ವಿಶ್ವಕರ್ಮ ಸಹಕಾರ ಬ್ಯಾಂಕಿನ ಮಂಗಳೂರು ಶಾಖೆ ಆಶ್ರಯದಲ್ಲಿ “ಸ್ವಚ್ಛತಾ ಹೀ ಸೇವಾ” ಧ್ಯೇಯದೊಂದಿಗೆ 12ನೇ ಸ್ವಚ್ಛ ಭಾರತ್ ಶ್ರಮದಾನ ನೆರವೇರಿತು.
ಮಂಗಳೂರು: ಸ್ವಚ್ಛತೆಯು ಮನೆ ಮನೆಯಿಂದ ಸ್ವಯಂ ಜಾಗೃತಿಯೊಂದಿಗೆ ಆರಂಭವಾಗಬೇಕು. ಅದು ಸಾಮೂಹಿಕವಾಗಿ ಪರಿವರ್ತನೆಗೊಂಡು ರಾಷ್ಟ್ರೀಯ ಜಾಗೃತಿ ಉಂಟುಮಾಡುತ್ತದೆ. ಆಗ ಮಹಾತ್ಮಾ ಗಾಂಧೀಜಿ ಅವರು ಕಂಡ ಸ್ವಚ್ಛ ಭಾರತ್ ಪರಿಕಲ್ಪನೆ ಸಾಕಾರಗೊಳ್ಳುತ್ತದೆ ಎಂದು ವಿಶ್ವಕರ್ಮ ಬ್ಯಾಂಕಿನ ನಿರ್ದೇಶಕ ಭರತ್ ನಿಡ್ಪಳ್ಳಿ ಹೇಳಿದ್ದಾರೆ.
ವಿಶ್ವಕರ್ಮ ಸಹಕಾರ ಬ್ಯಾಂಕಿನ ಮಂಗಳೂರು ಶಾಖೆ ಆಶ್ರಯದಲ್ಲಿ “ಸ್ವಚ್ಛತಾ ಹೀ ಸೇವಾ” ಧ್ಯೇಯದೊಂದಿಗೆ ನಡೆದ 12ನೇ ಸ್ವಚ್ಛ ಭಾರತ್ ಶ್ರಮದಾನದಲ್ಲಿ ಸ್ವಯಂ ಸೇವಕರನ್ನು ಉದ್ದೇಶಿಸಿ ಅವರು ಮಾತನಾಡಿದರು.ಶ್ರಮದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡೊಂಗರಕೇರಿ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರವೀಣ್ ಶೇಟ್ ನಾಗ್ವೇಕರ್, ವಿಶ್ವಕರ್ಮ ಬ್ಯಾಂಕ್ ಬ್ಯಾಂಕಿಂಗ್ ಚಟುವಟಿಕೆಗಳೊಂದಿಗೆ ಸಮಾಜಮುಖಿಯಾಗಿ ಸ್ವಚ್ಛ ಭಾರತ್‌ನಂತಹ ಗುರುತರವಾದ ಕಾರ್ಯವನ್ನು ನಡೆಸಿಕೊಂಡು ಬರುತ್ತಿರುವುದು ಸ್ತುತ್ಯಾರ್ಹ ಎಂದು ಹೇಳಿದರು. ವಿಶ್ವಕರ್ಮ ಸಹಕಾರ ಬ್ಯಾಂಕಿನ ಅಧ್ಯಕ್ಷ ಡಾ.ಎಸ್.ಆರ್. ಹರೀಶ್ ಆಚಾರ್ಯ, ಕುದ್ರೋಳಿ ಯುವಕ ಮಂಡಲ ಅಧ್ಯಕ್ಷ ರಾಜೇಶ್ ಕುದ್ರೋಳಿ, ಅಂಜನ ಪಟೇಲ್ ಸಮಾಜ ಟ್ರಸ್ಟ್ ಅಳಕೆ ಅಧ್ಯಕ್ಷ ಪಂಚಾರಾಮ್ ಹಾಗೂ ಲಯನ್ಸ್ ಕ್ಲಬ್ ಕೊಡಿಯಾಲ್ ಬೈಲ್ ಅಧ್ಯಕ್ಷ ಮೋಹನ್ ಕೊಪ್ಪಳ ಹಸಿರು ನಿಶಾನೆ ತೋರುವ ಮೂಲಕ ಶ್ರಮದಾನಕ್ಕೆ ಚಾಲನೆ ನೀಡಿದರು.ಬಳಿಕ ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನದ ಪರಿಸರದಿಂದ ಡೊಂಗರಕೇರಿ ಹಾಗೂ ಅಳಕೆ ಪರಿಸರದಲ್ಲಿ ಸ್ವಚ್ಛತಾ ಶ್ರಮದಾನ ಜರುಗಿತು.ವಿಶ್ವಕರ್ಮ ಸಹಕಾರ ಬ್ಯಾಂಕಿನ ನಿರ್ದೇಶಕರಾದ ಬಿ. ಗುರುಪ್ರಸಾದ್ ಶೆಟ್ಟಿ, ಬಿಜು ಜಯ ಆಚಾರ್, ಹರಿಪ್ರಸಾದ್, ವ್ಯವಸ್ಥಾಪಕ ನಿರ್ದೇಶಕ ವಸಂತ ಅಡ್ಯಂತಾಯ, ಡೊಂಗರೆಕೇರಿ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯ ಶ್ರೀನಿವಾಸ್ ಪುಂಡಲೀಕ ಶೇಟ್, ವೈಶ್ಯ ಸೇವಾ ಸಮಿತಿ ಅಧ್ಯಕ್ಷ ನಾಗಭೂಷಣ್ ಶೇಟ್, ವೈಶ್ಯ ಯುವಕ ವೃಂದ ಅಧ್ಯಕ್ಷ ಆದಿತ್ಯ ಶೇಟ್, ವೈಶ್ಯ ಮಹಿಳಾ ಮಂಡಳಿ ಅಧ್ಯಕ್ಷೆ ರೇಖಾ ಶೇಟ್, ಲಯನ್ಸ್ ಹಾಗೂ ಲಿಯೋ ಕ್ಲಬ್ ಕೊಡಿಯಾಲಬೈಲ್ ಕಾರ್ಯದರ್ಶಿಗಳಾದ ಸತ್ಯೇಂದ್ರ ಭಟ್ ಹಾಗೂ ಸೂರಜ್ ಆಚಾರ್ಯ ಕದ್ರಿ, ಅಂಜನ (ಪಟೇಲ್) ಸಮಾಜ ಟ್ರಸ್ಟ್‌ನ ಮೂಲರಾಮ್, ಕುದ್ರೋಳಿ ಯುವಕ ಮಂಡಲದ ಪ್ರವೀಣ್ ಸಾಲ್ಯಾನ್, ಪ್ರವೀಣ್ ಕುದ್ರೋಳಿ, ಮಹೇಶ್ ಶೆಟ್ಟಿ ಅಳಕೆ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕಾಳಿಕಾಂಬಾ ಶಾಖೆಯ ಹಿರಿಯ ಯೋಗ ಶಿಕ್ಷಕರಾದ ಉಮೇಶ್ ಆಚಾರ್, ಲೋಕೇಶ್ ಆಚಾರ್, ರವಿರಾಜ್ ಆಚಾರ್, ಜಯಂತಿ ಎಲ್ ಆಚಾರ್, ಜ್ಯೋತಿ ಪ್ರಸಾದ್ ಆಚಾರ್, ಬೆಸೆಂಟ್ ಮಹಿಳಾ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿ ರವಿಪ್ರಭಾ, ಕಾರ್ಯದರ್ಶಿಗಳಾದ ಪ್ರಕೃತಿ ಪಿ. ಶೆಟ್ಟಿ, ರಕ್ಷಿತಾ ಶೆಟ್ಟಿ, ಕಾಳಿಕಾಂಬ ಸೇವಾ ಸಮಿತಿ ಅಧ್ಯಕ್ಷ ಜಗದೀಶ್ ಸಿದ್ದಕಟ್ಟೆ, ದಕ್ಷಿಣ ಕನ್ನಡ ಜಿಲ್ಲಾ ಚಿನ್ನದ ಕೆಲಸಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಹಳೇಜಿ ಸಹಕರಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.