ಇಡೀ ಸರ್ಕಾರವೇ ರಾಜೀನಾಮೆ ಕೊಡಲಿ: ಕಾರಜೋಳ ಒತ್ತಾಯ

KannadaprabhaNewsNetwork |  
Published : Sep 05, 2026, 01:30 AM IST
4ಕೆಆರ್ ಎಂಎನ್ 4.ಜೆಪಿಜಿಬಾಲ ರಾಧೆಯಾಗಿ ಜೂಬಿಯಾ ಅಹಮದ್ ಮತ್ತು ಬಾಲಕೃಷ್ಣನ ವೇಷದಲ್ಲಿ  ಬಾಲಕಿ ನಿಶ್ಚಿತಾಗೌಡ ಕಂಗೊಳಿಸಿದರು. | Kannada Prabha

ಸಾರಾಂಶ

ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಹೀಗಾಗಿ ರಾಜ್ಯದ 6.5 ಕೋಟಿ ಜನರು ರೊಚ್ಚಿಗೆದ್ದು ಬಿಜೆಪಿಯ ಹೋರಾಟಕ್ಕೆ ಬೆಂಬಲ ಮಾಡುತ್ತಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಸಿಂಧನೂರು

ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಹೀಗಾಗಿ ರಾಜ್ಯದ 6.5 ಕೋಟಿ ಜನರು ರೊಚ್ಚಿಗೆದ್ದು ಬಿಜೆಪಿಯ ಹೋರಾಟಕ್ಕೆ ಬೆಂಬಲ ಮಾಡುತ್ತಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಪಾದಯಾತ್ರೆ ಸಂದರ್ಭದಲ್ಲಿ ಶುಕ್ರವಾರ ಮಾತನಾಡಿ,ಮಳೆ ಇಲ್ಲ; ತೇವಾಂಶ ಕೊರತೆಯಿಂದ ಬೆಳೆ ಹಾಳಾ ಗುತ್ತಿದೆ. ಸರಕಾರವು ಕೂಡಲೇ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಬಿತ್ತನೆಗೆ ಬೀಜ ಮತ್ತು ಗೊಬ್ಬರಕ್ಕಾಗಿ ನೀಡಿದ ಸಾಲವನ್ನು ಸರಕಾರ ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ಗುಳೆ ಹೋಗುವುದನ್ನು ತಪ್ಪಿಸಿ: ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಕೂಡಲೇ ಪ್ರತಿ ಜಿಲ್ಲೆಗೂ ಜನರಿಗೆ ಅವರವರ ಊರಿನಲ್ಲೇ ಉದ್ಯೋಗ ಕೊಟ್ಟು ಗುಳೆ ಹೋಗುವುದನ್ನು ತಪ್ಪಿಸಬೇಕು. ಭ್ರಷ್ಟಾಚಾರದಲ್ಲಿ ಮುಳುಗಿ ಸರಕಾರದ ಖಜಾನೆಯಿಂದ 187 ಕೋಟಿ ಲೂಟಿ ಮಾಡಿ ದಲಿತರಿಗೆ ಸಿಗಬೇಕಾದ ಹಣವನ್ನು ಕಾಂಗ್ರೆಸ್ಸಿನ ಲೋಕಸಭೆ ಚುನಾವಣೆಗೆ ಉಪಯೋಗಿಸಿದ್ದಾರೆ. ಹಣ ಹುಜೂರ್ ಖಜಾನೆಯಿಂದ ಬಂದಿದ್ದು, ಮುಖ್ಯಮಂತ್ರಿಗಳೇ ಹಣಕಾಸು ಖಾತೆ ನೋಡಿಕೊಳ್ಳುತ್ತಿದ್ದರು. ಆದ್ದರಿಂದ ಇಡೀ ಸರಕಾರವೇ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು. ಅಲ್ಲದೇ ಜನರ ಕ್ಷಮೆ ಕೋರಬೇಕೆಂದು ಒತ್ತಾಯಿಸಿದರು.

ಮಾತಿನಲ್ಲೇ ಮಂಟಪ ಕಟ್ಟುವ ಡಿ.ಕೆ.ಶಿ: ಮೂರೂವರೆ ವರ್ಷಗಳಲ್ಲಿ ಅಭಿವೃದ್ಧಿಯೇ ಆಗಿಲ್ಲ; ಈಗ ಡಿ.ಕೆ.ಶಿವಕುಮಾರ್ ಅವರು ಕಳೆದ 3.5 ತಿಂಗಳಿ ನಿಂದ ಮಾತಿನಲ್ಲೇ ಮಂಟಪ ಕಟ್ಟುತ್ತಿದ್ದಾರೆ. ಜನಪರ, ನಾಗರಿಕ ಸರಕಾರದ ಜವಾಬ್ದಾರಿ ನಿಭಾಯಿಸುವಲ್ಲಿ ಡಿ.ಕೆ.ಶಿವಕುಮಾರ್ ಅವರು ಸಂಪೂರ್ಣವಾಗಿ ವಿಫಲ ವಾಗಿದ್ದಾರೆ ಎಂದರು. ಬರ ಪರಿಹಾರ ಮತ್ತು ಕುಡಿಯುವ ನೀರಿಗಾಗಿ ಪ್ರತಿ ಜಿಲ್ಲೆಗೆ 100 ಕೋಟಿ ರು. ಬಿಡುಗಡೆ ಮಾಡಬೇಕೆಂದು ಆಗ್ರಹವನ್ನು ಮುಂದಿಟ್ಟರು. ಬರಪರಿಹಾರ ಕಾಮಗಾರಿ, ಗೋಶಾಲೆ ಪ್ರಾರಂಭಿಸಲು ಒತ್ತಾಯಿಸಿದರು.

ಇದು ಲಜ್ಜೆಗೆಟ್ಟ ಸರ್ಕಾರ: ಕಾಂಗ್ರೆಸ್ಸಿನ ಇನ್ನೊಂದು ಪಾದಯಾತ್ರೆ ಕುರಿತು ಹೇಳಿಕೆ ಕುರಿತು ಪತ್ರಕರ್ತರು ಗಮನ ಸೆಳೆದರು. ಇದು ಲಜ್ಜೆಗೆಟ್ಟ ಸರಕಾರ. ಸರ್ಕಾರ, ಸಚಿವರು ಪ್ರತಿ ಜಿಲ್ಲೆಗಳಿಗೆ ಪ್ರವಾಸ ಮಾಡಿ ಜನರ ಸಮಸ್ಯೆ ತಿಳಿದುಕೊಳ್ಳಬೇಕಿತ್ತು. ಅವನ್ನು ಪರಿಹರಿಸಬೇಕಿತ್ತು. ಹಾಗಿದ್ದರೆ, ಅದು ನಾಗರಿಕ ಸರಕಾರ. ಆದರೆ, ಇದು ಲಜ್ಜೆಗೆಟ್ಟ ಸರ್ಕಾರ ಎಂದು ಟೀಕಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭೀಮಾ ನದಿ ನೀರು ಬಳೂರ್ಗಿ ಕೆರೆಗೆ: ರೈತರಲ್ಲಿ ಆಶಾಕಿರಣ
ಮೂಡುಗೂರು ಇಮ್ಮಡಿ ಉದ್ದಾನೇಶ್ವರ ಮಠದಲ್ಲಿ ವಚನ ಕಲ್ಯಾಣ