ಕನ್ನಡಪ್ರಭ ವಾರ್ತೆ ಹುನಗುಂದ
ಪಟ್ಟಣದ ಟಿಸಿಎಚ್ ಕಾಲೇಜ ಆವರಣದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡ 76ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜ.26 ಮತ್ತು ಆ.15ರಂದು ಮಾತ್ರ ದೇಶವನ್ನು ಸಂಭ್ರಮದಿಂದ ಆಚರಿಸಿ ಮಲಗಿದರೇ ಸಾಲದು, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹುತಾತ್ಮರನ್ನು ದಿಗ್ಗಜರನ್ನು ಸ್ಮರಿಸುತ್ತ ಅವರಿಗೆ ಅನಂತ ಕೋಟಿ ಧನ್ಯವಾದಗಳನ್ನು ಸದಾ ಸಲ್ಲಿಸಬೇಕು. ನಮ್ಮ ದೇಶದ ಪವಿತ್ರವಾದ ಗ್ರಂಥ ಸಂವಿಧಾನವನ್ನು ಪ್ರಜಾಪ್ರಭುತ್ವದ ವ್ಯವಸ್ಥೆ ಜಾತ್ಯಾತೀತ ತಳಹದಿಯ ಮೇಲೆ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಎಂಬಂತೆ ನಾವೆಲ್ಲರೂ ಸಂತೋಷ ಮತ್ತು ಅರ್ಪಿಸಿಕೊಂಡು ದೇಶದ ಪ್ರಜೆಗಳಾಗಿದ್ದೇವೆ. ಇದು ಉಚಿತ ಸ್ವಾತಂತ್ರ್ಯ ಅಲ್ಲ ದಿಗ್ಗಜರು ನೀಡಿದ ಕೊಡುಗೆಯಾಗಿದೆ ಎಂದರು.
ತಹಸೀಲ್ದಾರ್ ನಿಂಗಪ್ಪ ಬಿರಾದಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ವಿಶ್ವಕ್ಕೆ ಮಾದರಿಯಾದ ನಮ್ಮ ದೇಶದ ಸಂವಿಧಾನವನ್ನು ನಮಗೆ ನಾವೇ ಅಂಗೀಕಾರವಾಗಿ ಅರ್ಪಿಸಿಕೊಂಡು ದೇಶದ ಪ್ರಜೆಗಳಾಗಿದ್ದೇವೆ. ಜ.26 ನಮ್ಮ ದೇಶದ ಆಡಳಿತವನ್ನು ಸುಸ್ಥಿಗೆಗೆ ತಂದಂತ ದಿನವಾಗಿದೆ ಎಂದರು.
ದೇಶದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಈ ದೇಶದ ಪ್ರಜೆಗಳು ಹೌದೋ ಅಲ್ಲೊ ತಿಳಿಯದು. ಕಳೆದ 76 ವರ್ಷಗಳಿಂದ ಸಂವಿಧಾನದ ಅಡಿಯಲ್ಲಿ ಸ್ವಾತಂತ್ರವನ್ನು ಅನುಭವಿಸಿ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಬಗ್ಗೆ ವಿರೋಧವಾಗಿ ಮಾತಾಡುವವರು ದೇಶದ ಪ್ರಜೆಗಳೊ ಅಥವಾ ಬೇರೆ ದೇಶದ ಪ್ರಜೆಗಳೊ ತಿಳಿಯದು. ಸಂವಿಧಾನ ಬದಲಿಸುವ ವಿಚಾರವಾದಿಗಳನ್ನು ನಾವು ಖಂಡಿಸಿ ವಿರೋಧಿಸುವುದು ನಮ್ಮೆಲ್ಲರ ಕರ್ತವ್ಯ.
-ವಿಜಯಾನಂದ ಕಾಶಪ್ಪನವರ, ಶಾಸಕರು ಹುನಗುಂದ.