ಕನ್ನಡ ನಾಡು ಉಳಿವಿಗೆ ಶ್ರಮಿಸಿದವರ ಸ್ಮರಿಸೋಣ: ರಾಮಪ್ಪ ನಂದಿಹಳ್ಳಿ

KannadaprabhaNewsNetwork |  
Published : Mar 14, 2025, 12:33 AM IST
ಫೋಟೊ ಶೀರ್ಷಿಕೆ: 13ಆರ್‌ಎನ್‌ಆರ್5ರಾಣಿಬೆನ್ನೂರು ನಗರದ ಮೆಡ್ಲೇರಿ ರಸ್ತೆ ಕಸಾಪ ಭವನದಲ್ಲಿ ಏರ್ಪಡಿಸಿದ್ದ ದತ್ತಿ ನಿಧಿ ಕಾರ್ಯಕ್ರಮವನ್ನು ಹಾವೇರಿಯ ನಿವೃತ್ತ ಶಿಕ್ಷಕ ಎಸ್.ಎಲ್. ಕಾಡದೇವರಮಠ ಉದ್ಘಾಟಿಸಿದರು.  | Kannada Prabha

ಸಾರಾಂಶ

ಕನ್ನಡ ಸಾಹಿತ್ಯ ಪರಿಷತ್ತು ದತ್ತಿದಾನಿಗಳ ಸಹಕಾರದೊಂದಿಗೆ ಕನ್ನಡ ಭಾಷೆಯ ಕಂಪನ್ನು ಪಸರಿಸುವ ಕೆಲಸ ನಿರ್ವಹಿಸುತ್ತಿದೆ.

ರಾಣಿಬೆನ್ನೂರು: ಕನ್ನಡ ಭಾಷೆ ಎಲ್ಲರ ಉಸಿರಾಗಿದ್ದು, ಕನ್ನಡ ನಾಡು ಕಟ್ಟಿ ಅದರ ಉಳಿವಿಗಾಗಿ ಶ್ರಮಿಸಿದವರನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ದಾನಿ ರಾಮಪ್ಪ ನಂದಿಹಳ್ಳಿ ಹೇಳಿದರು.

ನಗರದ ಮೆಡ್ಲೇರಿ ರಸ್ತೆ ಕಸಾಪ ಭವನದಲ್ಲಿ ತಾಲೂಕು ಕಸಾಪ ವತಿಯಿಂದ ಏರ್ಪಡಿಸಲಾಗಿದ್ದ ಶಂಕರಪ್ಪ ನಂದಿಹಳ್ಳಿ, ಕಿರಣದೇವಿ ಮತ್ತು ಪ್ಯಾರೆಲಾಲ್ ಗುಪ್ತಾ, ಸಿದ್ಧಲಿಂಗಪ್ಪ ಪಟ್ಟಣಶೆಟ್ಟಿ, ಶಾಂತಕ್ಕ ಬೆಳಕೇರಿ, ಗಿರಿಜಮ್ಮ ಪಾಟೀಲ, ಮಾಗನೂರು ಬಸಪ್ಪ ಮತ್ತು ಸರ್ವಮಂಗಳಮ್ಮ ದತ್ತಿ ನಿಧಿ ಕಾರ್ಯಕ್ರಮಗಳ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತು ದತ್ತಿದಾನಿಗಳ ಸಹಕಾರದೊಂದಿಗೆ ಕನ್ನಡ ಭಾಷೆಯ ಕಂಪನ್ನು ಪಸರಿಸುವ ಕೆಲಸ ನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಅತ್ಯುತ್ತಮ ಕಾರ್ಯಕ್ರಮಗಳು ಜರುಗುವಂತಾಗಲಿ ಎಂದರು.

ಹಾವೇರಿಯ ನಿವೃತ್ತ ಶಿಕ್ಷಕ ಎಸ್.ಎಲ್. ಕಾಡದೇವರಮಠ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀ ಬನಶಂಕರಿ ದೇವಿ ಮಹಿಮೆ ಕುರಿತು ಹಿರೇಕೆರೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ಕಾಂತೇಶರಡ್ಡಿ ಗೋಡಿಹಾಳ, ಶ್ರೀ ವಜ್ರೇಶ್ವರಿ ದೇವಿ ಮಹಿಮೆ ಬಗ್ಗೆ ನಿವೃತ್ತ ಶಿಕ್ಷಕ ವಿ.ವೀ. ಹರಪನಹಳ್ಳಿ, ಮಹಿಳೆ ಸ್ವಾವಲಂಬಿಯಾಗಿ ಬದುಕಲು ಇರುವ ಸಮಸ್ಯೆಗಳು, ಸವಾಲುಗಳು - ಪರಿಹಾರೋಪಾಯಗಳು ಕುರಿತು ಕೆಎಲ್‌ಇ ಸಂಸ್ಥೆಯ ರಾಜರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಪ್ರೊ. ಸಾಯಿಲತಾ ಮಡಿವಾಳರ, ನಿಜಗುಣ ಶಿವಯೋಗಿಗಳು ಮತ್ತು ವಚನಕಾರರು ಪ್ರತಿಪಾದಿಸಿದ ಜೀವನ ಮೌಲ್ಯಗಳನ್ನು ಬದುಕಿ ತೋರಿಸಿದ ಆದರ್ಶವಾದಿ ಲಿಂ. ಮಾಗನೂರು ಬಸಪ್ಪನವರ ಕುರಿತು ಸುಣಕಲ್ಲಬಿದರಿಯ ಶ್ರೀ ಅರಳಿ ಶಿದ್ಲಿಂಗಪ್ಪ ಬಸಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ಹೊನ್ನಪ್ಪ ಹೊನ್ನಪ್ಪನವರ ಉಪನ್ಯಾಸ ನೀಡಿದರು.

ಕಸಾಪ ಅಧ್ಯಕ್ಷ ಪ್ರಭಾಕರ ಶಿಗ್ಲಿ, ರಮ್ಯಾರಾಣಿ ಆರ್.ಎಂ., ಎಸ್.ಎಚ್. ಪಾಟೀಲ, ನಿರ್ಮಲಾ ಲಮಾಣಿ, ಲೋಹಿತಕುಮಾರ ಡಿ.ಆರ್, ಡಾ. ಪವನ ಬೆಳಕೇರಿ, ಎಚ್.ಎಚ್. ಜಾಡರ, ಚಂದ್ರಶೇಖರ ಮಡಿವಾಳರ, ಡಾ. ಕಾಂತೇಶ ಅಂಬಿಗೇರ, ಬಸನಗೌಡ ಉಮ್ಮನಗೌಡ್ರ, ಮಲ್ಲಿಕಾರ್ಜುನ ಸಾವಕ್ಕಳವರ, ಎ.ಬಿ. ರತ್ನಮ್ಮ, ಕಸ್ತೂರಮ್ಮ ಪಾಟೀಲ, ನಿರ್ಮಲಾ ಶಿಗ್ಲಿ, ಅಮೃತಗೌಡ್ರು ಹಿರೇಮಠ, ಎಚ್.ಎಚ್. ದೊಡ್ಡಮನಿ, ನಿತ್ಯಾನಂದ ಕುಂದಾಪುರ, ಕೊಟ್ರೇಶಪ್ಪ ಯಮ್ಮಿ, ಮಾಂತೇಶ ಮ್ಯಾಗೇರ, ರಿಯಾಜ್ ಅಹ್ಮದ್ ದೊಡ್ಮನಿ, ವನಿತಾ ಹೆಗಡೆ, ಮಮತಾ ಆನ್ವೇರಿ, ನೀಲಮ್ಮ ಟಿ.ಎಂ., ಪರಶುರಾಮ ಕುರವತ್ತಿ ಉಪಸ್ಥಿತರಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...