ಯಲ್ಲಾಪುರ: ವಿವಿಧ ಕಾರಣಗಳಿಂದ ಅಂಗವಿಕಲರಾಗಿರುವ ಸಮಾಜದ ಅನೇಕ ವ್ಯಕ್ತಿಗಳಿಗೆ ಬದುಕಿನ ನಿರ್ವಹಣೆ ಕಷ್ಟವಾದರೂ ಸ್ವಾಭಿಮಾನದಿಂದ, ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕುಂದರಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಮ್ಯಶ್ರೀ ತಿಳಿಸಿದರು.ತಾಲೂಕಿನ ಮಾವಿನಕಟ್ಟಾದ ಸ್ತ್ರೀಶಕ್ತಿ ಕಟ್ಟಡದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗಳ ಆಶ್ರಯದಲ್ಲಿ ಕುಂದರಗಿ ಗ್ರಾಪಂ ಹಮ್ಮಿಕೊಂಡಿದ್ದ ೨೦೨೪- ೨೫ನೇ ಸಾಲಿನ ವಿಶ್ವ ಅಂಗವಿಕಲರ ದಿನಾಚರಣೆ, ಆರೈಕೆದಾರರ ದಿನಾಚರಣೆ ಹಾಗೂ ಅಂಗವಿಕಲರ ಸಮನ್ವಯ ಗ್ರಾಮಸಭೆ ಉದ್ಘಾಟಿಸಿ, ಮಾತನಾಡಿದರು.ಸಾಮಾನ್ಯವಾಗಿ ಯಾವುದೇ ವಯಸ್ಸಿನವರಿಗೂ ಅಂಗವಿಕಲತೆ ಉಂಟಾಗಬಹುದಾಗಿದ್ದು, ಅಂಗವೈಕಲ್ಯತೆಗೊಳಗಾದವರು ಮಾನಸಿಕವಾಗಿ ಕುಗ್ಗದೇ, ದೈಹಿಕ ರಕ್ತದೊತ್ತಡವು ಮತ್ತು ಸಕ್ಕರೆ ಕಾಯಿಲೆಗಳ ಬಗ್ಗೆ ಗಮನಹರಿಸಿ ಅದನ್ನು ನಿಯಂತ್ರಣದಲ್ಲಿರಿಸಿಕೊಳ್ಳಬೇಕು, ವಿಶೇಷವಾಗಿ ಗರ್ಭಿಣಿಯರು ತಮ್ಮ ಆರೋಗ್ಯದೆಡೆ ನಿಗಾ ವಹಿಸಬೇಕು. ಅಂಗವಿಕಲರ ಕುರಿತಾಗಿ ಸಮಾಜದ ಅನುಕಂಪಕ್ಕಿಂತ ನೆರವಿನ ಗುಣ ಬೇಕು ಎಂದರು.ಗ್ರಾಪಂ ಸದಸ್ಯ ರಾಮಕೃಷ್ಣ ಹೆಗಡೆ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ಈವರೆಗೆ ೪೪ ಅಂಗವಿಕಲರನ್ನು ಗುರುತಿಸಿ ಅವರಿಗೆ ಸಾಧ್ಯವಿರುವ ನೆರವು ನೀಡಲಾಗಿದೆ. ಅಲ್ಲದೇ, ೭ ಅಂಗವಿಕಲರಿಗೆ ಉಚಿತ ಮನೆ ನೀಡಲಾಗಿದೆ ಎಂದರು.ಮತ್ತೋರ್ವ ಗ್ರಾಪಂ ಸದಸ್ಯ ಗಣೇಶ್ ಹೆಗಡೆ ಮಾತನಾಡಿ, ಗೌರವಾನ್ವಿತರೇ ಆಗಿರುವ ಅಂಗವಿಕಲರನ್ನು ಸಮಾಜದ ಮುಖ್ಯವಾಹಿನಿಗೆ ತರಲೆಂದೇ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ ಎಂದರು.ಸೇವಾ ಕಾರ್ಯಕರ್ತ ಸಲೀಂ ಶೇಖ್ ಮಾತನಾಡಿ, ಅಂಗವಿಕಲರಿಗಾಗಿ ಸರ್ಕಾರ ಜಾರಿಗೊಳಿಸಿರುವ ೧೬ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ರಸ್ತೆ, ಬೀದಿದೀಪ ಸಮಸ್ಯೆ ಪರಿಹರಿಸಲು ಆಗ್ರಹ
ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ, ಪಪಂ ಸದಸ್ಯ ಸೋಮೇಶ್ವರ ನಾಯ್ಕ, ಪ್ರಮುಖರಾದ ಪ್ರದೀಪ ಯಲ್ಲಾಪುರಕರ್, ವಿನೋದ ತಳೆಕರ್, ಸುನಿತಾ ವೆರ್ಣೆಕರ್, ರವಿ ದೇವಡಿಗ ಇತರರಿದ್ದರು.