ಕನ್ನಡಪ್ರಭ ವಾರ್ತೆ ತಿಪಟೂರು ಉನ್ನತ ವ್ಯಾಸಂಗದ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಲ್ಲಿ ಕಲಿಯುವುದು ಮಾತ್ರವಲ್ಲದೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಮಾನ್ಯ ಹಾಗೂ ತಾಂತ್ರಿಕ ಜ್ಞಾನದ ಜೊತೆ ಆತ್ಮವಿಶ್ವಾಸ, ನಾಯಕತ್ವ ಗುಣಗಳನ್ನು ಹೆಚ್ಚು ಬೆಳೆಸಿಕೊಳ್ಳುವ ಅಗತ್ಯವಿದೆ ಎಂದು ಬೆಂಗಳೂರು ಥಿಂಕ್ ಕ್ವಿಜಿಂಗ್ ಸಂಸ್ಥೆಯ ಕ್ವಿಜ್ ಮಾಸ್ಟರ್ ಎಚ್.ಆರ್. ಶ್ರೀಧರ್ ತಿಳಿಸಿದರು.
ಕ್ಲಾಸಿ ದಿವಾಸ್ ಡ್ಯಾನ್ಸ್ ಅಕಾಡೆಮಿಯ ಡಾ. ದೀಪಾ ಮಾತನಾಡಿ, ಪ್ರತಿಯೊಬ್ಬರಲ್ಲೂ ವಿಶೇಷ ಪ್ರತಿಭೆಗಳು ಅಡಗಿರುತ್ತವೆ. ಜೀವನದಲ್ಲಿ ಶಿಸ್ತು, ಸಂಯಮ, ಆತ್ಮವಿಶ್ವಾಸ ಹೆಚ್ಚಿಸಿಕೊಂಡಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ ಬೆಳೆಯಲು ಅನುಕೂಲವಾಗಲಿದ್ದು, ಈ ನಿಟ್ಟಿನಲ್ಲಿ ಸಾಗುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ತಿಳಿಸಿದರು.
ಕೆಐಟಿ ಪ್ರಾಂಶುಪಾಲರಾದ ಡಾ. ಎಚ್.ಸಿ. ಸತೀಶ್ ಕುಮಾರ್ ಮಾತನಾಡಿ, ನಿರ್ವಹಣಾ ಶಿಕ್ಷಣದ ಮಹತ್ವ ಮತ್ತು ಉದ್ಯೋಗಾವಕಾಶಗಳ ಬಗ್ಗೆ ಹಾಗೂ ವಿದ್ಯಾರ್ಥಿಗಳು ಸಂವಹನ ಕೌಶಲ್ಯ, ನಾಯಕತ್ವ ಗುಣಗಳು ಹಾಗೂ ನವೀನ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು ಎಂದರು.ಎಂ.ಬಿ.ಎ. ವಿಭಾಗದ ಮುಖ್ಯಸ್ಥರಾದ ಡಾ. ದೀಪ್ತಿ ಅಮಿತ್ ಮಾತನಾಡಿ, ನಮ್ಮ ಕಾಲೇಜಿನಲ್ಲಿ ಹಿಂದಿನಿಂದಲೂ ಸಹ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ, ಪರಿಪೂರ್ಣ ಕೌಶಲ್ಯ, ಸಾಮಾಜಿಕ ಹೊಣೆಗಾರಿಕೆಯ ಜವಾಬ್ದಾರಿಯುತ ವ್ಯಕ್ತಿಗಳನ್ನು ರೂಪಿಸುವ ಸಲುವಾಗಿ ಇಂತಹ ಹತ್ತು ಹಲವು ಸ್ಪರ್ಧಾತ್ಮಕ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬರಲಾಗುತ್ತಿದ್ದು, ಕಾರ್ಯಕ್ರಮದಿಂದ ಹೆಚ್ಚು ಕಲಿತು ಉತ್ತಮ ಸಾಧಕರಾಗಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಪಿ.ಕೆ.ತಿಪ್ಪೇರುದ್ರಪ್ಪ, ಉಪಾಧ್ಯಕ್ಷರಾದ ಬಿ.ಎಸ್. ಉಮೇಶ್, ದೀಪಕ್ ಜಿ.ಪಿ., ಟಿ.ಎಸ್. ಬಸವರಾಜು, ಕಾರ್ಯದರ್ಶಿಗಳಾದ ಜಿ.ಎಸ್. ಉಮಾಶಂಕರ್, ಸುಧಾಕರ್ ಎಚ್.ಜಿ., ಟಿ.ಯು. ಜಗದೀಶಮೂರ್ತಿ, ಖಜಾಂಚಿ ಟಿ.ಎಸ್. ಶಿವಪ್ರಸಾದ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಡಾ. ಮಿಟ್ಟಾ ಶೇಖರ್ ಗೌಡ್ , ಎಂ.ಬಿ.ಎ. ವಿದ್ಯಾರ್ಥಿನಿ ದೇವಿಕ ಪ್ರಾರ್ಥಿಸಿದರು, ಎಂ.ಬಿ.ಎ. ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್‌ಗಳಾದ ಹಂಸಲೇಖ ಎಸ್. ನಿರೂಪಿಸಿದರು, ಸುಜಾತ ಎನ್. ಶೀರಿ ಅತಿಥಿಗಳನ್ನು ಪರಿಚಯಿಸಿದರು. ಕೃತಿಕ ಎಸ್. ಕುಮಾರ್ ಕಲ್ಪ ಕಾರ್ಯಕ್ರಮ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದರು, ರಚನಾ ಎಸ್. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಅಭಿಪ್ರಾಯಗಳನ್ನು ವಿವರಿಸಿದರು. ನವೀನ್ ಕುಮಾರ್ ಟಿ.ಎಸ್. ವಂದನಾರ್ಪಣೆ ಮಾಡಿದರು. ಕೆ.ಐ.ಟಿ.ಯ ವಿವಿಧ ವಿಭಾಗಗಳ ಮುಖ್ಯಸ್ಥರುಗಳು, ಬೋಧಕ ಹಾಗೂ ಬೋಧಕೇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.