ಕನ್ನಡದ ಅಸ್ಮಿತೆ ಉಳಿಸುವ ಕೆಲಸ ಮನೆಮನೆಯಿಂದಲೇ ಆರಂಭವಾಗಲಿ

KannadaprabhaNewsNetwork |  
Published : Nov 03, 2026, 02:00 AM IST
ಪೋಟೋ - 1ಕೆಎನ್ಎಲ್ಎಂ1 - ನೆಲಮಂಗಲ ನಗರದ ಕೋಟೆಬೀದಿಯಲ್ಲಿರುವ ಶ್ರೀ ಭುವನೇಶ್ವರಿ ದೇವಾಲಯದ ಆವರಣದಲ್ಲಿ ಕನ್ನಡ ಸಾಂಸ್ಕೃತಿಕ ರಂಗದ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಭುವನೇಶ್ವರಿ ತಾಯಿಗೆ ಪುಷ್ಪಾರ್ಚನೆ ಮಾಡಲಾಯಿತು. ಈ ಸಂದರ್ಭದಲ್ಲಿ ಕನ್ನಡ ಸಾಂಸ್ಕೃತಿಕ ರಂಗದ ಅಧ್ಯಕ್ಷ ಸಿದ್ದರಾಜು, ಎಂ.ವಿ ನೆಗಳೂರ, ರೋಟರಿ ಸಂಸ್ಥಾಪಕ ಅಧ್ಯಕ್ಷ  ಹೆಚ್  ಜಿ ರಾಜು, ಸಾಹಿತಿ ಚೌಡಯ್ಯ, ಜನಸೈನ್ಯ ಅಧ್ಯಕ್ಷ ನರಸಿಂಹಯ್ಯ, ರೋಟರಿ ಅಧ್ಯಕ್ಷ ಲೋಕೇಶ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಭಿಷೇಕ್ ಚಿಕ್ಕಮಾರನಹಳ್ಳಿ, ಕೃಷಿ ಸಂಶೋಧಕ ನಾಗರಾಜು, ಮಾಜಿ ಸೈನಿಕ ಎನ್.ಎಸ್. ಮೂರ್ತಿ (ಮಿಲಿಟರಿ ಮಾಮ), ಶಿವಲಿಂಗಯ್ಯ, ವೆಂಕಟೇಶ್ ಚೌತಾಯಿ, ಸಿರಾಜ್ ಅಹಮದ್, ನೂರುದ್ದಿನ್, ರಾಜಮ್ಮ, ಪ್ರಕಾಶ್, ಸೌಮ್ಯ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು, ಕನ್ನಡಪರ ಹೋರಾಟಗಾರರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು. | Kannada Prabha

ಸಾರಾಂಶ

ನೆಲಮಂಗಲ: ಗ್ರಾಮೀಣರ ಅಡುಗೆ ಮನೆಗಳಲ್ಲೂ ಆಂಗ್ಲ ಭಾಷೆಯ ಪ್ರಭಾವ ಹೆಚ್ಚಾಗುತ್ತಿದ್ದು, ನಮ್ಮ ಸಂಸ್ಕೃತಿಯಲ್ಲಿದ್ದ ಆತ್ಮೀಯ ಸಂಬಂಧಗಳ ಬದಲಾಗಿ ಅಂಕಲ್, ಆಂಟಿ ಸಂಬೋಧನೆ ಹೆಚ್ಚಾಗುತ್ತಿರುವುದರಿಂದ ಸಂಬಂಧಗಳ ಮೌಲ್ಯ ಕಡಿಮೆಯಾಗುತ್ತಿದೆ ಎಂದು ರೋಟರಿ ಸಂಸ್ಥಾಪಕ ಎಚ್.ಜಿ.ರಾಜು ಬೇಸರ ವ್ಯಕ್ತಪಡಿಸಿದರು

ನೆಲಮಂಗಲ: ಗ್ರಾಮೀಣರ ಅಡುಗೆ ಮನೆಗಳಲ್ಲೂ ಆಂಗ್ಲ ಭಾಷೆಯ ಪ್ರಭಾವ ಹೆಚ್ಚಾಗುತ್ತಿದ್ದು, ನಮ್ಮ ಸಂಸ್ಕೃತಿಯಲ್ಲಿದ್ದ ಆತ್ಮೀಯ ಸಂಬಂಧಗಳ ಬದಲಾಗಿ ಅಂಕಲ್, ಆಂಟಿ ಸಂಬೋಧನೆ ಹೆಚ್ಚಾಗುತ್ತಿರುವುದರಿಂದ ಸಂಬಂಧಗಳ ಮೌಲ್ಯ ಕಡಿಮೆಯಾಗುತ್ತಿದೆ ಎಂದು ರೋಟರಿ ಸಂಸ್ಥಾಪಕ ಎಚ್.ಜಿ.ರಾಜು ಬೇಸರ ವ್ಯಕ್ತಪಡಿಸಿದರು.

ನಗರದ ಶ್ರೀ ಭುವನೇಶ್ವರಿ ದೇವಾಲಯದ ಆವರಣದಲ್ಲಿ ಕನ್ನಡ ಸಾಂಸ್ಕೃತಿಕ ರಂಗ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ವರ್ಷಕ್ಕೊಮ್ಮೆ ಧ್ವಜಾರೋಹಣ ಮಾಡಿ ಕನ್ನಡ ರಾಜ್ಯೋತ್ಸವ ಆಚರಿಸಿದರೆ ಮಾತ್ರ ಸಾಲದು. ನಮ್ಮ ದೈನಂದಿನ ಬದುಕಿನಲ್ಲಿ ಕನ್ನಡ ಭಾಷೆ ಬಳಸಿ ಉಳಿಸಿ ಬೆಳೆಸಬೇಕು. ಮಕ್ಕಳಿಗೆ ಮನೆಯಲ್ಲಿ ಕನ್ನಡ ಮಾತಾಡುವುದನ್ನು ಕಲಿಸಬೇಕು. ಕನ್ನಡ ಭಾಷೆ, ಸಂಸ್ಕೃತಿ, ಆಚಾರ-ವಿಚಾರ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.

ನಿವೃತ್ತ ಪ್ರಾಧ್ಯಾಪಕ ಎಂ.ವಿ.ನೆಗಳೂರು ಮಾತನಾಡಿ, ಕನ್ನಡ ಭಾಷೆಗೆ ತನ್ನದೇ ಆದ ಸುದೀರ್ಘ ಇತಿಹಾಸ ಮತ್ತು ಶ್ರೀಮಂತ ಪರಂಪರೆಯಿದೆ. ಹಲವು ರಾಜಮನೆತನಗಳು ಈ ನಾಡನ್ನು ಆಳಿದ್ದು, ಕನ್ನಡ ಭಾಷೆ, ಸಾಹಿತ್ಯ, ಕಲೆ ಹಾಗೂ ಸಂಸ್ಕೃತಿಯ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿವೆ. ಇಂತಹ ಇತಿಹಾಸ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಂಸ್ಕೃತಿಕ ರಂಗದ ಅಧ್ಯಕ್ಷ ಸಿದ್ದರಾಜು, ಸಾಹಿತಿ ಚೌಡಯ್ಯ, ಜನಸೈನ್ಯ ಅಧ್ಯಕ್ಷ ನರಸಿಂಹಯ್ಯ, ರೋಟರಿ ಅಧ್ಯಕ್ಷ ಲೋಕೇಶ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಭಿಷೇಕ್ ಚಿಕ್ಕಮಾರನಹಳ್ಳಿ, ಕೃಷಿ ಸಂಶೋಧಕ ನಾಗರಾಜು, ಮಾಜಿ ಸೈನಿಕ ಎನ್.ಎಸ್.ಮೂರ್ತಿ, ಶಿವಲಿಂಗಯ್ಯ, ವೆಂಕಟೇಶ್ ಚೌತಾಯಿ, ಸಿರಾಜ್ ಅಹಮದ್, ನೂರುದ್ದಿನ್, ರಾಜಮ್ಮ, ಪ್ರಕಾಶ್, ಸೌಮ್ಯ ಇತರರು ಉಪಸ್ಥಿತರಿದ್ದರು.

ಪೋಟೋ - 1ಕೆಎನ್ಎಲ್ಎಂ1 -

ನೆಲಮಂಗಲದ ಶ್ರೀ ಭುವನೇಶ್ವರಿ ದೇವಾಲಯದ ಆವರಣದಲ್ಲಿ ಕನ್ನಡ ಸಾಂಸ್ಕೃತಿಕ ರಂಗ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಭುವನೇಶ್ವರಿ ತಾಯಿಗೆ ಪುಷ್ಪಾರ್ಚನೆ ಮಾಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

8 ರು. ಹಾಲಿನ ದರ ಏರಿಕೆಯ ವಿರುದ್ಧ ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ
ಅಡ್ಡಂಡ ಕಾರ್ಯಪ್ಪಗೆ ಮಸಿ: 2 ಕೇಸ್‌ ದಾಖಲು