ಬದುಕಿನ ಅಂಧಕಾರ ತೊಳೆದು ಮನೆ ಮನದಲ್ಲಿ ದೀಪ ಪ್ರಜ್ವಲಿಸಲಿ

KannadaprabhaNewsNetwork |  
Published : Dec 17, 2023, 01:45 AM ISTUpdated : Dec 17, 2023, 01:46 AM IST
ಆಕಾಶಬುಟ್ಟಿ ಹಬ್ಬಕ್ಕೆ ಚಾಲನೆ | Kannada Prabha

ಸಾರಾಂಶ

ಜಗತ್ತಿನ ಅಂಧಕಾರಕ್ಕೆ ಬೆಳಕು ನೀಡುವ ಶಕ್ತಿವಂತ ರಾಷ್ಟ್ರವಾಗಿ ಬೆಳೆದಿರುವ ಭಾರತ ಇದೀಗ ವಿಶ್ವಕ್ಕೆ ಮಾರ್ಗದರ್ಶನ ಕೊಡುವ ಮಟ್ಟಿಗೆ ಬೆಳೆದು ನಿಂತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

- ಹುಬ್ಬಳ್ಳಿ ಆಕಾಶ ಬುಟ್ಟಿ ಹಬ್ಬ 2023ಕ್ಕೆ ಕೇಂದ್ರ ಸಚಿವ ಜೋಶಿ ಚಾಲನೆ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಜಗತ್ತಿನ ಅಂಧಕಾರಕ್ಕೆ ಬೆಳಕು ನೀಡುವ ಶಕ್ತಿವಂತ ರಾಷ್ಟ್ರವಾಗಿ ಬೆಳೆದಿರುವ ಭಾರತ ಇದೀಗ ವಿಶ್ವಕ್ಕೆ ಮಾರ್ಗದರ್ಶನ ಕೊಡುವ ಮಟ್ಟಿಗೆ ಬೆಳೆದು ನಿಂತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಇಲ್ಲಿಯ ಮೂರುಸಾವಿರಮಠದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಹುಬ್ಬಳ್ಳಿ ಆಕಾಶ ಬುಟ್ಟಿ ಹಬ್ಬ 2023ಕ್ಕೆ ಸಾಂಕೇತಿಕವಾಗಿ ಆಕಾಶಬುಟ್ಟಿ ಹಾರಿಬಿಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಅಭಿವೃದ್ಧಿ ಪತದಲ್ಲಿ ಮುನ್ನುಗ್ಗಿ ಸಾಗುತ್ತಿದ್ದು, ಜಗತ್ತಿನ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದು ನಿಂತಿದೆ. ಭಾರತಕ್ಕೆ ಕವಿದಿದ್ದ ಅಂಧಕಾರ ದೂರವಾಗಿದ್ದು, ಪ್ರಕಾಶಮಾನ ಭಾರತವನ್ನು ಇಡೀ ಜಗತ್ತು ಕಣ್ತೆರೆದು ನೋಡುವಂತಾಗಿದೆ ಎಂದರು.

ಆಕಾಶಬುಟ್ಟಿ ಹಾರಿಬಿಡುವುದು ನಮ್ಮ ಸಂಸ್ಕೃತಿ ಮತ್ತು ಪರಂಪರೆ. ಕಾರ್ತಿಕ ಮಾಸದಲ್ಲಿ ಕತ್ತಲು ಜಾಸ್ತಿ ಇರುವ ಕಾರಣದಿಂದ ಈ ಸಂದರ್ಭದಲ್ಲಿ ದೀಪ, ಆಕಾಶ ಬುಟ್ಟಿಯನ್ನು ಹಚ್ಚುವ ಪರಂಪರೆ ಮುಂದುವರಿದು ಬಂದಿದೆ. ಆ ಮೂಲಕ ಬದುಕಿನ ಅಂಧಕಾರ ತೊಳೆದು ಮನೆ ಮನದಲ್ಲಿ ದೀಪ ಪ್ರಜ್ವಲಿಸುವಂತೆ ಮಾಡುವ ಉದ್ದೇಶವನ್ನು ಈ ಹಬ್ಬ ಹೊಂದಿದೆ. ಹೀಗಾಗಿ ತುಳಸಿಕಟ್ಟೆ ಸೇರಿದಂತೆ ಮನೆಗಳಲ್ಲಿ ದೀಪ ಹಚ್ಚುವ ಮೂಲಕ ಪೂಜಿಸಲಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಹುಬ್ಬಳ್ಳಿಯ ಪ್ರಕಾಶ ದಲಭಂಜನ ರಚಿಸಿದ ಕಣ್ಮುಂದೆ ಬಾರೇ ಅಲ್ಬಂ ಸಾಂಗ್‌ನ ಪೋಸ್ಟರ್‌ನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ, ಮೇಯರ್ ವೀಣಾ ಬರದ್ವಾಡ, ಹುಬ್ಬಳ್ಳಿ ಆಕಾಶಬುಟ್ಟಿ ಹಬ್ಬದ ಅಧ್ಯಕ್ಷ ರಾಜು ಜರತಾರಘರ, ಮಾಜಿ ಶಾಸಕ ಅಶೋಕ ಕಾಟವೆ, ಗೋವಿಂದ ಜೋಶಿ, ರಾಜಣ್ಣ ಕೊರವಿ, ಪ್ರಭು ನವಲಗುಂದಮಠ, ಶಿವು ಮೆಣಸಿನಕಾಯಿ, ಡಿ.ಕೆ. ಚವ್ಹಾಣ, ರಂಗಾ ಬದ್ದಿ, ಸೀಮಾ ಲದ್ವಾ, ವಿಠ್ಠಲ ಲದ್ವಾ, ದೇವದಾಸ ಹಬೀಬ್, ಮಿಥುನ ಚವ್ಹಾಣ, ದೀಪಕ ಜಿತೂರಿ ಸೇರಿದಂತೆ ಇತರರು ಇದ್ದರು.

ಮನರಂಜನಾ ಕಾರ್ಯಕ್ರಮ

ಕಾರ್ಯಕ್ರಮದ ನಂತರ ನಡೆದ ಮ‌ನುರಂಜನಾ ಕಾರ್ಯಕ್ರಮದಲ್ಲಿ ಆಲ್ ಓಕೆ ತಂಡದ ಹಾಡುಗಾರರು ಹಾಡುಗಳನ್ನು ಹಾಡಿ ರಂಜಿಸಿದರು. ಈ ವೇಳೆ ನೆರೆದದ ಪ್ರೇಕ್ಷಕರು ಕುಣಿದು ಕುಪ್ಪಳಿಸಿ ಎಂಜಾಯ್ ಮಾಡಿದರು. ಮಹಿಳೆಯರು ಮಕ್ಕಳಾದಿಯಾಗಿ ಖ್ಯಾತ ಗಾಯಕ ಅಜಯ್ ಎ.ಜೆ ಅವರ ಹಾಡು ಕೇಳಿ ಸಂಭ್ರಮಿಸಿದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ