ಸಾಹಿತ್ಯ ಸಮ್ಮೇಳನ ಯಶಸ್ಸಿಗೆ ದುಡಿಯೋಣ

KannadaprabhaNewsNetwork | Published : Oct 7, 2024 1:32 AM

ಸಾರಾಂಶ

ಕನ್ನಡಪ್ರಭ ವಾರ್ತೆ ತೇರದಾಳ(ರ-ಬ) ಎಲ್ಲಾದರೂ ಇರು. ಎಂಥಾದರೂ ಇರು. ಎಂದೆಂದಿಗೂ ನೀ ಕನ್ನಡವಾಗಿರು ಎನ್ನುವ ಮಾತನ್ನು ಮರೆಯದೆ ನಾವೆಲ್ಲರೂ ನಮ್ಮ ನಾಡು-ನುಡಿ ಕುರಿತಾಗಿ ಇನ್ನಷ್ಟು ಅಭಿಮಾನ ತಳೆಯಬೇಕಿದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಬೆಳಗಾವಿ ಜಿಲ್ಲೆಯಿಂದ ಬಾಗಲಕೋಟೆ ಜಿಲ್ಲೆಗೆ ಪ್ರವೇಶಿಸಿದ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥ ಯಾತ್ರೆಗೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ರಥಕ್ಕೆ ಪುಷ್ಪಾರ್ಚನೆ ಮಾಡಿ, ಸ್ವಾಗತ ಕೋರಿ, ಭುವನೇಶ್ವರಿ ಮೂರ್ತಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ತೇರದಾಳ(ರ-ಬ)

ಎಲ್ಲಾದರೂ ಇರು. ಎಂಥಾದರೂ ಇರು. ಎಂದೆಂದಿಗೂ ನೀ ಕನ್ನಡವಾಗಿರು ಎನ್ನುವ ಮಾತನ್ನು ಮರೆಯದೆ ನಾವೆಲ್ಲರೂ ನಮ್ಮ ನಾಡು-ನುಡಿ ಕುರಿತಾಗಿ ಇನ್ನಷ್ಟು ಅಭಿಮಾನ ತಳೆಯಬೇಕಿದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಬೆಳಗಾವಿ ಜಿಲ್ಲೆಯಿಂದ ಬಾಗಲಕೋಟೆ ಜಿಲ್ಲೆಗೆ ಪ್ರವೇಶಿಸಿದ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥ ಯಾತ್ರೆಗೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ರಥಕ್ಕೆ ಪುಷ್ಪಾರ್ಚನೆ ಮಾಡಿ, ಸ್ವಾಗತ ಕೋರಿ, ಭುವನೇಶ್ವರಿ ಮೂರ್ತಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

ಅನೇಕ ರಾಜ್ಯಗಳಲ್ಲಿ ತಮ್ಮ ನಾಡಭಾಷೆಗೆ ಕೊಡುವ ಗೌರವ ಹಾಗೂ ಮಹತ್ವವನ್ನು ನಾವು ಸಹ ನೋಡಿ ಕಲಿಯಬೇಕಿದೆ. ಮಂಡ್ಯದಲ್ಲಿ ಡಿಸೆಂಬರ್‌ ೨೦, ೨೧ ಹಾಗೂ ೨೨ರಂದು ಜರುಗಲಿರುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ನಾವೆಲ್ಲರೂ ಶ್ರಮಿಸೋಣ. ಕನ್ನಡ ಭಾಷೆಯನ್ನು ಚೆನ್ನಾಗಿ ಬಳಸಿ, ಉಳಿಸಿ, ಬೆಳೆಸೋಣ ಎಂದರು.

ಭಾಷಾಭಿಮಾನ ಕುರಿತಾಗಿ ಶಾಲಾ ಮಕ್ಕಳಿಗೂ ಅರಿವು ಮೂಡಿಸುವ ಜವಾಬ್ದಾರಿ ಶಿಕ್ಷಕರೊಂದಿಗೆ ಪಾಲಕರ ಮೇಲೂ ಇದೆ. ನಾಡಿನ ೮ ಜನ ಜ್ಞಾನಪೀಠ ಪಡೆದವರ ಬಗ್ಗೆ ಹಾಗೂ ನಾಡಿನ ಸಾಧಕರ ಬಗ್ಗೆ ಎಲ್ಲರೂ ತಿಳಿಯುವ ಮೂಲಕ ನಾಡಿನಾಭಿಮಾನ ಮೆರೆಯಬೇಕಾಗಿದೆ ಎಂದು ವಿವರಿಸಿದರು..

ಈ ವೇಳೆ ಪುರಸಭೆ ಅಧ್ಯಕ್ಷೆ ಶಿಲ್ಪಾ ಗೌತಮ ರೋಡಕರ, ಉಪಾಧ್ಯಕ್ಷೆ ನಸರೀನಬಾನು ರಾಜೇಸಾಬ ನಗಾರ್ಜಿ, ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ತಹಶೀಲ್ದಾರ ವಿಜಯಕುಮಾರ ಕಡಕೋಳ, ರಬಕವಿ-ಬನಹಟ್ಟಿ ತಹಶೀಲ್ದಾರ ಗಿರೀಶ ಸ್ವಾದಿ, ಗ್ರೇಡ್ ೨ ತಹಶೀಲ್ದಾರ್ ಎಸ್.ಬಿ. ಕಾಂಬಳೆ, ಉಪತಹಶೀಲ್ದಾರ್ ಶ್ರೀಕಾಂತ ಮಾಯನ್ನವರ, ಪುರಸಭೆ ಮುಖ್ಯಾಧಿಕಾರಿ ಆನಂದ ಕೆಸರಗೊಪ್ಪ, ವ್ಯವಸ್ಥಾಪಕ ಮಲ್ಲಿಕಾರ್ಜುನ ಬಿರಾದಾರ ಪಾಟೀಲ, ಕೃಷಿ ಅಧಿಕಾರಿ ಎಸ್.ಎಂ.ಬಿರಾದಾರ, ಕಂದಾಯ ಅಧಿಕಾರಿ ಪ್ರಕಾಶ ಮಠಪತಿ, ಶಿಕ್ಷಣ ಸಂಯೋಜಕ ಬಿ.ಎಂ.ಹಳೆಮನಿ, ಸಿಆರ್‌ಪಿ ಮಹೇಶ ಸೋರಗಾಂವಿ, ಗೌತಮ ರೋಡಕರ, ಮಹಾವೀರ ಕೊಕಟನೂರ, ಅಲ್ಲಪ್ಪ ಬಾಬಗೊಂಡ, ಶಂಕರ ಕುಂಬಾರ, ರಾಮಣ್ಣ ಹಿಡಕಲ್, ಪಿ.ಎಸ್. ಮಾಸ್ತಿ, ರಾಜೇಸಾಬ ನಗಾರ್ಜಿ, ಸಚೀನ್ ಕೊಡತೆ, ಸಿದ್ಧಾರ್ಥ ದೊಡಮನಿ ಹಾಗೂ ಸಂಜು ಬಾನೆ, ರಾಜು ಹಳ್ಯಾಳ, ಮಹಾಂತೇಶ ಮುದಕನ್ನವರ, ಸಾಹಿತಿ ಎಸ್.ಆರ್. ರಾವಳ, ನಾಸೀರ ಕನವಾಡಕರ, ಅಲ್ಲಾಭಕ್ಷ ಅಲಾಸ್, ರಾಜೇಸಾಬ ನದಾಫ ಅದರಂತೆ ಎಂ.ಕೆ. ಮೇಗಾಡಿ, ಜಿ.ಎಂ. ಮೋಪಗಾರ ಸೇರಿದಂತೆ ವಿವಿಧ ಶಾಲಾ ಶಿಕ್ಷಕರು, ಮುಖಂಡರು, ವಿವಿಧ ಸಂಘಟನೆಯವರು ಇದ್ದರು. ಶಾಲಾ ಮಕ್ಕಳು ಕೋಲಾಟ, ವೇಷಭೂಷಣ ಪ್ರದರ್ಶಿಸಿದರು.

-------

ಬಾಕ್ಸ್‌....

ಮೆರಗು ತಂದ ಭವ್ಯ ಯಾತ್ರೆ

ಶಾಲಾ ಮಕ್ಕಳು ಹಾಕುವ ಕನ್ನಡಾಂಬೆಗೆ ಜಯಘೋಷಗಳೊಂದಿಗೆ, ಆಟೋರಿಕ್ಷಾದವರ ಸರದಿಯೊಂದಿಗೆ ಮೆರವಣಿಗೆ ಹೊರಟಿತು. ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ತಮದಡ್ಡಿ ನಾಕಾ, ರೇಣುಕಾ ಮಂದಿರ, ಕೊಡತೆ ಗಲ್ಲಿ, ಮಹಾದೇವ ಮಂದಿರ, ಉಪನೋಂದಣಿ ಕಚೇರಿ, ಬಸ್ ನಿಲ್ದಾಣ, ಮಹಾವೀರ ವೃತ್ತ, ಪದ್ಮಾ ಹಾಸ್ಪಿಟಲ್, ಪೊಲೀಸ್ ಠಾಣೆ, ಡಚ್ ಕಾಲೋನಿ ಮುಖಾಂತರ ನೀಲಕಂಠೇಶ್ವರ ಶಾಲೆಯವರೆಗೆ ಸಾಗಿಬಂದಿತು. ಅಲ್ಲಿಂದ ಹನಗಂಡಿ ಮಾರ್ಗವಾಗಿ ರಬಕವಿಗೆ ರಥಯಾತ್ರೆ ಬೀಳ್ಕೊಡಲಾಯಿತು.-----------

Share this article