ವಿದ್ಯಾರ್ಥಿಗಳು ಸಂವಿಧಾನ ಅಧ್ಯಯನ ಮಾಡಲಿ: ಸಂಸದ ಕಾಗೇರಿ

KannadaprabhaNewsNetwork |  
Published : Jan 27, 2025, 12:46 AM IST
೨೬ಎಸ್.ಆರ್.ಎಸ್೧ಪೊಟೋ೧ (ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಸಹಾಯಕ ಆಯುಕ್ತೆ ಕೆ.ವಿ.ಕಾವ್ಯಾರಾಣಿ ನೆರವೇರಿಸಿದರು.)೨೬ಎಸ್.ಆರ್.ಎಸ್೧ಪೊಟೋ೨ (ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿದರು.) | Kannada Prabha

ಸಾರಾಂಶ

ದೇಶ ಪ್ರಜಾಪ್ರಭುತ್ವ ವ್ಯವಸ್ಥೆಗೆ ತೆರಳಿದ್ದು ಮಹತ್ವದ ಹೆಜ್ಜೆ. ಬಿ.ಆರ್. ಅಂಬೇಡ್ಕರ್ ನೇತೃತ್ವದ ಸಮಿತಿ ೨ ವರ್ಷಗಳಿಗೂ ಅಧಿಕ ಚರ್ಚೆ ನಡೆಸಿ ದೇಶಕ್ಕೆ ಬೇಕಾದ ಸಂವಿಧಾನ ರಚಿಸಿದ್ದಾರೆ.

ಶಿರಸಿ: ದೇಶದ ಶ್ರೇಷ್ಠ ಸಂವಿಧಾನದಿಂದಾಗಿ ಭಾರತ ಜಗತ್ತಿಗೇ ಗುರುವಾಗಿ ಬೆಳೆದು, ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಸಂವಿಧಾನ ಎಲ್ಲರಿಗೂ ಸಮಾನತೆ ಹಕ್ಕು ನೀಡಿದೆ. ನಮ್ಮ ಸಂವಿಧಾನದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.ಭಾನುವಾರ ನಗರದ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ಮಾತನಾಡಿದರು. ನಮ್ಮ ಹಿರಿಯರ ತ್ಯಾಗ, ಬಲಿದಾನ ಹೋರಾಟದಿಂದಾಗಿ ೧೯೪೭ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂತು. ಆದರೆ, ಸ್ವಾತಂತ್ರ್ಯಾ ನಂತರ ದೇಶದ ಮುಂದಿನ ದಾರಿ ಯಾವುದು ಎಂಬ ಗೊಂದಲ ಆರಂಭಗೊಂಡಿತು.

ಈ ವೇಳೆ ದೇಶ ಪ್ರಜಾಪ್ರಭುತ್ವ ವ್ಯವಸ್ಥೆಗೆ ತೆರಳಿದ್ದು ಮಹತ್ವದ ಹೆಜ್ಜೆ. ಬಿ.ಆರ್. ಅಂಬೇಡ್ಕರ್ ನೇತೃತ್ವದ ಸಮಿತಿ ೨ ವರ್ಷಗಳಿಗೂ ಅಧಿಕ ಚರ್ಚೆ ನಡೆಸಿ ದೇಶಕ್ಕೆ ಬೇಕಾದ ಸಂವಿಧಾನ ರಚಿಸಿದ್ದಾರೆ. ಅಂಬೇಡ್ಕರ್ ತಮ್ಮ ಜೀವನದಲ್ಲಿ ಸ್ವತಃ ಕಷ್ಟ ಅನುಭವಿಸಿದವರು. ಹೀಗಾಗಿ ಸಂವಿಧಾನ ರಚನೆಗೆ ಅವರಿಂದ ವಿಶೇಷ ಅಧ್ಯಯನ ನಡೆಯಿತು ಎಂದರು.

ದೇಶದ ಜನತೆ ನೆಮ್ಮದಿಯ ಜೀವನಕ್ಕೆ ಅವಕಾಶ ಮಾಡಿಕೊಟ್ಟ ಸೈನ್ಯವನ್ನು ಅಭಿನಂದಿಸಬೇಕು. ದೇಶದ ಗಡಿಗಳಲ್ಲಿ ಅವರು ಸದಾ ಕಟ್ಟೆಚ್ಚರದಿಂದ ಇದ್ದು ನಮ್ಮನ್ನು ಕಾಪಾಡಿದ್ದಾರೆ. ದೇಶದಲ್ಲಿ ಭಯೋತ್ಪಾದನೆ ನಡೆಯುವುದಿಲ್ಲ. ನಮ್ಮಲ್ಲಿ ಶಾಂತಿ ಕದಡಲು ಸಾಧ್ಯವಿಲ್ಲ ಎಂಬುದನ್ನು ನಮ್ಮ ಸೈನಿಕರು, ಪೊಲೀಸ್ ವ್ಯವಸ್ಥೆ ತೋರಿದೆ. ನಮ್ಮ ರೈತರ ಶ್ರಮದಿಂದ ದೇಶದ ಆಹಾರ ಭದ್ರತೆಯ ಜತೆ ಇಂದು ವಿದೇಶಕ್ಕೂ ಆಹಾರ ಪೂರೈಸುತ್ತಿದ್ದೇವೆ.

ವಿಜ್ಞಾನಿಗಳ ಸೇವೆ ಅವಿಸ್ಮರಣೀಯ. ಇದೆಲ್ಲದರ ಫಲವಾಗಿ ಅಭಿವೃದ್ದಿ ಸಾಧಿಸಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಸಮರ್ಥವಾಗಿ ಜಗತ್ತಿಗೇ ನೇತೃತ್ವ ವಹಿಸಿದ್ದಾರೆ. ದೇಶದ ಈಗ ಅಭಿವೃದ್ಧಿ ವೇಗವಾಗಿದೆ. ನಾವು ನಮ್ಮ ಹಕ್ಕಿನ ಬಳಕೆಯ ಜತೆ ಕರ್ತವ್ಯ ಬಗ್ಗೆ ಜಾಗೃತವಾಗಬೇಕು. ಕರ್ತವ್ಯ ಮರೆತರೆ ದೇಶ ಆಪತ್ತು ಎದುರಾಗಲಿದೆ. ನಮ್ಮ ನಮ್ಮ ನಡುವೆಯೇ ಭಿನ್ನಾಭಿಪ್ರಾಯ ಹುಟ್ಟು ಹಾಕುವ ಶಕ್ತಿ ಕಾಯುತ್ತಿವೆ. ನಾವು ಭಾರತೀಯರು, ದೇಶ ಉಳಿದರೆ ನಾವೆಲ್ಲ ಉಳಿಯುತ್ತೇವೆ ಎನ್ನುವ ಭಾವ ನಮ್ಮಲ್ಲಿ ಬೆಳೆಯಬೇಕು ಎಂದರು.ಧ್ವಜಾರೋಹಣ ನೆರವೇರಿಸಿದ ಸಹಾಯಕ ಆಯುಕ್ತೆ ಕೆ.ವಿ. ಕಾವ್ಯಾರಾಣಿ ಮಾತನಾಡಿ, ವಿದ್ಯಾರ್ಥಿಗಳು ಭಾರತದ ಭವಿಷ್ಯ. ಕಠಿಣ ಪರಿಶ್ರಮದೊಂದಿಗೆ ಸಾಧನೆ ಮಾಡಿ ದೇಶದ ಪ್ರಗತಿಗೆ ಕೊಡುಗೆ ನೀಡಬೇಕು. ಏಕ ಭಾರತ ಶ್ರೇಷ್ಠ ಭಾರತ ನಿರ್ಧಾರ ಮಾಡಬೇಕು ಎಂದರು.ಇದೇ ವೇಳೆ ಪೊಲೀಸ್ ಇಲಾಖೆ, ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಕ್ರೀಡೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ಸಂಕೇತ ಹೆಗಡೆ, ಹರ್ಷಿತ ಜೋಗಳೇಕರ, ರಾಹುಲ ರಾಮನಟ್ಟಿ, ಪ್ರಜ್ವಲ ಜೋಗಳೇಕರಾರ್ಜುನ ರಾಮನಟ್ಟಿ, ಮಹಾದೇವ ಸಾಂಬಾಜಿ, ಸುಮಾಂಕ ಗೌಡ, ದಿಗಂತ ಹೆಗಡೆ, ಮಲ್ಲಿಕಾರ್ಜುನ ಹಿರೇಮಠ, ಸರಸ್ವತಿ ಹರಿಜನ, ಅಶೋಕ ಶೆಟ್ಟಿ, ವಿ.ಪಿ. ಹೆಗಡೆ ವೈಶಾಲಿ, ದಿನೇಶ ನೇತ್ರೆಕರ್ ಅವರನ್ನು ಸನ್ಮಾನಿಸಲಾಯಿತು.ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಉಪಾಧ್ಯಕ್ಷ ರಮಾಕಾಂತ ಭಟ್, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಜಗದೀಶ ಗೌಡ, ತಹಸೀಲ್ದಾರ್ ಶ್ರೀಧರ ಮುಂದಲಮನಿ ಮತ್ತಿತರರು ಇದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ