- ಜಗಳೂರಲ್ಲಿ ನೂತನ ಮಂಡಲ ಅಧ್ಯಕ್ಷ ಎ.ಮರುಳಾರಾಧ್ಯ ಪದಗ್ರಹಣ ಸಮಾರಂಭ
ಕನ್ನಡಪ್ರಭ ವಾರ್ತೆ ಜಗಳೂರು
ಕನಕ ಜಯಂತಿ ದಿನದಂದು ಅಧಿಕಾರ ಸ್ವೀಕರಿಸಿದ ಮರುಳಾರಾಧ್ಯ ಒಳ್ಳೆಯ ಕೆಲಸ ಮಾಡಲಿ. ಸವಾಲುಗಲಿವೆ, ಜಯಿಸಿ ಸಮರ್ಥವಾಗಿ ಕೆಲಸ ಮಾಡಲು ನಮ್ಮ ಸಹಕಾರವಿದೆ. ಮುಂದಿನ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲೇ ಬೇಕು. ಆ ನಿಟ್ಟಿನಲ್ಲಿ ಒಂದಾಗಿ ಕೆಲಸ ಮಾಡೋಣ ಎಂದು ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು.ಪಟ್ಟಣದ ವಾಲ್ಮೀಕಿ ಭವನದಲ್ಲಿ ಶನಿವಾರ ಬಿಜೆಪಿ ಮಂಡಲ ನೂತನ ಅಧ್ಯಕ್ಷ ಎ.ಮರುಳಾರಾಧ್ಯ ಪದಗ್ರಹಣ ಸಮಾರಂಭದಲ್ಲಿ ಬಿಜೆಪಿ ಧ್ವಜ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಮಗಾರಿಗಳಲ್ಲಿ ಗುಣಮಟ್ಟವಿಲ್ಲ. ಪಟ್ಟಣದಲ್ಲಿನ ಸರ್ಕಾರಿ ಮಳಿಗೆಗಳ ಹರಾಜಿನಲ್ಲಿ ಒಳಸಂಚು ನಡೆಯುತ್ತಿದೆ. ಮೆಕ್ಕೆಜೋಳ ಬೆಳೆದ ರೈತರು ಬೀದಿಗೆ ಬಂದಿದ್ದಾರೆ. ಇವುಗಳನ್ನು ಗಮನಿಸದ ಶಾಸಕರು ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಅಭಿವೃದ್ಧಿ ಮಾಡಲಿ. ಆದರೆ ಮಾನವೀಯತೆ ನೆಲಗಟ್ಟಿನಲ್ಲಿ ವರ್ತಿಸಲಿ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್ ನಾಗಪ್ಪ ಮಾತನಾಡಿ, ರಸ್ತೆಗಳು ಗುಂಡಿ ಬಿದ್ದಿವೆ. ಜಗಳೂರು ಶಾಸಕರು ಹಿರಿಯರಿಗೆ ಗೌರವ ಕೊಡದೇ ಮಾತನಾಡಿದ್ದಾರೆ. ಶ್ರೀರಾಮಚಂದ್ರನ ಅಪರಾವತಾರದಂತೆ ಮಾತನಾಡುವ ಅವರು ಮತದಾರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂದು ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು. ಕಾರ್ಯಕರ್ತರು ದುರಂಹಕಾರಿ ಶಾಸಕ ದರ್ಪ ಮಟ್ಟ ಹಾಕಲಿ ಸಂಘಟಿತರಾಗಿ ಎಂದರು.
- - -
ಈ ಹಿಂದೆ ಅನೇಕರು ಬಿಜೆಪಿ ಮಂಡಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅವರೆಲ್ಲರ ಸಹಕಾರ ಪಡೆದು ಪಕ್ಷವನ್ನು ಬಲ ಪಡಿಸುತ್ತೇನೆ. ಬಿಜೆಪಿ ಗುರುತಿಸಿ ಸ್ಥಾನ ನೀಡಿದೆ. ಬೂತ್ ಮಟ್ಟದಲ್ಲಿ ಸಂಚಾರ ಮಾಡಿ ಸಂಘಟಿಸುತ್ತೇನೆ. ಮಾಜಿ ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಿಳಿಸುವ ಮೂಲಕ ಪಕ್ಷ ಬಲ ಪಡಿಸುತ್ತೇನೆ.
- - -
ಜಗಳೂರು ಪಟ್ಟಣದ ವಾಲ್ಮೀಕಿ ಭವನದಲ್ಲಿ ಬಿಜೆಪಿ ಮಂಡಲ ನೂತನ ಅಧ್ಯಕ್ಷ ಎ.ಮರುಳಾರಾಧ್ಯ ಅವರಿಗೆ ಮಾಜಿ ಅಧ್ಯಕ್ಷ ಎಚ್.ಸಿ.ಮಹೇಶ್ ಧ್ವಜ ಹಸ್ತಾಂತರಿಸಿದರು.