ಕನ್ನಡಪ್ರಭ ವಾರ್ತೆ ಶಿರಹಟ್ಟಿ
ಪಟ್ಟಣದ ಎಫ್.ಎಮ್. ಡಬಾಲಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಸಾವಿತ್ರಿಬಾಯಿ ಫುಲೆ ರೆಂಜರ್ಸ್ ಘಟಕದ ವತಿಯಿಂದ ನಡೆದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥಾಪನ ದಿನ ಹಾಗೂ ಧ್ವಜ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಂದಿನ ವಿದ್ಯಾರ್ಥಿಗಳೇ ಭವಿಷ್ಯದ ಸದೃಢ ನಾಗರಿಕರು, ವಿದ್ಯಾರ್ಥಿಯ ಕಲಿಕೆಯ ಜೊತೆಗೆ ಸಹಪಠ್ಯ ಚಟುವಟಿಕೆಗಳು ಅಷ್ಟೇ ಮುಖ್ಯ ಎಂದರು.
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಕಾಲೇಜಿನ ರೇಂಜರ್ಸ್ ವಿಭಾಗದ ವಿದ್ಯಾರ್ಥಿನಿಯರು ಸಂಪೂರ್ಣ ವ್ಯಕ್ತಿತ್ವ ವಿಕಾಸಕ್ಕೆ ಬೇಕಾದ ಎಲ್ಲ ಮೌಲ್ಯಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಸದಾ ಸಿದ್ಧನಾಗಿರು, ಸೇವೆಯೇ ಪ್ರಮುಖ ಆದ್ಯತೆ ಎನ್ನುವ ಧೇಯ ವಾಕ್ಯ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಸೇವಾ ಮನೋಭಾವ, ಪರಿಸರ ಜಾಗೃತಿ, ಆಧುನಿಕ ಶಿಕ್ಷಣದ ವಿವಿಧ ಕೌಶಲಗಳ ಅಳವಡಿಕೆ ಹೀಗೆ ಹತ್ತು ಹಲವಾರು ಬದುಕಿನ ಮೌಲ್ಯಗಳನ್ನು ರೂಡಿಸಿಕೊಳ್ಳಲು ಈ ಘಟಕ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾಗಿದೆ ಎಂದರು.ಯುವಜನತೆ ದೇಶದ ಭವಿಷ್ಯದ ಶಕ್ತಿಯಾಗಿದ್ದು, ಉತ್ತಮ ಶಿಕ್ಷಣ, ಶಿಸ್ತು, ಸಂಸ್ಕಾರ, ಪ್ರಾಮಾಣಿಕತೆ ಹಾಗೂ ಸಾಮಾಜಿಕ ಬದ್ಧತೆಯನ್ನು ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ಜಾತಿ, ಧರ್ಮ, ಭಾಷೆ ಎಂಬ ಭೇದಭಾವಗಳಿಗೆ ಅವಕಾಶ ನೀಡದೆ ಎಲ್ಲರೂ ಸಹೋದರತ್ವದಿಂದ ಬದುಕಬೇಕು. ದೇಶದ ಏಕತೆ, ಸಮಗ್ರತೆ ಮತ್ತು ಸಂವಿಧಾನದ ಆಶಯಗಳನ್ನು ಗೌರವಿಸುವ ಮೂಲಕ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ರೇಂಜರ್ಸ್ ಘಟಕದ ವಿದ್ಯಾರ್ಥಿನಿ ಸ್ನೇಹಾ ಮುಳಗುಂದ ಸಂಸ್ಥಾಪನಾ ದಿನಾಚರಣೆಯ ಕುರಿತು ಮಾತನಾಡಿದರು. ರೇಂಜರ್ಸ್ ಘಟಕದ ವತಿಯಿಂದ ಕಾಲೇಜು ಆವರಣದಲ್ಲಿ ಸಸಿ ನೆಡಲಾಯಿತು. ಎಲ್ಲ ವಿದ್ಯಾರ್ಥಿನಿಯರು ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಉಪನ್ಯಾಸಕರಾದ ಎಂ.ಎಂ. ನದಾಫ್ ವಂದಿಸಿದರು. ಉಪನ್ಯಾಸಕರಾದ ಪಿ.ಎನ್. ಕುಲಕರ್ಣಿ, ಎಫ್.ಎ. ಬಾಬು ಖಾನವರ, ರೇಂಜರ್ಸ್‌ಗಳಾದ ವಿಜಯಲಕ್ಷ್ಮಿ ಡೊಳ್ಳಿನ, ಸಿಮ್ರಾನ್ ಒಂಟಿಯವರ್, ಸುಮಯ್ಯ, ಶೋಭಾ, ತಹರೀನ್ ಮುನ್ಸಿ, ನಿಂಗಮ್ಮ ಮಾದರ್, ಸನಾ, ಇಕ್ರಾ ಮುಂತಾದವರು ಇದ್ದರು.