ಚನ್ನಗಿರಿ: ಸಹಕಾರಿ ಕ್ಷೇತ್ರಗಳು ರೈತರುಗಳ ಜೀವನಾಡಿಯಾಗಿದ್ದು, ಸಹಕಾರಿ ಸಂಘಗಳಲ್ಲಿ ರಾಜಕೀಯವನ್ನು ಬೆರೆಸದೆ ರೈತರ ಹಿತವನ್ನು ಕಾಪಾಡುವಂತಾಗಬೇಕಾಗಿದೆ ಎಂದು ಶಾಸಕ ಬಸವರಾಜ ವಿ.ಶಿವಗಂಗಾ ಹೇಳಿದರು.
ಚನ್ನಗಿರಿ ತಾಲೂಕಿನಲ್ಲಿ ಸಹಕಾರ ಸಂಘಗಳು ಉತ್ತಮ ರೀತಿಯಲ್ಲಿ ನಡೆದುಕೊಂಡು ಹೋಗುತ್ತಿದ್ದು, ಸಹಕಾರ ಸಂಘಗಳ ಆಡಳಿತ ಮಂಡಳಿಯ ಚುನಾವಣೆಯ ಸಂದರ್ಭದಲ್ಲಿ ರಾಜಕಾರಣವನ್ನು ಬೆರೆಸಿಕೊಳ್ಳದೆ ಸಂಘದ ಚುನಾವಣೆಗಳು ನಡೆಯಬೇಕಾಗಿದೆ ಎಂದರು.
ಸಹಕಾರ ಸಂಘಗಳು ರೈತರಿಗೆ ಆರ್ಥಿಕ ನೆರವನ್ನು ನೀಡುವ ಉದ್ದೇಶದಿಂದ ಇದ್ದು ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯಗಳನ್ನು ನೀಡುವ ಮೂಲಕ ರೈತರ ವ್ಯವಸಾಯ ಮಾಡಲು ಅನುಕೂಲಮಾಡಿಕೊಟ್ಟಿದೆ ಎಂದ ಅವರು, ಚನ್ನಗಿರಿ ತಾಲೂಕಿನಲ್ಲಿ ಅತಿ ಹೆಚ್ಚು ರೈತರಿಗೆ ಸಹಕಾರ ಸಂಘಗಳಲ್ಲಿ ಸಾಲ ಸೌಲಭ್ಯಗಳನ್ನು ನೀಡಲಾಗಿದೆ ಎಂದು ಹೇಳಿದರು.ಸಮಾರಂಭದಲ್ಲಿ ಜಿಲ್ಲಾ ಡಿಸಿಸಿ ಬ್ಯಾಂಕ್ ನ ನಿರ್ದೇಶಕ ಷಣ್ಮುಖಪ್ಪ, ಜಿ.ಪಂ ಮಾಜಿ ಸದಸ್ಯ ತೇಜಸ್ವಿ ವಿ.ಪಟೇಲ್, ಜಿ.ಎನ್.ಸ್ವಾಮಿ, ಎಚ್.ಕೆ.ಬಸಪ್ಪ, ಕರಿಯಮ್ಮ, ಕರೇಗೌಡ, ಶಿಮೂಲ್ ಹಾಲು ಉದ್ಫಾದಕರ ಸಂಘದ ಉಪಾಧ್ಯಕ್ಷ ಚೇತನ್ ನಾಡಿಗ್, ವಿಜಯ ಲಕ್ಷ್ಮಿ, ಪಿ.ಎಲ್.ಡಿ ಬ್ಯಾಂಕ್ ನ ಅಧ್ಯಕ್ಷ ಗಂಗಗೊಂಡನಹಳ್ಳಿ ಜಗದೀಶ್ ಮತ್ತಿತರರಿದ್ದರು.