ಕನ್ನಡಪ್ರಭ ವಾರ್ತೆ ಬಾಗಲಕೋಟೆ
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ತೋಟಗಾರಿಕೆ ಮಹಾವಿದ್ಯಾಲಯ ಆಯೋಜಿಸಿರುವ ಸಮೃದ್ಧಿ ಮತ್ತು ಪೌಷ್ಟಿಕೌಂಶಗಳ ಭದ್ರತೆಗಾಗಿ ಸ್ಮಾರ್ಟ್ ತೋಟಗಾರಿಕೆ ತಂತ್ರಜ್ಞಾನ ಜಾಗತಿಕ ಸಮ್ಮೇಳನವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ಸ್ಮಾರ್ಟ್ ತೋಟಗಾರಿಕೆ ಇಂದಿನ ಆದ್ಯತೆಯಾಗಿದ್ದು, ಈ ದಿಸೆಯಲ್ಲಿ ಕೈಗೊಳ್ಳಲಾದ ಪ್ರಮುಖ ಯೋಜನೆಗಳನ್ನು ಸಂಸ್ಥೆಗಳ ವಿಜ್ಞಾನಿಗಳು, ವಿದ್ಯಾರ್ಥಿಗಳು ಸಂಸ್ಥೆಗಳ ಭೇಟಿಯ ಬಗ್ಗೆ ಅಭಿಪ್ರಾಯ ಹಂಚಿಕೊಂಡರು. ತೋ.ವಿ.ವಿ. ವಿಜ್ಞಾನಿಗಳು ಹಾಗೂ ವಿದ್ಯಾರ್ಥಿಗಳು ಫಿನ್‌ಲ್ಯಾಂಡ್ ದೇಶದ ಭೇಟಿಯ ಕ್ಷಣಗಳನ್ನು ನೆನಪಿಸಿಕೊಂಡರು.ಅಧ್ಯಕ್ಷತೆ ವಹಿಸಿದ್ದ ತೋ.ವಿ.ವಿ ಕುಲಪತಿ ಡಾ.ವಿಷ್ಣುವರ್ಧನ್ ಮಾತನಾಡಿ, ತೋಟಗಾರಿಕೆ ವಿಜ್ಞಾನಗಳ ಸ್ಮಾರ್ಟ್ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಸಲಹೆ ನೀಡಿದ ಅವರು, ದೇಶ-ವಿದೇಶಗಳಿಂದ ಆಗಮಿಸಿರುವ ಗಣ್ಯರಿಗೆ, ವಿಜ್ಞಾನಿಗಳಿಗೆ, ಸಂಶೋಧಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಈ ಸಮ್ಮೇಳನ ತೋಟಗಾರಿಕೆಯಲ್ಲಿ ಅಳವಡಿಸಿಕೊಳ್ಳಬಹುದಾದ ಇತ್ತೀಚಿನ ಸಂಶೋಧನಾ ಫಲಿತಾಂಶಗಳು, ಮುಂದೆ ಕೈಗೊಳ್ಳಬಹುದಾದ ಸಂಶೋಧನೆಗಳ ಬಗ್ಗೆ ಚರ್ಚಿಸಲು ಒಂದು ಉತ್ತಮ ವೇದಿಕೆಯಾಗಿದೆ ಎಂದು ತಿಳಿಸಿದರು. ತೋ.ವಿ.ವಿ. ಸಂಸ್ಥಾಪಕ ಕುಲಪತಿ ಡಾ.ಎಸ್.ಬಿ. ದಂಡಿನ ತೋಟಗಾರಿಕೆ ವಿವಿಧ ಬೆಳೆಗಳ ಜೈವಿಕ ವೈವಿಧ್ಯತೆಯ ಮಹತ್ವ, ಸಂರಕ್ಷಣೆ ಹಾಗೂ ಅವುಗಳ ಅಭಿವೃದ್ಧಿ ಬಗ್ಗೆ ಗಮನಹರಿಸಬೇಕಿದೆ ಎಂದು ಹೇಳಿದರು.
ನವದೆಹಲಿಯ ಭಾ.ಕೃ.ಅ.ಸಂ. ಪರಿಷತ್ ನ ನಿವೃತ್ತ ಸಹಾಯಕ ನಿರ್ದೇಶಕ ಡಾ.ಟಿ. ಜಾನಕಿರಾಮ, ತೋ.ವಿ.ವಿ. ಆಡಳಿತ ಮಂಡಳಿ ಸದಸ್ಯರಾದ ಡಾ.ಎಸ್.ಎನ್. ವಾಸುದೇವನ್, ಎಚ್.ಜೆ. ಮನೋಹರ್ ಮಾತನಾಡಿದರು.
ನ್ಯಾಷನಲ್ ಗ್ಲ್ಯಾಡಿಯೋಲಸ್ ಟ್ರಸ್ಟ್, ಜಮ್ಮು, ಕಾಶ್ಮೀರ ವತಿಯಿಂದ ಕೃಷಿ/ತೋಟಗಾರಿಕೆ ವಿವಿಧ ವಿಷಯಗಳಲ್ಲಿ ಸಾಧನೆಗೈದ ವಿಜ್ಞಾನಿಗಳಿಗೆ ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಡಾ.ಬಾಲಾಜಿ ಎಸ್. ಕುಲಕರ್ಣಿ ಸ್ವಾಗತಿಸಿ ಪರಿಚಯಿಸಿದರು. ಡಾ.ಸರ್ವಮಂಗಳ ಚೋಲಿನ ಹಾಗೂ ಡಾ.ಮಹಾಂತೇಶ ನಾಯಕ್ ಬಿ.ಎನ್. ನಿರೂಪಿಸಿದರು. ಸಮ್ಮೇಳನದ ಸಂಘಟನೆ ಅಧ್ಯಕ್ಷ ಹಾಗೂ ಶಿಕ್ಷಣ ನಿರ್ದೇಶಕ ಡಾ.ಎನ್.ಕೆ. ಹೆಗಡೆ ವಂದಿಸಿದರು.