ಸವಣೂರು: ಅಂಗವಿಕಲರ ಅಭಿವೃದ್ಧಿಗೆ ಎಲ್ಲರೂ ಕಂಕಣಬದ್ಧರಾಗುವುದು ಅವಶ್ಯವಿದೆ. ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆದು ಆರ್ಥಿಕವಾಗಿ ಬಲಿಷ್ಠರಾಗುವುದು ಮತ್ತು ಆತ್ಮಸ್ಥೈರ್ಯ ಹೊಂದಬೇಕು ಎಂದು ಹಿರೇಮುಗದೂರ ಗ್ರಾಪಂ ಸದಸ್ಯ ನಿಂಗಪ್ಪ ಎಂ. ಆರೇರ ತಿಳಿಸಿದರು.
ತಾಪಂ ಎಂಆರ್‌ಡಬ್ಲ್ಯು ಶಿವಪ್ಪ ಎರೇಶಿಮಿ ಮಾತನಾಡಿ, ಸರ್ಕಾರದ ಸೌಲಭ್ಯಗಳಿಂದ ಅಂಗವಿಕಲರು ವಂಚಿತರಾಗಬಾರದು. ತಾಲೂಕಿನ ಎಲ್ಲ ಅಂಗವಿಕಲರ ಸಮಸ್ಯೆಗಳ ಪರಿಹಾರಕ್ಕಾಗಿ ಗ್ರಾಪಂಗಳ ಸಹಕಾರ ಅವಶ್ಯಕವಾಗಿದೆ ಎಂದರು.ಡಿಡಿಆರ್‌ಸಿ ನೋಡಲ್ ಅಧಿಕಾರಿ ಡಾ. ಅಂಕಿತ ಆನಂದ ಮಾತನಾಡಿ, ಗ್ರಾಪಂ ಮಟ್ಟದಲ್ಲಿ ಸಮಸ್ಯೆ ಇರುವ ಅಂಗವಿಕಲರನ್ನು ಗುರುತಿಸಿ, ಅರಿವು ಮೂಡಿಸುವ ಪ್ರಯತ್ನ ಮಾಡಲಾಗುವುದು. ಅವರಿಗೆ ಚಿಕಿತ್ಸೆಗೆ ಎಲ್ಲ ರೀತಿಯ ಸಹಕಾರವನ್ನು ನೀಡಲಾಗುವುದು ಎಂದರು.ಇದೇ ಸಮಯದಲ್ಲಿ ಡಿಡಿಆರ್‌ಸಿ ಕಾರ್ಯವೃಂದದದ ಡಾ. ಅಂಕಿತ ಆನಂದ, ಶಿವಪ್ಪ ಯರೇಶಿಮಿ, ಇರ್ಶಾದಲಿ ದುಂಡಸಿ, ಫಕ್ಕಿರೇಶ ಬಾರ್ಕಿ ಹಾಗೂ ಜಗದೀಶ ಬೇಟಿಗೇರಿ ಅವರನ್ನು ಅಮ್ಮಾ ಸಂಸ್ಥೆ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಸನ್ಮಾನಿಸಲಾಯಿತು. ಗ್ರಾಪಂ ಕಾರ್ಯದರ್ಶಿ ಹನಮಂತಪ್ಪ ಸಂಗೂರ, ಗ್ರಂಥಾಲಯ ಮೇಲ್ವಿಚಾರಕಿ ಕವಿತಾ ಸೋಮಸಾಗರ, ಮಾಲತೇಶ ಕುಲಕರ್ಣಿ, ಎಂಬಿಕೆಗಳಾದ ವೀಣಾ ಕೆಂಬಾವಿಮಠ, ವಿಜಯಲಕ್ಷ್ಮಿ ಆರೇರ, ಬಸವಣ್ಣೆಪ್ಪ ಕುರವತ್ತಿಗೌಡ್ರ, ಶ್ರೀಪಾದಗೌಡ್ರ, ಪಾಟೀಲ, ಗುಡ್ಡಪ್ಪ ಆರೇರ, ಗಂಗಾಧರ ಬಡಿಗೇರ, ಸಣ್ಣಪ್ಪ ಹೊಸಮನಿ, ನಾಗಪ್ಪ ಬಡಿಗೇರ, ಶಿವಪ್ಪ ಅರಳಿ, ಯಲ್ಲಪ್ಪ ಕೆ., ಗುಡ್ಡಪ್ಪ ಎ. ಸೇರಿದಂತೆ ಗ್ರಾಪಂ ವ್ಯಾಪ್ತಿಯ ಅಂಗವಿಕಲರು ಹಾಗೂ ಗ್ರಾಪಂ ಸಿಬ್ಬಂದಿ ಇದ್ದರು.ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ
ಸವಣೂರು: ಪಟ್ಟಣದಲ್ಲಿ ಎಸ್‌ಸಿಪಿ, ಟಿಎಸ್‌ಪಿ ತುರ್ತು ಕಾಮಗಾರಿ ಹಿನ್ನೆಲೆ ಫೆ. 20ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ.