ರಾಣಿಬೆನ್ನೂರು: ಗುರುಗಳು ಯಾವಾಗಲೂ ಭಕ್ತರ ಏಳ್ಗೆಯನ್ನು ಬಯಸುತ್ತಾರೆ. ಗುರುಗಳ ಆಶಯವನ್ನು ಅರ್ಥೈಸಿಕೊಂಡು ಸಮಾಜಕ್ಕೆ ಬೇಕಾದಂತೆ ಬದುಕುವುದು ಶಿಷ್ಯನ ಕರ್ತವ್ಯ ಎಂದು ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ನುಡಿದರು.
ಕಾರ್ತಿಕ ದೀಪೋತ್ಸವ ಕುರಿತು ನಿವೃತ್ತ ಪ್ರಾಧ್ಯಾಪಕ ಜಿ.ವಿ. ಕೋರಿ ಉಪನ್ಯಾಸ ನೀಡಿದರು. ಹೊನ್ನಾಳಿ ಪುರಸಭೆಯ ಸದಸ್ಯ ಡಾ. ಸುರೇಶ ಹೊಸಕೇರೆ, ಮಂಜನಗೌಡ ಸಣ್ಣಿಂಗಮ್ಮನವರ, ಬಿ.ಎಲ್. ಕುಮಾರಸ್ವಾಮಿ, ನಿವೃತ್ತ ಸಹಾಯಕ ತೋಟಗಾರಿಕಾ ಅಧಿಕಾರಿ ಶಿವನಗೌಡ ಪಾಟೀಲ, ಕರಬಸನಗೌಡ ಪೊಲೀಸ್‌ಗೌಡ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಶ್ರೀಮಠದಲ್ಲಿ ಕಾರ್ತಿಕ ದೀಪೋತ್ಸವ ನೆರವೇರಿಸಲಾಯಿತು.
ರಾಮಣ್ಣ ಪಾಗಾದಾರ, ಅಮೃತಗೌಡ ಹಿರೇಮಠ, ಜಗದೀಶ ಮಳೆಮಠ, ಮಂಜುಳಾ ಪಾಟೀಲ, ಚೆನ್ನವೀರಗೌಡ ಪಾಟೀಲ, ಲಲಿತಮ್ಮ ಹರನಗಿರಿ, ರತ್ನಾ, ಉಮೇಶ ವೀರಬಸಪ್ಪನವರ, ನಿವೃತ್ತ ಶಿಕ್ಷಕ ವಿ.ವೀ. ಹರಪನಹಳ್ಳಿ, ಕಸ್ತೂರೆಮ್ಮ ಪಾಟೀಲ, ಬಿದ್ದಾಡಪ್ಪ ಚಕ್ರಸಾಲಿ, ಪ್ರಭಾಕರ ಶಿಗ್ಲಿ, ಮೃತ್ಯುಂಜಯ ಪಾಟೀಲ, ಗೌರಿಶಂಕರಸ್ವಾಮಿ ನೆಗಳೂರುಮಠ, ಎಂ.ಕೆ. ಹಾಲಸಿದ್ದಯ್ಯಾ ಸ್ವಾಮಿಗಳು, ಕಲ್ಲಪ್ಪ ಅಂಗಡಕಿ, ಬಸವರಾಜ ಕುರವತ್ತಿ, ರಜನಿ ಕರಿಗಾರ, ಯುವರಾಜ ಹಿರೇಮಠ, ಎಸ್.ಎಂ. ಕರಿಗಾರ ಹಾಗೂ ಶ್ರೀ ದಾನೇಶ್ವರಿ ಜಾಗೃತಿ ಅಕ್ಕನ ಬಳಗ ಹಾಗೂ ಕದಳಿ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.