಿ, ಶಿವಲಿಂಗ ನಾಶಿ, ಎ.ಬಿ.ಮರ್ತೂರ, ಆರ್‌.ಜಿ.ಅಳ್ಳಗಿ, ಪ್ರೊ.ಬಿ.ಎಂ.ಬಿರಾದಾರ, ಎಂ.ಎಸ್‌. ಝಳಕಿ, ಎಸ್.ಬಿ.ಅವಜಿ, ಪ್ರಭುಗೌಡ ಪಾಟೀಲ, ಅಂಬಿಕಾ ಪಾಟೀಲ, ರಾಧಾ ಬಡಿಗೇರ, ಎನ್.ಕೆ.ಕುಂಬಾರ ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬ್ಯಾಲೆಟ್‌ನಲ್ಲಿ ಮತದಾನ ನಡೆಸಿದರೆ ತಪ್ಪೇನು? ರಾಜ್ಯ ಚುನಾವಣಾ ಆಯುಕ್ತ
ಜಾಗತಿಕ ಸವಾಲಿಗೆ ನವೋದ್ಯಮ ಉತ್ತರ : ರಾಧಾಕೃಷ್ಣನ್‌