ಸಮಾನತೆ ಪಡೆಯಲು ಸಣ್ಣ ಸಮುದಾಯಗಳು ಒಗ್ಗೂಡಲಿ: ಸಚಿವ ಸಂತೋಷ ಲಾಡ್‌

KannadaprabhaNewsNetwork |  
Published : Feb 06, 2025, 12:19 AM IST
5ಡಿಡಬ್ಲೂಡಿ2ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಬುಧವಾರ ನಡೆದ ರಾಜ್ಯಮಟ್ಟದ ಅಲೆಮಾರಿ ಶಿಳ್ಳೇಕ್ಯಾತ-ಕಿಳ್ಳೇಕ್ಯಾತರ ಸಮುದಾಯ ಸ್ಥಿತಿಗತಿ ಹಾಗೂ ತೊಗಲು ಗೊಂಬೆ ಉತ್ಸವ. | Kannada Prabha

ಸಾರಾಂಶ

ಶಿಳ್ಳೇಕ್ಯಾತರನ್ನು ಕಿಳ್ಳೇಕ್ಯಾತರನ್ನಾಗಿ ಮಾಡಿದ ಕುರಿತು ಸರ್ಕಾರದ ಮಟ್ಟದಲ್ಲಿ ಬದಲಾವಣೆ ಮಾಡಬೇಕೆಂಬ ವಾದವಿದೆ. ಈ ಕುರಿತು ಅಧ್ಯಯನವೂ ಸಹ ಮುಗಿದಿದೆ.

ಧಾರವಾಡ:

ದೇಶದ ವ್ಯವಸ್ಥೆ ಬದಲಾವಣೆಗೆ ಸಣ್ಣ-ಸಣ್ಣ ಸಮಾಜ ಒಗ್ಗೂಡಬೇಕು. ಈ ಕಾರಣದಿಂದ ತುಳಿತಕ್ಕೆ ಒಳಗಾದ ಶಿಳ್ಳೇಕ್ಯಾತ-ಕಿಳ್ಳೇಕ್ಯಾತ ಸಣ್ಣ ಸಮುದಾಯಗಳ ಧ್ವನಿಯಾಗಿ ಕೆಲಸ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಭರವಸೆ ನೀಡಿದರು.ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಬುಧವಾರ ನಡೆದ ರಾಜ್ಯಮಟ್ಟದ ಅಲೆಮಾರಿ ಶಿಳ್ಳೇಕ್ಯಾತ-ಕಿಳ್ಳೇಕ್ಯಾತರ ಸಮುದಾಯ ಸ್ಥಿತಿಗತಿ ಹಾಗೂ ತೊಗಲು ಗೊಂಬೆ ಉತ್ಸವ ಮತ್ತು ಗ್ರಂಥಗಳ ಬಿಡುಗಡೆ ಸಮಾರಂಭ ಉದ್ಘಾಟಿಸಿದ ಅವರು, ಗ್ರಾಪಂ, ಪಪಂ, ನಗರಸಭೆ, ಪುರಸಭೆ, ತಾಪಂ, ಜಿಪಂ, ಮಹಾನಗರ ಪಾಲಿಕೆ, ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಪಡೆಯುವಲ್ಲಿ ಶಿಳ್ಳೇಕ್ಯಾತ-ಕಿಳ್ಳೇಕ್ಯಾತರ ಸಮಾಜ ತುಳಿತಕ್ಕೆ ಒಳಗಾಗಿವೆ ಎಂದು ವಿಷಾದ ವ್ಯಕ್ತಪಡಿಸಿದರು.

ಸಮಾನತೆ ಹಾಗೂ ಮಾನವತೆಯ ಹರಿಕಾರ ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವಗಳನ್ವಯ ಶೈಕ್ಷಣಿಕ, ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕ ಸ್ಥಾನಮಾನ ಪಡೆಯಲು ಸಣ್ಣ ಸಮುದಾಯಗಳು ಒಗ್ಗೂಡಬೇಕು ಎಂದು ಸಚಿವರು ಸಲಹೆ ನೀಡಿದರು.

ಶಿಳ್ಳೇಕ್ಯಾತರನ್ನು ಕಿಳ್ಳೇಕ್ಯಾತರನ್ನಾಗಿ ಮಾಡಿದ ಕುರಿತು ಸರ್ಕಾರದ ಮಟ್ಟದಲ್ಲಿ ಬದಲಾವಣೆ ಮಾಡಬೇಕೆಂಬ ವಾದವಿದೆ. ಈ ಕುರಿತು ಅಧ್ಯಯನವೂ ಸಹ ಮುಗಿದಿದೆ. ಈ ಜನಾಂಗದ ಬಗ್ಗೆ ಪ್ರಾಮಾಣಿಕವಾಗಿ ಕೆಲಸ ಮಾಡುವ ವಾಗ್ದಾನ ಮಾಡಿದರು.ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಶಕ್ತ ಭಾಷಾ ನೀತಿ ತಜ್ಞರ ಸಮಿತಿ ಸದಸ್ಯ ಡಾ. ಸಣ್ಣವೀರಣ್ಣ ದೊಡ್ಡಮನಿ ಮಾತನಾಡಿ, ಸಂಖ್ಯಾ ಬಲದ ಇಲ್ಲದ ಕಾರಣಕ್ಕಾಗಿ ಶಿಳ್ಳೇಕ್ಯಾತ-ಕಿಳ್ಳೇಕ್ಯಾತರ ಧ್ವನಿಯನ್ನು ಈ ಪ್ರಭುತ್ವ ಕೇಳಿಸಿಕೊಳ್ಳುತ್ತಿಲ್ಲ. ಆಯೋಗದ ವರದಿ ಸರ್ಕಾರ ಅನುಸರಿಸದಿದ್ದರೆ ಹೇಗೆ? ಆಯೋಗ ರಚನೆಯ ಪ್ರಯೋಜನ ಏನು? ದ್ವಾರಕನಾಥ ಆಯೋಗ ಅನ್ವಯ ಕಿಳ್ಳೇಕ್ಯಾತ ಪದವನ್ನು ತೆಗೆಸಿ ಪರ್ಯಾಯ ಶಿಳ್ಳೇಕ್ಯಾತ ಪದ ಸೇರಿಸುವಂತೆ ಸಚಿವರಿಗೆ ಒತ್ತಾಯಿಸಿದರು.

ಸಂಶೋಧಕ ಡಾ. ಬಿ.ವಿ. ಶಿರೂರ ಸರ್ವಾಧ್ಯಕ್ಷತೆಯಲ್ಲಿ ನಡೆದ ಈ ಉತ್ಸವದಲ್ಲಿ ''''''''ಗೊಂಬೆಯಾಟವಯ್ಯಾ ಪತ್ರಿಕೆ'''''''' ಹಾಗೂ ''''''''ನಾಡು ಕಂಡ ನಾಡೋಜ'''''''' ಗ್ರಂಥ ಡಾ. ಎಂ.ಎಂ. ಕಲಬುರ್ಗಿ ಟ್ರಸ್ಟ್ ಅಧ್ಯಕ್ಷ ಡಾ. ವೀರಣ್ಣ ರಾಜೂರ ಲೋಕಾರ್ಪಣೆ ಮಾಡಿದರು. ಪದ್ಮಶ್ರೀ ಭೀಮವ್ವ ಶೀಳ್ಯೆಕಾತರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೇಶವಪ್ಪ ಶಿಳ್ಳೇಕ್ಯಾತರ, ನಾರಾಯಣಪ್ಪ ಶಿಳ್ಳೇಕ್ಯಾತರ ಅವರನ್ನು ಸನ್ಮಾನಿಸಲಾಯಿತು. ಶಂಕರ ಹಲಗತ್ತಿ, ನಾಗಪ್ಪ ಧುಮ್ಮಾಳ ಇದ್ದರು. ಅಕಾಡೆಮಿ ಸ್ಥಾಪಿಸಿ

ಶೀಳ್ಳೆಕ್ಯಾತ-ಕಿಳ್ಳೇಕ್ಯಾತ ಜನಾಂಗದ ಅಭಿವೃದ್ಧಿ ಹಾಗೂ ಗೊಂಬೆ ಕಲೆ ಉಳಿವಿಗೆ ''''''''ತೊಗಲು ಗೊಂಬೆ ಅಕಾಡೆಮಿ ಸ್ಥಾಪನೆಗೆ ಆಗ್ರಹಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಶಕ್ತ ಭಾಷಾ ನೀತಿ ತಜ್ಞರ ಸಮಿತಿ ಸದಸ್ಯ ಡಾ. ಸಣ್ಣವೀರಣ್ಣ ದೊಡ್ಡಮನಿ, ಶಿಗ್ಗಾವಿ ಜಾನಪದ ವಿಶ್ವವಿದ್ಯಾಲಯದಲ್ಲಿ ''''''''ತೊಗಲು ಗೊಂಬೆ ಅಧ್ಯಯನ ಪೀಠ'''''''' ಸ್ಥಾಪನೆಗೂ ಸರ್ಕಾರಕ್ಕೆ ಕೋರಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!