ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸೋಣ: ಬಿ.ಎಸ್. ಬಾಳೇಶ್ವರಮಠ

KannadaprabhaNewsNetwork |  
Published : Feb 04, 2026, 02:45 AM IST
ಪೊಟೋ=ಲಕ್ಷ್ಮೇಶ್ವರ ಪಟ್ಟಣದಲ್ಲಿ ಶನಿವಾರ ಸಂಜೆ ನಡೆದ ಕಸಾಪ ಸಭೆಯಲ್ಲಿ ನಿವೃತ್ತ ಶಿಕ್ಷನ ಸಿ.ಜಿ.ಹಿರೇಮಠ ಮಾತನಾಡಿದರು.  | Kannada Prabha

ಸಾರಾಂಶ

ಯಳವತ್ತಿಯ ಶಿಕ್ಷಕ ಆರ್.ಎಸ್. ಗಾಣಿಗೇರ ಮಾತನಾಡಿ, ಗ್ರಾಮದ ಹಿರಿಯರು, ಯುವಕರು, ಸಾಹಿತ್ಯಭಿಮಾನಿಗಳು, ಸರ್ವರೂ ಸೇರಿ ಪ್ರತಿದಿನ ಸಮ್ಮೇಳನಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದರು.

ಲಕ್ಷ್ಮೇಶ್ವರ: ತಾಲೂಕಿನ ಇತಿಹಾಸ ಪ್ರಸಿದ್ಧ ಪುರಾತನ ಕೋಟೆ ಗ್ರಾಮ ಯಳವತ್ತಿ ಗ್ರಾಮದಲ್ಲಿ ಫೆ. 14ರಂದು ನಡೆಯುವ ತಾಲೂಕು ೨ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಎಲ್ಲರೂ ಸೇರಿ ಯಶಸ್ವಿಗೊಳಿಸೋಣ. ಕವಿಗೋಷ್ಠಿ, ಉಪನ್ಯಾಸಗಳಂತಹ ಕಾರ್ಯಗಳಲ್ಲಿ ಹೊಸಬರಿಗೆ ಅವಕಾಶ ನೀಡೋಣ ಎಂದು ಹಿರಿಯ ಸಾಹಿತಿ, ವಕೀಲ ಬಿ.ಎಸ್. ಬಾಳೇಶ್ವರಮಠ ತಿಳಿಸಿದರು.

ಶನಿವಾರ ಸಂಜೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಆಜೀವ ಸದಸ್ಯರು, ಹಿರಿಯರು, ಸಾಹಿತಿಗಳು, ಸಾಹಿತ್ಯಾಭಿಮಾನಿಗಳು, ಕನ್ನಡಪರ ಸಂಘಟನೆಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಯಳವತ್ತಿಯ ಶಿಕ್ಷಕ ಆರ್.ಎಸ್. ಗಾಣಿಗೇರ ಮಾತನಾಡಿ, ಗ್ರಾಮದ ಹಿರಿಯರು, ಯುವಕರು, ಸಾಹಿತ್ಯಭಿಮಾನಿಗಳು, ಸರ್ವರೂ ಸೇರಿ ಪ್ರತಿದಿನ ಸಮ್ಮೇಳನಕ್ಕಾಗಿ ಶ್ರಮಿಸುತ್ತಿದ್ದಾರೆ. ಯಳವತ್ತಿ ಗ್ರಾಮಕ್ಕೆ ಅಗತ್ಯವಾಗಿರುವ ಕೆಲವು ಅಂಶಗಳನ್ನು ಸಮ್ಮೇಳನದ ಮೂಲಕ ಒತ್ತಾಯಿಸುವಂತಾಗಬೇಕು. ಕನ್ನಡ ತೇರನ್ನು ಎಳೆಯಲು ಯಳವತ್ತಿ ಗ್ರಾಮ ಸಜ್ಜಾಗುತ್ತಿದೆ ಎಂದರು.

ಸಾಹಿತಿ ಹಾಗೂ ಒಡೆಯರ ಮಲ್ಲಾಪುರ ಮೊರಾರ್ಜಿ ದೇಸಾಯಿ ವಸತಿಶಾಲೆಯ ಪ್ರಾಚಾರ್ಯ ನಾಗರಾಜ ಕಳಸಾಪುರ ಮಾತನಾಡಿ, ಕನ್ನಡದ ತೇರನ್ನು ಎಳೆಯುವ ಕನ್ನಡದ ಹಬ್ಬಕ್ಕೆ ನಾವೆಲ್ಲರೂ ಕೂಡ ತನು- ಮನ- ಧನದೊಂದಿಗೆ ಸಹಕರಿಸಿ ಸಂಭ್ರಮಿಸೋಣ ಎಂದರು.

ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗರಾಜ ಹಣಗಿ ಮಾತನಾಡಿ, ಗೋಷ್ಠಿಯಲ್ಲಿ ಮಕ್ಕಳ ಸಾಹಿತ್ಯ ಗೋಷ್ಠಿ ಇರಲಿ ಎಂದು ಸಲಹೆ ನೀಡಿದರು.

ಹಿರಿಯ ಸಾಹಿತಿಗಳಾದ ಸಿ.ಜಿ. ಹಿರೇಮಠ, ಕೊತ್ತಲ ಮಹದೇವಪ್ಪ, ಎಸ್.ಎಫ್. ಆದಿ, ಕೆ.ಎಸ್. ಕೊಡ್ಲಿವಾಡ, ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಶರಣು ಗೋಡಿ, ಕರಾವಿಪ ಜಿಲ್ಲಾಧ್ಯಕ್ಷ ರಮೇಶ ರಿತ್ತಿ, ತಾಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ನಿರ್ಮಲಾ ಅರಳಿ, ಪುರಸಭಾ ಮಾಜಿ ಅಧ್ಯಕ್ಷೆ ಅಶ್ವಿನಿ ಅಂಕಲಕೋಟಿ, ರಫೀಕ್ ಕಲಬುರ್ಗಿ, ಸಾಹಿತಿ ಪ್ರೊ. ಸೋಮಶೇಖರ ಕೆರಿಮನಿ, ಶರಣಪ್ಪ ಆಲೂರ ಉಪಯುಕ್ತ ಸಲಹೆ ನೀಡಿದರು. ತಾಲೂಕು ಕಸಾಪ ಅಧ್ಯಕ್ಷ ಈಶ್ವರ ಮೆಡ್ಲೇರಿ ಮಾತನಾಡಿದರು.ಕಸಾಪ ಸಲಹಾ ಸಮಿತಿಯ ಎಸ್.ಎನ್. ಮಳಲಿ, ಎಸ್.ಬಿ. ಅಣ್ಣಿಗೇರಿ, ಪ್ರೌಢಶಾಲಾ ಶಿಕ್ಷಕರ ಸಂಘದ ಸಂಗಮೇಶ ಅಂಗಡಿ, ಜೆ.ಎಸ್. ರಾಮಶೆಟ್ರ, ಎಸ್.ಎಫ್. ಕೊಡ್ಲಿ, ಐ.ಎ. ಬಳಿಗಾರ, ಎಸ್.ವಿ. ಕನೋಜ, ಮಹಾಂತೇಶ ಬೇರಗಣ್ಣವರ, ಶಂಕರ ಶಿಳ್ಳಿನ, ರತ್ನಕ್ಕ ಕರ್ಕಿ, ಶಿವಾನಂದ ವಡಕಣ್ಣವರ, ಡಾ.ಶಿವಾನಂದ ಹೂವಿನ, ಗಂಗಾಧರ ಅರಳಿ, ಎಂ.ಕೆ. ಕಳ್ಳಿಮಠ, ಸೊಲಬಪ್ಪ ಸಜ್ಜನ, ಎನ್.ಬಿ. ತಳ್ಳಳ್ಳಿ, ಕೈಸರ್ ಮಹಮ್ಮದ್ ಅಲಿ, ಗಿರೀಶ ಸಜ್ಜನ ಭಾಗವಹಿಸಿದ್ದರು.

ಕಸಾಪ ತಾಲೂಕು ಘಟಕದ ಗೌರವ ಕಾರ್ಯದರ್ಶಿ ಮಂಜುನಾಥ ಚಾಕಲಬ್ಬಿ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ನಾಗರಾಜ ಮಜ್ಜಿಗುಡ್ಡ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ ರದ್ದು ಮಾಡಿ, ನರೇಗಾ ಮರುಸ್ಥಾಪಿಸಿ: ಸಿದ್ದು
ಸಚಿವ ತಿಮ್ಮಾಪುರ ರಾಜೀನಾಮೆಗೆ ಅಹೋರಾತ್ರಿ ಧರಣಿ