- ಜಿಎಸ್‌ಟಿ ಹಣ ಜನಕಲ್ಯಾಣಕ್ಕೆ ಬಳಸಿ: ಬಸವಲಿಂಗಪ್ಪ ಸಲಹೆ - - - ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 14 ನಿವೇಶನಗಳನ್ನು ಸರ್ಕಾರಕ್ಕೆ ವಾಪಸ್ ನೀಡಿದ್ದಾರೆ. ಮಲ್ಲಿಕಾರ್ಜುನ್ ಖರ್ಗೆ ಪುತ್ರ ರಾಹುಲ್ ಖರ್ಗೆ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಪಡೆದಿದ್ದ 5 ಎಕರೆ ಭೂಮಿಯನ್ನು ಸರ್ಕಾರಕ್ಕೆ ವಾಪಸ್ ನೀಡಿದ್ದಾರೆ. ಇವರ ನಡೆ ಇಂದಿನ ಎಲ್ಲ ರಾಜಕಾರಣಿಗಳಿಗೂ ಮಾದರಿಯಾಗಿದೆ ಎಂದು ಕರುಣ ಜೀವ ಕಲ್ಯಾಣ ಟ್ರಸ್ಟ್‌ನ ಶಿವನಕೆರೆ ಬಸವಲಿಂಗಪ್ಪ ಹೇಳಿದ್ದಾರೆ.
ಸಿದ್ದರಾಮಯ್ಯ, ರಾಹುಲ್ ಖರ್ಗೆ ಅವರಂತೆ ಕರ್ನಾಟಕದ ಎಲ್ಲ ಪಕ್ಷಗಳ ರಾಜಕೀಯ ಮುಖಂಡರು ಮನಪರಿವರ್ತನೆಗೊಳ್ಳಬೇಕಿದೆ. ಭ್ರಷ್ಟಾಚಾರದಿಂದ ತಾವು ಗಳಿಸಿದ ಭೂಮಿ ಮತ್ತು ಹಣವನ್ನು ಸರ್ಕಾರಕ್ಕೆ ನೈತಿಕ ಪ್ರಜ್ಞೆ, ಆತ್ಮಸಾಕ್ಷಿಯಿಂದ ನೀಡಿ ಮಾದರಿ ವ್ಯಕ್ತಿಗಳಾಗಲಿ ಎಂದು ಮನವಿ ಮಾಡಿದ್ದಾರೆ.
ಸಮಾಜವಾದಿ ಸಿದ್ಧಾಂತದ ಶ್ರೇಷ್ಠ ನಾಯಕ ಜಯಪ್ರಕಾಶ್ ನಾರಾಯಣ ಅವರ ಪ್ರೇರಣೆಯಿಂದ ಚಂಬಲ್ ಡಕಾಯತರು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಾಗ ಮಾಡಿದ್ದು ಇತಿಹಾಸವಿದೆ. ನಮ್ಮ ರಾಜಕಾರಣಿಗಳು ಹಣ ಮತ್ತು ಭ್ರಷ್ಟಾಚಾರ ತ್ಯಾಗ ಮಾಡಿ ಸದ್ವಿವೇಕದ ಪ್ರಾಮಾಣಿಕ ರಾಜಕಾರಣಿಗಳಾಗಬೇಕು. ರಾಜಕೀಯ ಕ್ಷೇತ್ರ ಸೇವಾ ಕ್ಷೇತ್ರವಾಗಿದೆ. ಇದನ್ನು ದರೋಡೆ ಕ್ಷೇತ್ರವನ್ನಾಗಿ ಮಾಡುವುದು ಬೇಡ. ಜಿಎಸ್‌ಟಿ ಹೆಸರಿನಲ್ಲಿ ಬಡವರು ಸರ್ಕಾರಕ್ಕೆ ನೀಡಿರುವ ಹಣ ರಾಜಕಾರಣಿಗಳ ಐಶಾರಾಮಿ ಜೀವನಕ್ಕೆ ಉಪಯೋಗವಾಗದೇ, ಜನಕಲ್ಯಾಣಕ್ಕೆ ಸದುಪಯೋಗವಾಗಲಿ ಎಂದು ತಿಳಿಸಿದ್ದಾರೆ.- - - (ಸಾಂದರ್ಭಿಕ ಚಿತ್ರ)