ತಾಳಿಕೋಟೆ ಸಮ್ಮೇಳನ ಯಶಸ್ವಿಗೊಳಿಸೋಣ

KannadaprabhaNewsNetwork | Published : Sep 29, 2024 1:48 AM

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ತಾಳಿಕೋಟಿಯಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನಕ್ಕೆ ಮುದ್ದೇಬಿಹಾಳ ತಾಲೂಕಿನ ಎಲ್ಲ ಸಾಹಿತ್ಯ ಪ್ರೇಮಿಗಳು, ವಿದ್ಯಾರ್ಥಿಗಳು, ಮಹಿಳೆಯರು, ಶಿಕ್ಷಕ ವೃಂದ, ರಾಜಕೀಯ ಗಣ್ಯರು ಸೇರಿದಂತೆ ಎಲ್ಲರು ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದು ಕಸಾಪ ತಾಲೂಕು ಅಧ್ಯಕ್ಷ ಕಾಮರಾಜ ಬಿರಾದಾರ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ತಾಳಿಕೋಟಿಯಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನಕ್ಕೆ ಮುದ್ದೇಬಿಹಾಳ ತಾಲೂಕಿನ ಎಲ್ಲ ಸಾಹಿತ್ಯ ಪ್ರೇಮಿಗಳು, ವಿದ್ಯಾರ್ಥಿಗಳು, ಮಹಿಳೆಯರು, ಶಿಕ್ಷಕ ವೃಂದ, ರಾಜಕೀಯ ಗಣ್ಯರು ಸೇರಿದಂತೆ ಎಲ್ಲರು ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದು ಕಸಾಪ ತಾಲೂಕು ಅಧ್ಯಕ್ಷ ಕಾಮರಾಜ ಬಿರಾದಾರ ಮನವಿ ಮಾಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸಂಜೆ ನಡೆದ ಸಾಹಿತಿಗಳ, ಗಣ್ಯರ ಸಭೆಯಲ್ಲಿ ಮಾತನಾಡಿ, ಎಲ್ಲೇ ಆಗಲಿ ಕನ್ನಡದ ತಾಯಿಯ ಸೇವೆ ಮಾಡುವ ಮೂಲಕ ಕನ್ನಡ ಉಳಿಸಿ ಬೆಳೆಸಬೇಕಾಗಿದೆ. ಮುದ್ದೇಬಿಹಾಳದಲ್ಲಿ ಮುಂದೆ ಕಸಾಪದಿಂದ ದತ್ತಿ, ಚುಟುಕು ಸೇರಿ ಅನೇಕ ಕನ್ನಡ ಸಾತ್ಯಾತ್ಮಾಕ ಕಾರ್ಯಕ್ರಮಗಳ ಹಮ್ಮಿಕೊಳ್ಳಲಾಗುವುದು. ಯುವ ಸಾಹಿತಿಗಳಿಗೆ ಪ್ರೋತ್ಸಾಹಿಸುವುದರಿಂದ ತಾಲೂಕಿನಲ್ಲಿ ಕನ್ನಡದ ಕಂಪನ್ನು ಪಸರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಹೇಳಿದರು.ಮುದ್ದೇಬಿಹಾಳ ಪಟ್ಟಣ ಸೇರಿ ತಾಲೂಕಿನಿಂದ ತಾಳಿಕೋಟಿ ಸಾಹಿತ್ಯ ಸಮ್ಮೇಳನಕ್ಕೆ ಹೋಗಿಬರಲು ಸಾಹಿತ್ಯಾಸಕ್ತರು, ಸಾರ್ವಜನಿಕರು, ಮಹಿಳೆಯರಿಗೆ ಅಂದು ಒಂದು ದಿನದ ಮಟ್ಟಿಗೆ ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್‌ಗಳ ಸೇವೆ ಹೆಚ್ಚಿಸಲು ಸಾರಿಗೆ ವಿಭಾಗೀಯ ಅಧಿಕಾರಿಗಳಿಗೆ ಮತ್ತು ಶಾಲೆಗೆ ರಜೆ ಘೋಷಿಸಲು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸುವಂತೆ ಶಾಸಕ ನಾಡಗೌಡರಲ್ಲಿ ಮನವಿ ಮಾಡುತ್ತೇವೆ. ಸಮ್ಮೇಳನ್ನಕ್ಕೆ ತೆರಳುವವರಿಗೆ ಅನುಕೂಲವಾಗಲಿದೆ ಎಂದರು.ಹಿರಿಯ ಸಾಹಿತಿ ಅಶೋಕ ಮಣಿ ಮಾತನಾಡಿ, ತಾಳಿಕೋಟೆ ಸಮ್ಮೇಳನಕ್ಕೆ ಮುದ್ದೇಬಿಹಾಳ ತಾಲೂಕಿನ ಸಾಹಿತಿಗಳಿಗೆ ಹಾಗೂ ಸಾರ್ವಜನಿಕರಿಗೆ ಪ್ರತಿಷ್ಠಿತ ಗಣ್ಯರಿಗೆ ಆಮಂತ್ರಿಸಬೇಕಿತ್ತು, ಮಾಹಿತಿ ಕೊರತೆಯಿಂದಲೋ ಅಥವಾ ಒತ್ತಡದಿಂದಲೋ ಯಾವ ಕಾರಣಕ್ಕೆ ತಾಳಿಕೋಟೆ ಕಸಾಪ ಅಧ್ಯಕ್ಷರು ಹೀಗೆ ಕಡೆಗಣಿಸಿದರು ಎಂಬುದು ಗೊತ್ತಾಗುತ್ತಿಲ್ಲ. ಎಲ್ಲೇ ಸಾಹಿತ್ಯ ಸಮ್ಮೇಳನ ನಡೆದರೂ ನಾವು ಸ್ವಯಂ ಪ್ರೇರಿತವಾಗಿ ಭಾಗಿಯಾಗಿ ಭುವನೇಶ್ವರಿಯ ಸೇವೆ ಮಾಡುತ್ತೇವೆ. ಅದರಂತೆ, ತಾಳಿಕೋಟಿ ಸಮ್ಮೇಳನಕ್ಕೆ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸೋಣ ಎಂದು ತಿಳಿಸಿದರು.ಕಳೇದ ಹಲವು ವರ್ಷಗಳಿಂದ ತಾಲೂಕಿನಲ್ಲಿ ಕಸಾಪ ಚಟುವಟಿಕೆಗಳು ನಡೆಯದೆ ಕನ್ನಡ ಮನಸುಗಳಿಗೆ ಬೇಸರವಾಗಿದೆ. ಈ ನಿಟ್ಟಿನಲ್ಲಿ ಕಾಮರಾಜ ಬಿರಾದಾರ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಯುವ ಪಡೆಯನ್ನು ಹೊಂದಿದ್ದು, ಮೊದಲು ಪದಗ್ರಹಣ ನಡೆಸುವ ಮೂಲಕ ತಾಲೂಕಿನಲ್ಲಿ ಸಾಹಿತ್ಯದ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಇಡೀ ತಾಲೂಕಿನ ಎಲ್ಲ ಸಾಹಿತಿಗಳು ನಿಮ್ಮ ಬೆನ್ನ ಹಿಂದೆ ಇರುವುದಾಗಿ ತಿಳಿಸಿದರು. ಬಾಕ್ಸ್ಆಹ್ವಾನಿಸದ್ದಕ್ಕೆ ಸಾಹಿತಿಗಳ ಬೇಸರಪತ್ರಕರ್ತರಾದ ಡಿ. ಬಿ.ವಡವಡಗಿ, ಪುಂಡಲೀಕ ಮುರಾಳ, ಪರುಶುರಾಮ ಕೊಣ್ಣೂರು, ಶಂಕರ ಹೆಬ್ಬಾಳ, ಸಾಹಿತಿ ಪಿ.ಎಚ್.ಉಪ್ಪಲದಿನ್ನಿ, ಸಾಹಿತಿ ಮತ್ತು ತಾಲೂಕಾ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್, ಪ್ರಭುಗೌಡ ರಾಯರಡ್ಡಿ ಸೇರಿ ಸಾಹಿತಿಗಳು ಪತ್ರಕರ್ತರು ಮಾತನಾಡಿ. ತಾಳಿಕೋಟೆ ಸಮ್ಮೇಳನಕ್ಕೆ ಅಲ್ಲಿನ ಅಧ್ಯಕ್ಷರು ಮುದ್ದೇಬಿಹಾಳಕ್ಕೆ ಬಂದು ಒಲ್ಲಿನ ಸಾಹಿತಿಗಳಿಗೆ ಪತ್ರಕರ್ತರಿಗೆ, ಗಣ್ಯರಿಗೆ ಸೌಜನ್ಯಕ್ಕಾದರೂ ಆಹ್ವಾನಿಸಬೇಕಿತ್ತು. ಆದರೇ, ಆಮಂತ್ರಿಸದೇ ಯಾರದೋ ಕೈಯಲ್ಲಿ ಆಮಂತ್ರಣ ಪತ್ರಿಕೆಗಳನ್ನು ಕಳಿಸಿದ್ದು ಶೋಭೆ ತರುವುದಿಲ್ಲ. ನಾವೇನು ಸಮ್ಮೇಳನದ ವಿರೋಧಿಗಳಲ್ಲ, ಬರುವುದಿಲ್ಲ ಎಂದು ಹೇಳುವುದು ಇಲ್ಲ. ನಾವು ಕನ್ನಡ ಪ್ರೇಮಿಗಳು ಸ್ವಯಂ ಪ್ರೇರಿತರಾಗಿ ಎಲ್ಲ ಸಾಹಿತಿಗಳು, ಮುಖಂಡರು ಒಗ್ಗಟ್ಟಾಗಿ ಭಾಗವಹಿಸಿ ಯಶಸ್ವಿಗೆ ಸಹಕರಿಸುವ ನಿರ್ಧಾರವನ್ನು ಪ್ರಕಟಿಸಿದರು.ಈ ವೇಳೆ ಸಾಹಿತಿ ರಹೇಮನಸಾ ಬಿದರಕುಂದಿ, ತಾಲೂಕಾ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ಅಮರೇಶ ಗೂಳಿ, ಹುಸೇನ ಮುಲ್ಲಾ, ವಿಜಯ ಭಾಸ್ಕರ, ಸದಾನಂದ ಮಠ, ಸಿದ್ದು ಹಡಲಗೇರಿ, ಎ.ಆರ್.ಮುಲ್ಲಾ, ರಾಜುಗೌಡ ತುಂಬಗಿ, ಬಿ.ಎಂ.ಪಾಟೀಲ, ಸೋಮನಗೌಡ ಪಾಟೀಲ, ಸಂಗಪ್ಪ ಮೇಲಿಮನಿ, ಸೇರಿದಂತೆ ಹಲವರು ಇದ್ದರು.

Share this article