ಸೋಮಾರಿಗಳಾಗದೆ ಕ್ರಿಯಾಶೀಲರಾಗಲಿ

KannadaprabhaNewsNetwork |  
Published : Apr 06, 2026, 03:15 AM IST
5ಮುದ್ದೆಬಿಹಾಳ1 | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಸಾಧನೆಗೆ ಕಠಿಣ ಪರಿಶ್ರಮ ಅಗತ್ಯ. ವಿದ್ಯಾರ್ಥಿ ಜೀವನದಲ್ಲಿ ಸೋಮಾರಿಗಳಾಗದೆ ಸದಾ ಕ್ರಿಯಾಶೀಲರಾಗಿ ಕಲಿಕೆಗೆ ಒತ್ತು ನೀಡಬೇಕು ಎಂದು ಕರ್ನಾಟಕ ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಮಹಿಳಾ ಪ್ರಧಾನ ಕಾರ್ಯದರ್ಶಿ ಪಲ್ಲವಿ ನಾಡಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಸಾಧನೆಗೆ ಕಠಿಣ ಪರಿಶ್ರಮ ಅಗತ್ಯ. ವಿದ್ಯಾರ್ಥಿ ಜೀವನದಲ್ಲಿ ಸೋಮಾರಿಗಳಾಗದೆ ಸದಾ ಕ್ರಿಯಾಶೀಲರಾಗಿ ಕಲಿಕೆಗೆ ಒತ್ತು ನೀಡಬೇಕು ಎಂದು ಕರ್ನಾಟಕ ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಮಹಿಳಾ ಪ್ರಧಾನ ಕಾರ್ಯದರ್ಶಿ ಪಲ್ಲವಿ ನಾಡಗೌಡ ಹೇಳಿದರು.

ಸಮೀಪದ ನಾಗರಬೆಟ್ಟ ಆಕ್ಸ್ ಪರ್ಡ್ ಪಾಟೀಲ್ ಕಾಲೇಜಿನ ಸ್ಕಾಲರ್‌ಶಿಪ್ ಪರೀಕ್ಷೆ-2026ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆಕ್ಸ್ ಪರ್ಡ್ ಶಿಕ್ಷಣ ಸಂಸ್ಥೆ ಬಡ ಮಕ್ಕಳ ಕಲಿಗೆ ಅನುಕೂಲವಾಗಿದೆ. ಗುಣಮಟ್ಟ ಶಿಕ್ಷಣ ನೀಡುವುದರ ಮೂಲಕ ನಾಡಿಗೆ ಉತ್ತಮ ಪ್ರಜೆಗಳನ್ನು ನೀಡುತ್ತಿದೆ. ಸಂಸ್ಥೆ ಇನ್ನಷ್ಟು ಶೈಕ್ಷಣಿಕ ಸೇವೆ ಮಾಡಲಿ. ಪಾಲಕರು ಮಕ್ಕಳ ಮೇಲೆ ಓದಲು ಒತ್ತಡ ಹಾಕಬಾರದು. ಮೊಬೈಲ್ ಕೊಡಬಾರದು. ಇದರ ಬದಲು ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು.

ಬಸವರಾಜ ಅಸ್ಕಿ ಮಾತನಾಡಿ, ಆಕ್ಸ್ ಪರ್ಡ್ ಸಂಸ್ಥೆ ಎಲ್ಲ ರಂಗದಲ್ಲಿ ಸಾಧನೆ ಮಾಡಿದೆ. ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಕೆಲವು ವಿನಾಯಿತಿಗಳನ್ನು ನೀಡುತ್ತಿದೆ. ಈ ಮೂಲಕ ಮಕ್ಕಳ ಕಲಿಕೆಗೆ ಉತ್ತೇಜ ನೀಡುತ್ತಿದೆ. ಸಂಸ್ಥೆಯಲ್ಲಿ ಕಲಿಯ ವಿದ್ಯಾರ್ಥಿಗಳು ಉನ್ನತ ಸ್ಥಾನದಲ್ಲಿ ಇರಬೇಕು ಎಂದರು.

ಡಾ.ಎಸ್.ಬಿ.ಬಿರಾದಾರ ಮಾತನಾಡಿ, ಚಿಕ್ಕ ಊರಿನಲ್ಲಿ ಆಕ್ಸ್ ಪರ್ಡ್ ಸಂಸ್ಥೆ ಹುಟ್ಟಿದ್ದು ಮಕ್ಕಳಿಗೆ ಅನುಕೂಲಕರವಾಗಿದೆ. ಎಲ್ಲ ರಂಗಗಳಲ್ಲೂ ಆಕ್ಸ್ ಪರ್ಡ್ ಸಂಸ್ಥೆ ಮುಂದಡಿ ಇಟ್ಟು ಯಶಸ್ಸಿಯಾಗಿದೆ. ಮುಂದೆಯೂ ಸಾಧನೆಯ ಹಾದಿಯಲಿ ಸಾಗಲಿ ಎಂದರು.

ಶಂಕರಗೌಡ ಸೋಮನಾಳ ಮಾತನಾಡಿ, ಮಕ್ಕಳ ಬಗ್ಗೆ ಪಾಲಕರು ಸಾವಿರಾರು ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಅವರ ಕನಸು ಸಾಕಾರ ಮಾಡಲು ಕಠಿಣ ಪರಿಶ್ರಮ ಹಾಕಬೇಕು. ಅಂದಾಗ ಮಾತ್ರ ತಂದೆ-ತಾಯಿ ಹಾಗೂ ಸಂಸ್ಥೆಗೆ ಉತ್ತಮ ಹೆಸರು ತರಲು ಸಾಧ್ಯ. ವಿದ್ಯಾರ್ಥಿ ಜೀವನದಲ್ಲಿ ಕಲಿಕೆಯೊಂದಿಗೆ ಸಂಸ್ಕಾರವೂ ಮುಖ್ಯ. ಮೊಬೈಲ್ ಪಕ್ಕಕ್ಕಿಟ್ಟು ಆತ್ಮವಿಶ್ವಾಸದೊಂದಿಗೆ ಸಾಧನೆ ಕಡೆಗೆ ಸಾಗಬೇಕು. ಆಕ್ಸ್ ಪರ್ಡ್ ಸಂಸ್ಥೆ ಈಗಾಗಲೇ ಬೆಳೆದಿದೆ. ನಾವೆಲ್ಲ ಇನ್ನಷ್ಟು ಬೆಳೆಯಲು ಕೈಜೋಡಿಸಬೇಕು ಎಂದರು.

ಸಮಾಜ ಸೇವಕ ಶಾಂತಗೌಡ ಪಾಟೀಲ ನಡಹಳ್ಳಿ ಮಾತನಾಡಿ, ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಯೋಚನೆಯೊಂದಿಗೆ ಮಸಾರಿ ಗ್ರಾಮದಲ್ಲಿ ಶಾಲೆ ಆರಂಭಗೊಂಡಿದ್ದೆ ನಾಗರಬೆಟ್ಟದ ಆಕ್ಸ್ ಪರ್ಡ್ ಶಿಕ್ಷಣ ಸಂಸ್ಥೆ. ಇಂದು ವಿದ್ಯಾರ್ಥಿಗಳ ಜ್ಞಾನಜ್ಯೋತಿಯಾಗಿ ನಾಗರಬೆಟ್ಟ ಆಕ್ಸ್ ಪರ್ಡ್ ಸಂಸ್ಥೆ ಎಲ್ಲೆಡೆ ಹೆಸರಾಗಿದೆ. ಸರ್ಕಾರಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯದ ಕಾರಣ ಖಾಸಗಿ ಶಿಕ್ಷಣ ಸಂಸ್ಥೆಗೆ ಬೆಳೆಯುತ್ತಿವೆ ಎಂದರು. ಆರ್.ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಸ್ಮಾಯಿಲ್ ಮನಿಯಾರ ನಿರೂಪಿಸಿದರು.

ಕೋಟ್

ಮಕ್ಕಳು ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಇಲ್ಲದೆ ತೊಂದರೆ ಉಂಟಾಗುತ್ತಿದೆ. ಸರ್ಕಾರ ಈ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕು. ಶ್ರಮವಹಿಸಿ ಉತ್ತನ ಸ್ಥಾನ ತಲುಪಿದರೆ ತಂದೆ-ತಾಯಿಗಳಿಗೂ ಖುಷಿಯಾಗುತ್ತದೆ. ವಿದ್ಯಾರ್ಥಿಗಳು ಸಿಇಟಿ, ನೀಟ್ ಬಗ್ಗೆಯೂ ವಿದ್ಯಾರ್ಥಿಗಳು ಆಸಕ್ತಿವಹಿಸಬೇಕು.

| ಗಿರಧರ ಪೂಜಾರಿ

----

ನಮ್ಮ ಸಂಸ್ಥೆಯಲ್ಲಿ ಕಲಿತ 187 ವಿದ್ಯಾರ್ಥಿಗಳಿಗೆ ಮೆಡಿಕಲ್ ಸೀಟ್ ಸಿಕ್ಕಿದೆ. ಇದು ಸಂಸ್ಥೆಯ ಶಿಕ್ಷಣ ಗುಣಮಟ್ಟ ತೋರಿಸುತ್ತದೆ. ಬಡ ಮಕ್ಕಳ ಅನುಕೂಲಕ್ಕಾಗಿ 3 ಕೋಟಿ ರೂ. ಸ್ಕಾಲರ್‌ಶಿಪ್ ನೀಡಲಾಗುತ್ತಿದೆ. ಇದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಹಕಾರಿಯಾಗಿದೆ.

| ಅಮಿತಗೌಡ ಪಾಟೀಲ

-------------

5ಮುದ್ದೇಬಿಹಾಳ1: ನಾಗರಬೆಟ್ಟ ಆಕ್ಸ್ ಪರ್ಡ್ ಪಾಟೀಲ್ ಕಾಲೇಜಿನ ಸ್ಕಾಲರ್‌ಶಿಪ್ ಪರೀಕ್ಷೆ-2026ಕ್ಕೆ ಕರ್ನಾಟಕ ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಮಹಿಳಾ ಪ್ರಧಾನ ಕಾರ್ಯದರ್ಶಿ ಪಲ್ಲವಿ ನಾಡಗೌಡ ಚಾಲನೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಪ್ರದಾಯ ತಿರಸ್ಕರಿಸದಿದ್ರೆ ಪ್ರಗತಿಶೀಲತೆ ಪ್ರಬಲವಾಗದು
ಹಣ್ಣಿಕೇರಿ ಕೊಲೆ ಪ್ರಕರಣದ 8 ಜನರ ಬಂಧನ