ಶ್ರದ್ಧೆಯಿಂದ ಗಣೇಶನನ್ನು ಪೂಜಿಸಿ ನೆಮ್ಮದಿಯ ಬದುಕು ಕಂಡುಕೊಳ್ಳೋಣ

KannadaprabhaNewsNetwork | Published : Aug 30, 2024 1:13 AM

ಸಾರಾಂಶ

ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ಹಿಂದೂ ಮಹಾಗಣಪತಿ ಉತ್ಸವ ಸೆ.೭ರಿಂದ ೨೩ರ ತನಕ ನಡೆಯಲಿದ್ದು, ಭಕ್ತಾಧಿಗಳು ಕಾರ್ಯಕ್ರಮದ ಯಶಸ್ವಿಗೆ ಸಹಕಾರ ನೀಡಬೇಕೆಂದು ಉತ್ಸವ ಸಮಿತಿ ಅಧ್ಯಕ್ಷ, ವಾಣಿಜ್ಯೋದ್ಯಮಿ ಕೆ.ಸಿ.ನಾಗರಾಜು ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ಹಿಂದೂ ಮಹಾಗಣಪತಿ ಉತ್ಸವ ಸೆ.೭ರಿಂದ ೨೩ರ ತನಕ ನಡೆಯಲಿದ್ದು, ಭಕ್ತಾಧಿಗಳು ಕಾರ್ಯಕ್ರಮದ ಯಶಸ್ವಿಗೆ ಸಹಕಾರ ನೀಡಬೇಕೆಂದು ಉತ್ಸವ ಸಮಿತಿ ಅಧ್ಯಕ್ಷ, ವಾಣಿಜ್ಯೋದ್ಯಮಿ ಕೆ.ಸಿ.ನಾಗರಾಜು ಮನವಿ ಮಾಡಿದರು.

ಅವರು, ಬುಧವಾರ ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ಹಿಂದೂಮಹಾಗಣಪತಿ ಉತ್ಸವ ಹಿನ್ನೆಲೆಯಲ್ಲಿ ಧ್ವಜಪೂಜೆ, ಗೋಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಿಂದೂಮಹಾಗಣಪತಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಭಕ್ತರ ಬೇಡಿಕೆಗಳನ್ನು ಈಡೇರಿಸುವ ದಯಾಮಯಿಯಾದ ಶ್ರೀಗಣೇಶನನ್ನು ಪೂಜಿಸಿದರೆ ನಮ್ಮೆಲ್ಲಾ ಸಂಕಷ್ಟಗಳು ದೂರವಾಗುವವು. ಭಕ್ತಿ, ಶ್ರದ್ಧೆಯಿಮದ ಗಣಪತಿ ಉತ್ಸವವನ್ನು ಆಚರಿಸೋಣ, ಕಾರ್ಯಕ್ರಮದ ಸಂಪೂರ್ಣ ಮಾಹಿತಿಯನ್ನು ಇನ್ನೂ ಕೆಲವೇ ದಿನಗಳಲ್ಲಿ ನೀಡಲಾಗುವುದು. ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ವಿಶ್ವಹಿಂದೂಪರಿಷತ್ ಜಿಲ್ಲಾಧ್ಯಕ್ಷ ಕೊಂಡ್ಲಹಳ್ಳಿ ಷಡಾಕ್ಷರಪ್ಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭಹಾರೈಸಿ ಮಾತನಾಡಿ, ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಸಮಾಜದಲ್ಲಿ ಸಾಮರಸ್ಯ ಮೂಡಿಸಲು ಈ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಗಣೇಶನ ಪೂಜೆಯಿಂದ ಶಾಂತಿ, ನೆಮ್ಮದಿ ನೆಲೆಸುತ್ತದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮೊದಲ ಪೂಜೆಯೇ ಶ್ರೀಗಣೇಶನಿಗೆ ಸಲ್ಲುತ್ತದೆ. ನಾವೆಲ್ಲರೂ ಗಣೇಶನ ಭಕ್ತರಾಗಿ ಅನುಗ್ರಹಕ್ಕೆ ಪಾತ್ರರಾಗೋಣ ಎಂದರು.

ವಿಶ್ವ ಹಿಂದೂಪರಿಷತ್ ತಾಲೂಕು ಅಧ್ಯಕ್ಷ ಡಾ.ಡಿ.ಎನ್.ಮಂಜುನಾಥ ಮಾತನಾಡಿ, ಕಳೆದ ಆರು ವರ್ಷಗಳಿಂದ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಭಕ್ತರು, ಸಾರ್ವಜನಿಕರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಗಣೇಶನ ಉತ್ಸವಕ್ಕೆ ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ಧಾರೆ. ಸೆ.೨೩ರಂದು ನಗರದಾದ್ಯಂತ ಬೃಹತ್ ಶೋಭಾಯಾತ್ರೆ ಆಯೋಜಿಸಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬಾಳೆಮಂಡಿರಾಮದಾಸ್, ಹಿರಿಯ ಮುಖಂಡ ಸೋಮಶೇಖರ್‌ಮಂಡಿಮಠ, ಬಿ.ಎಸ್.ಶಿವಪುತ್ರಪ್ಪ, ನಗರದ ಘಟಕದ ಅಧ್ಯಕ್ಷ ಕೆ.ಎಂ.ಯತೀಶ್, ಲಕ್ಷ್ಮೀ ಶ್ರೀವತ್ಸ, ಶುಭಸೋಮಶೇಖರ್, ಶುಭಸುರೇಶ್, ಮಹಂತೇಶ್, ಉಮೇಶ್, ಬಾಲಕೃಷ್ಣ, ಇತೇಶ್‌ ಜೈನ್, ಡಿ.ಜಿ.ಪ್ರಕಾಶ್, ಮಹಂತೇಶ್, ಜಿ.ಕೃಷ್ಣಮೂರ್ತಿ, ನಾಗರಾಜು, ಶಶಿಧರ, ಮೋಹನ್, ಜಗದಾಂಭ, ಮಂಜುನಾಥ, ಹೊಸಮನೆ ಮನೋಜ್, ಮಾತೃಶ್ರೀ ಮಂಜುನಾಥ, ಬಾಬು, ಪುರೋಹಿತ ಪ್ರದೀಪ್‌ ಭಟ್, ಕಾಲುವೇಹಳ್ಳಿ ಪಾಲಯ್ಯ ಭಾಗವಹಿಸಿದ್ದರು.

Share this article