ಕನ್ನಡಪ್ರಭ ವಾರ್ತೆ ವಿಜಯಪುರ
ಕಲಬುರಗಿ ಜಿಲ್ಲೆ ಆಳಂದದ ಲಾಡ್ಲೆ ಮಷಾಕ ದರ್ಗಾ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕೇ ವರ್ಷಕ್ಕೆ ಪ್ರಕರಣವನ್ನು ಹಿಂಪಡೆದ ಸರ್ಕಾರದ ಕುರಿತು ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 8 ಪ್ರಕರಣಗಳನ್ನು ಕ್ಯಾಬಿನೆಟ್‌ನಲ್ಲಿ ಸರ್ಕಾರ ಹಿಂಪಡೆದಿದ್ದು, ಇದು ಸಿದ್ದರಾಮಯ್ಯರ ಅತಿರೇತಕದ ಪರಮಾವಧಿ ಎಂದು ವಾಗ್ದಾಳಿ ನಡೆಸಿದರು.ಇಟಲಿ ಪ್ರಧಾನಿ ಮೆಲೋನಿಗೆ ಪ್ರಧಾನಿ ಮೋದಿ ಮೆಲೋಡಿ ಚಾಕೋಲೇಟ್ ನೀಡಿದ ವಿಚಾರವಾಗಿ ಕಾಂಗ್ರೆಸ್ ನಾಯಕರಿಂದ ವಿರೋಧ ಹಾಗೂ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಯತ್ನಾಳ ಟೀಕೆ ಮಾಡಿದರು. ರಾಹುಲ್ ಗಾಂಧಿ ಜೋಕರ್, ತಲೆನೂ ಇಲ್ಲಾ ಡಿಗ್ನಿಫೈ ಇಲ್ಲ. ಮೋದಿ ಅವರು ಪಾರ್ಲೆ ಕಂಪನಿ ಚಾಕೊಲೇಟ್ ಕೊಟ್ಟಿದ್ದು ತಪ್ಪಲ್ಲ. ರಾಜೀವ್ ಗಾಂಧಿಯಂತೆ ಇಂಡಿಯನ್ ನೇವಿ ಹಡಗಿನಲ್ಲಿ ದೇಶದ್ರೋಹಿಗಳ ಜೊತೆ ಪಾರ್ಟಿ ಮಾಡಿಲ್ಲ. ಗಾಂಧಿ ಹತ್ಯೆಯಾದಾಗ ನೆಹರು ನಮ್ಮ ಮನೆಯಲ್ಲಿ ನನ್ನ ತಾಯಿ ಜೊತೆಗಿದ್ದ ಎಂದು ಮೌಂಟ್ ಬ್ಯಾಟನ್ ಮಗಳು ಬರೆದಿದ್ದಾಳೆ ಎಂದು ಟೀಕಿಸಿದರು.
ಸಂಸತ್ತಿಗೆ ಹೇಗೆ ಬರಬೇಕೆಂದು ರಾಹುಲ್ ಗಾಂಧಿಗೆ ಗೊತ್ತಿಲ್ಲ. ಎಂತೆಂಥ ಮಹಾನ್ ವ್ಯಕ್ತಿಗಳು ಆಗಿ ಹೋಗಿದ್ದಾರೆ. ಪಟೇಲ್ ಶಾಸ್ತ್ರಿಯವರಂತ ಮಹಾನ್ ವ್ಯಕ್ತಿಗಳು ಆಗಿ ಹೋಗಿದ್ದಾರೆ.ದೇಶದ ಪ್ರಾಡೆಕ್ಟ್ ಆಗಿರುವ ಪಾರ್ಲೆಯನ್ನು ಇಟಲಿ ಪ್ರಧಾನಿಗೆ ಕೊಟ್ಟಿದ್ದಾರೆ. ಇಟಲಿ ಪ್ರಧಾನಿಯೇ ಮೋದಿ ಪರಿಶ್ರಮಿ ಎಂದಿದ್ದಾರೆ. ಶರದ್ ಪವಾರ ಸಹ ಮೋದಿ ಪರ ಮಾತನಾಡಿದ್ದಾರೆ. ಪ್ರಧಾನಿ ಮೋದಿ ವಿದೇಶ ಪ್ರವಾಸ ಅಪಮಾನ ಮಾಡಬಾರದು ಎಂದಿದ್ದಾರೆ. ದೇಶಕ್ಕೆ ಅನಕೂಲವಾಗಲೆಂದು ವಿದೇಶ ಪ್ರವಾಸ ಮಾಡುತ್ತಿದ್ದಾರೆ. ಚೋಳರ ಕಾಲದ ಕುರುಹು ಇಟಲಿಯಲ್ಲಿ ಪತ್ತೆ ಆಗಿದೆ, ಮೋದಿಗೆ ಚೋಳ ರಾಜನ ಇತಿಹಾಸ ಕುರಿತು ಮಾಹಿತಿ ನೀಡಿದ್ದಾರೆ. ಇಟಲಿಯಲ್ಲಿ ಚೋಳ ರಾಜ ಕಟ್ಟಿದ ದೇವಾಲಯವಿದೆ ಎಂದು ಹೇಳಿದರು.ದೇಶದಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಸಂಚಲನ ವಿಚಾರವಾಗಿ ಪ್ರತಿಕ್ರಿಯಿಸಿ, ತಾಂತ್ರಿಕವಾಗಿ ಏನನ್ನಾದರೂ ಮಾಡಬಹುದು. ಕಾಕ್ರೋಚ್ ಪಾರ್ಟಿ ವ್ಯವಸ್ಥಿತವಾಗಿ ದೇಶವನ್ನು ಅತಂತ್ರ ಮಾಡಬೇಕೆಂಬುದಿದೆ. ಪ್ರಧಾನಿ ಮೋದಿಯವರನ್ನು ಕೆಳಗಿಳಿಸೋ ಉದ್ದೇಶವಾಗಿದೆ. ಭಾರತ ಜಗತ್ತಿನ ಶಕ್ತಿಶಾಲಿ ರಾಷ್ಟ್ರವಾಗೋದನ್ನು ತಡೆಯಬೇಕೆಂಬ ಉದ್ದೇಶವಿದೆ. ರಾಹುಲ್ ಗಾಂಧಿ ಚೀನಾದ ಏಜೆಂಟ್ ರೀತಿ ಇದ್ದಾನೆ. ಪಾಕಿಸ್ತಾನ ಪರ ಮಾತನಾಡಿದ್ದಾನೆ. ಕಾಂಗ್ರೆಸ್ ದೇಶದ್ರೋಹದ ಪಕ್ಷವಾಗಿದೆ. ಎಡಪಂಥೀಯರು ಕಮ್ಯುನಿಷ್ಟರಿಗೆ ದೇಶದ ಬೆಳವಣಿಗೆ ನೋಡಲು ಆಗುತ್ತಿಲ್ಲ. ಕಾಕ್ರೋಚ್ ಜನತಾ ಪಾರ್ಟಿಗೆ ಪಾಕಿಸ್ತಾನದವರು ಸದಸ್ಯರಾದರೆ ಭಾರತಕ್ಕೇನು ಸಂಬಂಧ?, ಪಾಕಿಸ್ತಾನದಲ್ಲೇ ತಿನ್ನೋಕೆ ಆಹಾರವಿಲ್ಲ. ಪಾಕಿಸ್ತಾನದಲ್ಲಿನ ಪ್ರದೇಶಗಳಿಗೆ ಹಿಂದೂಗಳ ಹೆಸರು ಇಡುತ್ತಿದ್ದಾರೆ. ವರ್ಡ್ ಹೆರಿಟೇಜ್ ನ ಹಣ ಹೊಡೆಯೋಕೆ ಪಾಕ್ ನಲ್ಲಿ ಹಿಂದೂ ಹೆಸರು ಇಡುತ್ತಿದ್ದಾರೆ ಎಂದು ಆರೋಪಿಸಿದರು.
- ಬಸನಗೌಡ ಪಾಟೀಲ ಯತ್ನಾಳ, ಶಾಸಕ