)
ಕನ್ನಡಪ್ರಭ ವಾರ್ತೆ ಬೆಂಗಳೂರು
ಮಳೆ ಕೊರತೆ, ಇರಾನ್-ಅಮೆರಿಕ ಯುದ್ಧ ಸೇರಿದಂತೆ ವಿವಿಧ ಕಾರಣಗಳನ್ನು ಹೇಳಿ ದಿನ ನಿತ್ಯ ಬಳಸುವ ವಸ್ತುಗಳ ದರಗಳನ್ನು ಸರ್ಕಾರಗಳು ಏರಿಕೆ ಮಾಡುತ್ತಲೇ ಇವೆ. ಹೀಗಾಗಿ, ಇಂತಹ ಸಾಮಾನ್ಯ ವಸ್ತುಗಳು ಬಳಕೆಗೂ ಜನರು ಯೋಚಿಸುವಂತಾಗಿದೆ. ಬೇಕಾಬಿಟ್ಟಿಯಾಗಿ ಬೆಲೆಗಳನ್ನು ಏರಿಸುವ ಮೂಲಕ ಬಡವರು, ಮಧ್ಯಮ ವರ್ಗ ಸೇರಿದಂತೆ ದುಡಿಯುವ ಸಾಮಾನ್ಯ ವರ್ಗದವರನ್ನು ಅಯ್ಯೋ ಎನಿಸಿ ಹೊಟ್ಟೆ ಉರಿಸುತ್ತಿದ್ದಾರೆ ಎಂದು ಜನರು ಎಲ್ಲೆಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅಕ್ಕಿ, ಬೇಳೆ, ಶೇಂಗಾ, ಎಣ್ಣೆ, ಕಾಳುಗಳು ಸೇರಿ ದಿನಸಿಯಂತಹ ಅಗತ್ಯ ವಸ್ತುಗಳು ಬೆಲೆಯು ಸುಮಾರು ಶೇ.20ರಿಂದ ಶೇ.25ರಷ್ಟು ಏರಿಕೆಯಾಗಿದೆ. ಪೆಟ್ರೋಲ್, ಡೀಸಲ್, ಗ್ಯಾಸ್, ಮೊಬೈಲ್ ಸೇರಿದಂತೆ ಎಲೆಕ್ಟ್ರಾನಿಕ್ಸ್ ವಸ್ತುಗಳು ಕೂಡ ದುಬಾರಿಯಾಗಿವೆ. ಸೋನಾ ಮಸೂರಿ ಅಕ್ಕಿ ದರ 80 ರು.ನ ಗಡಿ ದಾಟಿ ಸೆಂಚುರಿ ಬಾರಿಸುವತ್ತಾ ಸಾಗಿದೆ. ಮಳೆ ಕೊರತೆಯಿಂದ ತರಕಾರಿಗಳ ದರವೂ ಏರಿಕೆಯಾಗಿದೆ. ಆದರೆ, ಬಡವರು, ಮಧ್ಯಮ ವರ್ಗದವರು, ದುಡಿಯುವ ವರ್ಗದ ಜನರ ಆದಾಯದಲ್ಲಿ ಮಾತ್ರ ಏರಿಕೆ ಆಗುತ್ತಿಲ್ಲ. ಜನಸಾಮಾನ್ಯರ ದುಡಿಮೆಯಲ್ಲ ಬರೀ ಹೊಟ್ಟೆ ಮತ್ತು ಬಟ್ಟೆಗೆ ಹೋಗುತ್ತಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಏರಿಕೆ ಪಟ್ಟಿ ಬೆಳೆಯುತ್ತಿದೆ: ಮಕ್ಕಳ ಶಾಲಾ- ಕಾಲೇಜು ಶುಲ್ಕ, ಮನೆ ಬಾಡಿಗೆ, ರೆಪೋ ಹೆಚ್ಚಳದಿಂದ ಬಡ್ಡಿ ಹೆಚ್ಚಾಗಿ ಇಎಂಐ ಹೆಚ್ಚಳ, ವಿದ್ಯುತ್ ಬಿಲ್, ದಿನಸಿ ವಸ್ತುಗಳು, ಸಾರಿಗೆ ವೆಚ್ಚ, ಮೊಬೈಲ್ ಫೋನ್ ರಿಚಾರ್ಜ್, ಮದ್ಯ, ವಿದ್ಯುತ್, ಮೆಟ್ರೋ ರೈಲು ದರ, ವಾಹನ ನೋಂದಣಿ ಶುಲ್ಕ, ವಾಹನ ಮಾಲಿನ್ಯ ತಪಾಸಣೆ ಶುಲ್ಕ, ನೀರಿನ ಶುಲ್ಕ, ಆಸ್ತಿ ನೋಂದಣಿ ಶುಲ್ಕ, ಹೆದ್ದಾರಿ ಟೋಲ್ ದರ, ದರ ಹೀಗೆ ಪ್ರತಿಯೊಂದರ ದರವೂ ಇತ್ತೀಚಿಗೆ ನಿರಂತರವಾಗಿ ಏರಿಕೆಯಾಗುತ್ತಿದೆಊಟ ಬಿಡ್ತೀವಿ, ಕಾಫಿ
ಎಲ್ಲಾ ರೇಟ್‌ಗಳು ಜಾಸ್ತಿಯಾಗಿವೆ. ಈಗ ಹಾಲು, ಮೊಸರಿನ ದರವನ್ನು ಏರಿಸಿದ್ದಾರೆ. ನಾವು ಒಮ್ಮೆ ಊಟ ಬಿಡಬಹುದು. ಆದರೆ, ಕಾಫಿ-ಟೀ ಕುಡಿಯುವುದನ್ನು ಬಿಡಲಾಗದು. ಈಗ ನಾವು ಕಡಿಮೆ ಮಾಡಿ ಎಂದು ಕೇಳಿದರೂ ಕಡಿಮೆ ಮಾಡುವುದಿಲ್ಲ. ಅನುಭವಿಸಬೇಕಷ್ಟೇ.
ಬಡ ಆಟೋ ಚಾಲಕರು
ಮೀಟರ್ ದರದಷ್ಟೇ ಹಣವನ್ನು ಪ್ರಯಾಣಿಕರಿಂದ ಪಡೆಯಿರಿ ಎನ್ನುತ್ತಾರೆ. ಆದರೆ, ಗ್ಯಾಸ್, ಪೆಟ್ರೋಲ್, ಹಾಲು, ಮನೆ ಬಾಡಿಗೆ, ಅಕ್ಕಿಯಿಂದ ಹಿಡಿದು ಪ್ರತಿಯೊಂದರ ಬೆಲೆ ಏರಿಕೆಯಾಗುತ್ತಲೇ ಇದೆ. ಬಡ ಆಟೋ ಚಾಲಕರು ಜೀವನ ನಡೆಸುವುದು ಹೇಗೆ?-ಗಣೇಶ್, ಆಟೋ ಚಾಲಕ
ಬಟ್ಟೆ, ಬಾಡಿಗೆಗೆ ಹೋಗ್ತಿದೆ
ಇನ್ನು ಮುಂದೆ ಟೀ-ಕಾಫಿಕುಡಿಯಲು ಯೋಚಿಸಬೇಕುದಿನಕ್ಕೆ ನಾಲ್ಕೈದು ಸಲ ಕಾಫಿ-ಟೀ ಕುಡಿಯುತ್ತೇವೆ. ಹೊಟೇಲ್‌ಗಳಲ್ಲಿ ದರ ಏರಿಕೆಯಾಗಿರುವ ಕಾರಣ ನಾವು ಅದಕ್ಕೂ ಯೋಚನೆ ಮಾಡಬೇಕಾಗುತ್ತದೆ. ಈಗಾಗಲೇ ರಂಗಭೂಮಿ ಕ್ಷೇತ್ರ ಮತ್ತು ಕಲಾವಿದರು ಸಂಕಷ್ಟದಲ್ಲಿದ್ದಾರೆ.-ರಮೇಶ, ರಂಗಭೂಮಿ ಕಲಾವಿದ
ಮಾಡುವವರ ಜೇಬಿಗೆ ಕತ್ತರಿ
ಪ್ರತಿ ಸಲ ಹಾಲಿನ ದರ 2-3 ರು. ಏರಿಕೆಯಾಗುತ್ತಿತ್ತು. ಈ ಬಾರಿ 8 ರಿಂದ 12ರು ರು. ಏರಿಕೆ ಮಾಡುವ ಮೂಲಕ ಜನರಿಗೆ ಶಾಕ್ ನೀಡಲಾಗಿದೆ. ಇದರಿಂದ ಹೊಟೇಲ್‌ನ ಕಾಫಿ, ಟೀ ಜೊತೆಗೆ ಇನ್ನಿತರ ತಿನಿಸುಗಳ ದರ ಹೆಚ್ಚಾಗುತ್ತಿವೆ. ಅನಿವಾರ್ಯವಾಗಿ ಹೊಟೇಲ್‌ನಲ್ಲಿ ತಿಂಡಿ, ಊಟ ಮಾಡುವವರ ಜೇಬಿಗೆ ಕತ್ತರಿ ಬೀಳುತ್ತದೆ.-ಮಂಜುನಾಥ, ಖಾಸಗಿ ಉದ್ಯೋಗಿಎಲ್ಲಾ ದರಗಳ ಏರಿಕೆಯಿಂದ
ಮಧ್ಯಮ ವರ್ಗಕ್ಕೆ ಹೆಚ್ಚು ಪೆಟ್ಟುಅಗತ್ಯ ವಸ್ತುಗಳು, ಸಾರಿಗೆ, ಇಂಧನದಂತಹ ಬೆಲೆ ಏರಿಕೆಯಿಂದ ಮಧ್ಯಮ ವರ್ಗದ ಕುಟುಂಬಗಳು ತೀವ್ರ ಒತ್ತಡಕ್ಕೆ ಸಿಲುಕಿವೆ. ಕಳೆದ 3 ವರ್ಷದಲ್ಲಿ ಹಾಲಿನ ದರ ಶೇ.38.5ರಷ್ಟು ಏರಿಕೆಯಾಗಿದೆ. ಮತ್ತೊಂದೆಡೆ ಅನೇಕ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಬೆಲೆ ಏರಿಕೆಗೆ ತಕ್ಕಂತೆ ವೇತನ ಹೆಚ್ಚಳ ಆಗುತ್ತಿಲ್ಲ. ಎಐನಿಂದ ಹುದ್ದೆಗಳು ಕಡಿತಗೊಳ್ಳುತ್ತಿವೆ. ನೇಮಕಾತಿ ಕಡಿಮೆಯಾಗಿವೆ. ಈ ಎಲ್ಲಾ ಸಮಸ್ಯೆಗಳು ಮಧ್ಯಮ ವರ್ಗಕ್ಕೆ ಹೆಚ್ಚು ಪೆಟ್ಟು ಕೊಡುತ್ತಿವೆ. ತೆರಿಗೆ ಪಾವತಿಸುವ ಅವರಿಗೆ ಅವರಿಗೆ ಹೇಳಿಕೊಳ್ಳುವಂತದ್ದೇನು ಸಿಗುತ್ತಿಲ್ಲ.-ಧನಂಜಯ ಪದ್ಮನಾಭಾಚಾರ್, ಸಂಚಾಲಕ, ತೆರಿಗೆ ಪಾವತಿದಾರರ ಫೋರಂ
ಹಣದುಬ್ಬರ ವಿಷಚಕ್ರದಲ್ಲಿಎಲ್ಲರೂ ಸಿಕ್ಕಿ ಹಾಕಿಕೊಂಡಿದ್ದಾರೆಹೈನುಗಾರರ ಸಮಸ್ಯೆಯನ್ನು ಪರಿಹರಿಸಲು ರಾಜ್ಯ ಸರ್ಕಾರ ಪರ್ಯಾಯ ಕ್ರಮಗಳನ್ನು ಕೈಗೊಳ್ಳಬೇಕಾಗಿತ್ತು. ರೈತರ ಜೊತೆಗೆ ಜನ ಸಾಮಾನ್ಯರ ಹಿತವನ್ನು ನೋಡಿಕೊಂಡು ಕ್ರಮ ಕೈಗೊಳ್ಳಬೇಕಾಗಿತ್ತು. ಇಂದು ಹಣದುಬ್ಬರದ ವಿಷಚಕ್ರದಲ್ಲಿ ಎಲ್ಲರೂ ಸಿಕ್ಕಿ ಹಾಕಿಕೊಂಡಿದ್ದಾರೆ.
-ಕೆ.ಉಮಾ, ರಾಜ್ಯ ಕಾರ್ಯದರ್ಶಿ, ಎಸ್‌ಯುಸಿಐ