ಕನ್ನಡಪ್ರಭ ವಾರ್ತೆ ಮೈಸೂರು
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಡಿಎ ಹಗರಣ ಮತ್ತು ವಾಲ್ಮೀಕಿ ನಿಗದಮದ ಅವ್ಯವಹಾರದಲ್ಲಿ ಸಿದ್ದರಾಮಯ್ಯ ಅವರ ಪಾತ್ರವಿದ್ದರೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಏಕೆಂದರೆ ಅವರೇ ಅರ್ಥ ಸಚಿವರಾಗಿರುವುದರಿಂದ ಅವರ ಗಮನಕ್ಕೆ ಬಾರದೆ ಹಣಕಾಸಿನ ವರ್ಗಾವಣೆ ಸಾಧ್ಯವಿಲ್ಲ ಅಲ್ಲವೇ ಎಂದು ಪ್ರಶ್ನಿಸಿದರು.
ಎಂಡಿಎ ಒಂದು ಸಂಸ್ಥೆ. ಬಡವರಿಗೆ ನಿವೇಶನ ನೀಡುವ ಈ ಸಂಸ್ಥೆಯ ಬಗ್ಗೆ ಪ್ರಾಮಾಣಿಕವಾಗಿ ಇರಬೇಕು. ಎಂಡಿಎ ಆಯುಕ್ತರಿಗೆ ಜಿಲ್ಲಾಧಿಕಾರಿಗಳೂ ಪತ್ರ ಬರೆದಿದ್ದಾರೆ. ಆದರೂ ಕ್ರಮ ಕೈಗೊಂಡಿಲ್ಲ. ಬದಲಿಗೆ ನನ್ನ ಮೇಲೆ ಸಲ್ಲದ ಆರೋಪ ಮಾಡುತ್ತಿದ್ದಾರೆ. ಹೀಗೆ ಸುಮ್ಮನೆ ಅಪಪ್ರಚಾರ ನಡೆಸಿದರೆ ಲೀಗಲ್ ನೊಟೀಸ್ ನೀಡುತ್ತೇನೆ. ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು. ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಸಿದರು.ಶ್ರೀರಾಂಪುರದಲ್ಲಿ ಸುಂದರಮ್ಮ ಎಂಬವರ 100 ಎಕರೆ ಜಮೀನಿಗೆ ಬದಲಾಗಿ 125 ಎಕರೆ ವಶಕ್ಕೆ ಪಡೆಯಲಾಗಿತ್ತು. ಅವರು ನ್ಯಾಯಾಲಯಕ್ಕೆ ಹೋಗಿ ಎಲ್ಲಾ ಜಮೀನು ಹಿಂದಕ್ಕೆ ಪಡೆದರು. ಆದ್ದರಿಂದ ಗೊತ್ತಿಲ್ಲದೆ ಜಮೀನು ವಶಕ್ಕೆ ಪಡೆದಿದ್ದರೆ ಪರಿಹಾರ ಕೊಡಲು ಅವಕಾಶವಿದೆ. 50-50 ಅನುಪಾತ ಈ ಹಿಂದಿನಿಂದಲೂ ಇದೆ. ಎಂಡಿಎ ನಲ್ಲಿ ಇಂತಹ ರೈತರಿಗೆ ಪರಿಹಾರ ನೀಡಲಾಗುತ್ತಿತ್ತು. ನಮಗೆ ರೈತರು ಮತ್ತು ಪ್ರಾಧಿಕಾರ ಎರಡೂ ಉಳಿಯಬೇಕು. ಪ್ರಾಧಿಕಾರದ ಸಭೆಯಲ್ಲಿ ಈ ಕುರಿತಾದ ಪ್ರಸ್ತಾಪವಾಗಿಲ್ಲ. ಕೂಡಲೇ ತನಿಖಾಧಿಕಾರಿಗಳು ತನಿಖೆಯನ್ನು ಪೂರ್ಣಗೊಳಿಸಬೇಕು ಎಂದರು.
ಎಂಡಿಎ ವಿಷಯದಲ್ಲಿಯೂ ಸಿಎಂ ಸಿದ್ದರಾಮಯ್ಯ ಅವರು ಲೋಪ ಎಸಗಿದ್ದರೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಇಲ್ಲವೇ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಎಂಡಿಎ ನಲ್ಲಿ ನಡೆದಿರುವ ಎಲ್ಲಾ ಅಕ್ರಮಗಳ ಬಗ್ಗೆಯೂ ತನಿಖೆ ನಡೆಯಬೇಕು ಎಂದು ಅವರು ಹೇಳಿದರು.
ರಾಮಕೃಷ್ಣ ಹೆಗಡೆ, ಬಂಗಾರಪ್ಪ ಎರಡು ಬಾರಿ ರಾಜೀನಾಮ ಕೊಟ್ಟಿದ್ದರು. ಸಮಾಜವಾದಿ ಹಿನ್ನೆಲೆಯಿಂದ ಬಂದ ಸಿದ್ದರಾಮಯ್ಯ ಕೂಡ ರಾಜೀನಾಮೆ ನೀಡಿ ತನಿಖೆ ಎದುರಿಸಲಿ. ನಂತರ ನಿರಪರಾಧಿ ಎಂದು ಸಾಬೀತಾದರೆ ಮತ್ತೆ ಮುಖ್ಯಮಂತ್ತಿ ಆಗಲಿ ಎಂದು ಅವರು ಕಿವಿಮಾತು ಹೇಳಿದರು.
ನನ್ನ ಒಂದು ನಿವೇಶನ ಇದ್ದರೂ ದಾಖಲೆ ಕೊಡಿ. ಅದನ್ನು ಅವರಿಗೆ ಬರೆದುಕೊಡುತ್ತೇನೆ. ಹೌಸಿಂಗ್ ಬೋರ್ಡ್ ಅಧ್ಯಕ್ಷ ಆಗಿದ್ದಾಗ ಸಾಕಷ್ಟು ಆರೋಪ ಮಾಡಿ ಎಸಿಬಿ ತನಿಖೆ ನಡೆಸಿದರು. ಆದರೆ ಪ್ರಯೋಜನ ಆಗಲಿಲ್ಲ ಎಂದರು.