ಜೀವನ ರೂಪಿಸುವ ಶಿಕ್ಷಣ ನಿಮ್ಮದಾಗಲಿ

KannadaprabhaNewsNetwork |  
Published : Jan 03, 2025, 12:32 AM IST
ಕಾರ್ಯಕ್ರಮವನ್ನು ಶಾಸಕ ಪ್ರದೀಪ ಈಶ್ವರ ಉದ್ಘಾಟಿಸಿದರು. | Kannada Prabha

ಸಾರಾಂಶ

ಕಲಿಕೆಗೆ ಬಡತನ ಶ್ರೀಮಂತಿಕೆ ಮುಖ್ಯವಲ್ಲ, ನಮ್ಮಲ್ಲಿ ಛಲಬೇಕು, ಸಾಧಕನಿಗೆ ಯಾವುದೂ ಅಸಾಧ್ಯವಲ್ಲ. ಏನೇ ಸಾಧಿಸಬೇಕೆಂದಾಗ ಮೊದಲು ನಿರಂತರ ಪ್ರಯತ್ನ ನಿಮ್ಮದಾಗಿರಬೇಕು

ನರೇಗಲ್ಲ: ಅಕ್ಷರ ಕೇವಲ ಅಂಕ ಗಳಿಕೆಗೆ ಮಾತ್ರ ಸೀಮಿತಗೊಳಿಸಿಕೊಳ್ಳದೇ ಜೀವನ ರೂಪಿಸಿಕೊಳ್ಳುವಂತ ಶಿಕ್ಷಣ ನಿಮ್ಮದಾಗಬೇಕು. ಅಂದಾಗ ಮಾತ್ರ ನಾವು ಕಲಿತ ಶಿಕ್ಷಣಕ್ಕೆ ತಂದೆ-ತಾಯಿಗಳ ಆಶೋತ್ತರಕ್ಕೆ ನಮ್ಮಿಂದ ಸ್ಪಂದಿಸಲು ಸಾಧ್ಯ ಎಂದು ಚಿಕ್ಕಬಳ್ಳಾಪೂರ ಶಾಸಕ ಪ್ರದೀಪ ಈಶ್ವರ ಹೇಳಿದರು.

ಸಮೀಪದ ಹಾಲಕೆರೆಯಲ್ಲಿ ಅನ್ನದಾನೇಶ್ವರ ಜಾತ್ರಾಮಹೋತ್ಸವದ ಅಂಗವಾಗಿ ನಡೆದ ಅಕ್ಷರ ಉತ್ಸವ 2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಲಿಕೆಗೆ ಬಡತನ ಶ್ರೀಮಂತಿಕೆ ಮುಖ್ಯವಲ್ಲ, ನಮ್ಮಲ್ಲಿ ಛಲಬೇಕು, ಸಾಧಕನಿಗೆ ಯಾವುದೂ ಅಸಾಧ್ಯವಲ್ಲ. ಏನೇ ಸಾಧಿಸಬೇಕೆಂದಾಗ ಮೊದಲು ನಿರಂತರ ಪ್ರಯತ್ನ ನಿಮ್ಮದಾಗಿರಬೇಕು. ನಾವು ಇತರರನ್ನು ಮಾದರಿಯಾಗಿಟ್ಟುಕೊಳ್ಳದೇ ನಮ್ಮನ್ನೇ ನಾವು ಮಾದರಿಯಾಗುವಂತೆ ಜೀವನದಲ್ಲಿ ಸಾಗಬೇಕು ಎಂದರು.

ಡಿಡಿಪಿಐ ಆರ್.ಎಸ್. ಬುರಡಿ ಮಾತನಾಡಿ, ವಿದ್ಯಾರ್ಥಿಗಳು ಸಾಧನೆಯ ಹಾದಿಯಲ್ಲಿ ಮುನ್ನುಗ್ಗಲು ಏಕಾಗೃತೆ,ಅಧ್ಯಯನ, ಗುರುವಿನ ಮಾರ್ಗದರ್ಶನ, ತಂದೆ ತಾಯಿಗಳ ಆರ್ಶೀವಾದ ಬೇಕು. ಉತ್ತಮ ಶಿಕ್ಷಣದ ಜತೆಗೆ ಸಂಸ್ಕಾರ ನಿಮ್ಮ ಸಂಸ್ಥೆ ನೀಡುತ್ತಾ ಬಂದಿರುವುದರಿಂದ ನಿಮಗೆ ಜೀವನದ ಸಾಧನೆ ಕಷ್ಟವಾಗುವದಿಲ್ಲ. ಹಾಗಂತ ನೀವೆಲ್ಲ ಮೈಮರೆಯುವಂತಿಲ್ಲ ನಿರಂತರ ಶ್ರಮದ ಜತೆಗೆ ಕೇಂದ್ರಿಕೃತ ಅಧ್ಯಯನ ಮುಖ್ಯವಾಗಿರುತ್ತದೆ ಎಂದು ತಿಳಿಸಿದರು.

ಈ ವೇಳೆ ಅನ್ನದಾನೇಶ್ವರ ಸಂಸ್ಥಾನಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ, ಗರಗ ನಾಗಲಾಪುರ ಒಪ್ಪತೇಶ್ವರ ಮಠದ ನಿರಂಜನಪ್ರಭು ಸ್ವಾಮೀಜಿ ,ದರೂರ ಸಂಗನಬಸವೇಶ್ವರ ಮಠದ ಕೊಟ್ಟೂರು ದೇಶಿಕರು, ಶ್ರೀಧರಗಡ್ಡೆ ಮಠದ ಮರಿಕೊಟ್ಟೂರು ದೇಶಿಕರು, ಸೋಮಸಮುದ್ರದ ಸಿದ್ದಲಿಂಗ ದೇಶಿಕರು, ಬೂದಗುಂಪಾದ ಸಿದ್ದೇಶ್ವರ ದೇಶಿಕರು, ಸಂಗನಹಾಲದ ವಿಶ್ವೇಶ್ವರ ದೇವರು, ರವೀಂದ್ರನಾಥ ದೊಡ್ಡಮೇಟಿ, ಎನ್.ಆರ್. ಗೌಡರ, ಗದಗ ಕ್ಷೇತ್ರಶಿಕ್ಷಣಾಧಿಕಾರಿ ಎಂ.ಎಚ್.ಕಂಬಳಿ ಹಾಗೂ ಇತರರು ಇದ್ದರು.

ಜ್ಞಾನ ವಿಜ್ಞಾನ ವಸ್ತು ಪ್ರದರ್ಶನವನ್ನು ಡಿಡಿಪಿಐ ಆರ್.ಎಸ್. ಬುರುಡಿ ಉದ್ಘಾಟಿಸಿದರು.ಪ್ರಾ.ವೈ.ಸಿ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.ಮುಖ್ಯೋಪಾಧ್ಯಯ ಎಸ್.ಎನ್. ಹೂಲಗೇರಿ ಸ್ವಾಗತಿಸಿದರು. ಗಜೇಂದ್ರಗಡ ಅನ್ನದಾನೇಶ್ವರ ಪಪೂ ಮಹಾವಿದ್ಯಾಲಯದ ಪ್ರಾ. ವಸಂತ ಗಾರಗಿ ನಿರೂಪಿಸಿ ವಂದಿಸಿದರು.

PREV

Recommended Stories

ನೀಲಿ ಮೊಟ್ಟೆ ಇಟ್ಟ ಚನ್ನಗಿರಿಯ ನಾಟಿ ಕೋಳಿ: ಸ್ಥಳೀಯರಲ್ಲಿ ತೀವ್ರ ಕುತೂಹಲ
ಸಿಗಂದೂರಿನಲ್ಲಿ ವಾಟರ್ ಏರೋಡ್ರೋಮ್: ವಿಮಾನ ಟೇಕಾಫ್‌, ಲ್ಯಾಂಡಿಂಗ್‌! ಪ್ರವಾಸೋದ್ಯಮಕ್ಕೆ ಹೊಸ ಹೆಜ್ಜೆ?