ಶಿಕ್ಷಕರ ಒಳಿತಿಗಾಗಿ ಸಂಘ ಕಾರ್ಯ ನಿರ್ವಹಿಸಲಿ

KannadaprabhaNewsNetwork | Published : Sep 22, 2024 1:47 AM

ಸಾರಾಂಶ

ಸಂಘವನ್ನು ಕಟ್ಟಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಸದಸ್ಯರ ಮೇಲಿದೆ. ತಾಲ್ಲೂಕಿನ ಎಲ್ಲ ಶಿಕ್ಷಕರ ಒಳಿತಿಗಾಗಿ ಸಂಘ ಕಾರ್ಯ ನಿರ್ವಹಿಸಲಿ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಾಗೇನ್ನವರ ಹೇಳಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಸಂಘವನ್ನು ಕಟ್ಟಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಸದಸ್ಯರ ಮೇಲಿದೆ. ತಾಲ್ಲೂಕಿನ ಎಲ್ಲ ಶಿಕ್ಷಕರ ಒಳಿತಿಗಾಗಿ ಸಂಘ ಕಾರ್ಯ ನಿರ್ವಹಿಸಲಿ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಾಗೇನ್ನವರ ಹೇಳಿದರು.

ಅವರು ಶನಿವಾರ ರಾಮಪುರದ ಶ್ರೀನೀಲಕಂಠೇಶ್ವರ ಮಠದಲ್ಲಿ ನಡೆದ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತು ಬೆಳೆಸುವ ಸಹಕಾರಿ ಸಂಘ ನಿಯಮಿತ, ಬನಹಟ್ಟಿ ಇದರ ೨೦೨೩-೨೪ನೇ ಸಾಲಿನ ೫೧ನೇ ವಾರ್ಷಿಕ ಸರ್ವ ಸಾಧಾರಣ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿಗೆ ಬ್ಯಾಂಕ್ ಸೌಲಭ್ಯಗಳು ಸರಳೀಕರಣಗೊಂಡಿವೆ. ೫೧ ವರ್ಷಗಳ ಕಾಲ ಪರಸ್ಪರ ಸಹಕಾರದಿಂದ ಸಂಘ ಬೆಳೆದಿದ್ದು, ಸಂಘವು ಇನ್ನಷ್ಟು ಉತ್ತರೋತ್ತರವಾಗಿ ಬೆಳೆಯಲಿ. ಸಂಘದ ಹಣವನ್ನು ಸದುಪಯೋಗ ಪಡಿಸಿಕೊಂಡು ಸಂಘದ ಅಭಿವೃದ್ಧಿಗೆ ಪ್ರತಿಯೊಬ್ಬರು ಶ್ರಮಿಸಿ. ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ನೀಡುತ್ತಿರುವುದು ತುಂಬಾ ಉತ್ತಮ ಕೆಲಸ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎಲ್.ಎಸ್.ಹಂಜಗಿ ಮಾತನಾಡಿ, ಸಂಘವು ಪ್ರಸಕ್ತ ವರ್ಷದಲ್ಲಿ ₹೨೩.೬೧ ಸಾವಿರ ಲಾಭ ಗಳಿಸಿದೆ. ಸಂಘದ ಸದಸ್ಯರಿಗೆ ಶೇ.೨೩ರಷ್ಟು ಲಾಭಾಂಶ ನೀಡಲಾಗುವುದು. ಸಂಘದ ಅಭಿವೃದ್ಧಿಗೆ ತಮ್ಮೆಲ್ಲರ ಸಹಕಾರ ಅವಶ್ಯವಾಗಿದೆ ಎಂದು ತಿಳಿಸಿದರು.

ಈ ವೇಳೆ ಸಿ.ಎ.ಕಳಾವಂತ, ಐ.ಎ.ಡಾಂಗೆ, ಬಸವರಾಜ ಹನಗಂಡಿ, ಅರ್ಜುನ ಕಾಖಂಡಕಿ, ಬಿ.ಡಿ.ನೇಮಗೌಡ, ಸಿ.ಜಿ.ಕಡಕೋಳ, ಸೋಮು ಹೊರಟ್ಟಿ , ಬಿ.ಕೆ.ಬುರ್ಶಿ, ವಿ.ಸಿ.ಹಿರೇಮಠ, ಅರುಣ ಕುಲಕರ್ಣಿ, ಜಿ.ಎಸ್.ಕಲಬುರಗಿ, ಜಯರಾಮ ನಾಯ್ಕ, ವಿಜಯಕುಮಾರ ಹಲಕುರ್ಕಿ, ಆರ್.ಬಿ.ದುತ್ತರಗಾಂವಿ, ಶಿವು ಯಾದವಾಡ, ಬಸವರಾಜ ಪಾಟೀಲ, ಬಿ.ಎಂ.ಹಳೇಮನಿ, ಎಸ್.ಜಿ.ನವಲ್ಯಾಳ, ಆರ್.ವಿ. ಲಮಾಣಿ, ಎ.ಎಚ್.ಬುರ್ಶಿ, ಝಡ್.ಎಚ್.ಇಂಡಿಕರ, ಎ.ಎನ್.ಹಂಜಗಿ, ಬಿ.ಪಿ.ನುಚ್ಚಿ, ಎಸ್.ವೈ.ಬಿರಾದಾರ, ಎ.ಎಚ್.ಬುರ್ಸಿ, ಪ್ರಶಾಂತ ಹೊಸಮನಿ, ಜಗದೀಶ ಮೇತ್ರಿ, ದಾಕ್ಷಾಯಿಣಿ ಮಂಡಿ, ಶೈಲಾ ಮಿರ್ಜಿ, ಸಂತೋಷಿ ರಾಮದುರ್ಗ, ಎಸ್.ಬಿ.ಬೆಳ್ಳಿಕಟ್ಟಿ, ಅನೀಲ ಕಡ್ಲಿ, ಬಿ.ಬಿ. ಮುಧೋಳ, ಸಿದ್ದು ತೇಲಿ, ಎ.ಪಿ.ಹತ್ತೇನವರ, ಬಿ.ಎಂ.ಪಾಟೀಲ, ಸಂತೋಷ ಬಡ್ಡಿ ಸೇರಿದಂತೆ ಅನೇಕರು ಇದ್ದರು.

ಸಂಘದ ಉಪಾಧ್ಯಕ್ಷ ವಿಜಯಕುಮಾರ ಹಲಕುರ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನೀಲ ಕಡ್ಲಿ ಸ್ವಾಗತಿಸಿದರು. ಬಿ.ಬಿ.ಮುಧೋಳ ನಿರೂಪಿಸಿದರು. ಆನಂದ ಕುಲಕರ್ಣಿ ವಂದಿಸಿದರು.

Share this article