ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಬೇಸಾಯಕ್ಕೆ ಸಂಬಂಧಿಸಿದಂತೆ ವಿಶೇಷ ಅಧ್ಯಯನ ನಡೆಸಿ ಮಂಡಿಸಿದ ಪ್ರೌಢ ಪ್ರಬಂಧಕ್ಕೆ ಪಿಎಚ್.ಡಿ ಪದವಿ ಪಡೆದು ತಾಲೂಕಿಗೆ ಕೀರ್ತಿ ತಂದಿರುವ ಎಂ.ಪಿ.ನಿವೇದಿತಾ ಅವರನ್ನು ಶಾಸಕ ಎಚ್.ಟಿ.ಮಂಜು, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಮಿತ್ರ ಫೌಂಡೇಷನ್ ಅಧ್ಯಕ್ಷ ವಿಜಯರಾಮೇಗೌಡ, ಜಿಲ್ಲಾ ರೈತಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್, ಯುವ ಮುಖಂಡ ಮೊಸಳೆ ಕೊಪ್ಪಲು ದಿನೇಶ್ ಸೇರಿದಂತೆ ಹಲವರು ಅಭಿನಂದಿಸಿದ್ದಾರೆ.
ಎಂ.ಪಿ.ನಿವೇದಿತಾ ಅವರು ಮರಡಹಳ್ಳಿ ಗ್ರಾಮದ ಶಿಕ್ಷಕಿ ಎಸ್.ಭಾಗ್ಯ ಮತ್ತು ಎಂ.ವಿ.ಪುಟ್ಟಸ್ವಾಮಿಗೌಡರ ಪುತ್ರಿಯಾಗಿದ್ದಾರೆ.ಅಭಿನವ ಭಾರತಿ ಪ್ರೌಢಶಾಲೆಯಲ್ಲಿ ಖಗೋಳ ಕೌತುಕ ವೀಕ್ಷಣೆ
ಅಭಿನವ ಭಾರತಿ ಪ್ರೌಢಶಾಲೆ (ಆಂಗ್ಲ ಮಾಧ್ಯಮ) ಆವರಣದಲ್ಲಿ ಖಗೋಳ ಕೌತುಕ ವೀಕ್ಷಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿಶ್ರಾಂತ ವಿಜ್ಞಾನ ವಿಷಯ ಪರಿವೀಕ್ಷಕ ಲೋಕೇಶ್ ರವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು. ಗುರು, ಶುಕ್ರ, ಮಂಗಳ ಗ್ರಹ ಹಾಗೂ ರೋಹಿಣಿ ನಕ್ಷತ್ರಗಳನ್ನು ದೂರದರ್ಶಕ ಯಂತ್ರದ ಮೂಲಕ ವೀಕ್ಷಿಸಲು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿತ್ತು.
ಸಾರ್ವಜನಿಕರು, ಪೋಷಕರು ಮತ್ತು ವಿದ್ಯಾರ್ಥಿಗಳು ದೂರದರ್ಶಕ ಯಂತ್ರದ ಮೂಲಕ ಅಪರೂಪವಾಗಿ ಒಂದೇ ಕಕ್ಷೆಯಲ್ಲಿ ನಿಲ್ಲುವ ಗ್ರಹಗಳನ್ನು ನೋಡಿ, ಕಣ್ಣುಂಬಿಕೊಂಡರು. ಖಗೋಳ ಕೌತುಕದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು.ಲೋಕೇಶ್ ರವರು ಅವುಗಳ ಬಗ್ಗೆ ವಿವರಣೆಗಳನ್ನು ನೀಡುವುದರ ಮೂಲಕ ಅವುಗಳ ಮಹತ್ವವನ್ನು ತಿಳಿಸಿದರು. ಈ ಕಾರ್ಯಕ್ರಮಕ್ಕೆ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಿವಮೂರ್ತಿ ಕೀಲಾರ, ಶಿಕ್ಷಕ, ಶಿಕ್ಷಕಿಯರು ಹಾಗೂ ಬೋಧಕೇತರ ವರ್ಗದವರು ಭಾಗವಹಿಸಿದ್ದರು.