ಅಕ್ಕಪಡೆ ಯೋಜನೆ ಉದ್ದೇಶ ಮಹಿಳಾ ಸಬಲೀಕರಣ, ಸುರಕ್ಷತೆ: ಲಕ್ಷ್ಮೀ

KannadaprabhaNewsNetwork |  
Published : Sep 05, 2026, 01:15 AM IST
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಮಹಿಳಾ ಸುರಕ್ಷತೆ ಮತ್ತು ಜಾಗೃತಿ ಹಾಗೂ ಕಾನೂನು ಅರಿವು ಕಾರ್ಯಕ್ರಮದಲ್ಲಿ  ಅನವೇರಿ ಅಕ್ಕಪಡೆ ಅರಕ್ಷಕರಾದ ಲಕ್ಷ್ಮೀ ಮಾತನಾಡಿದರು. | Kannada Prabha

ಸಾರಾಂಶ

The purpose of "Akkapade " is women empowerment, safety: Lakshmi

- ನ್ಯಾಮತಿ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ

- - -

ಕನ್ನಡಪ್ರಭ ವಾರ್ತೆ ನ್ಯಾಮತಿ

ಮಹಿಳೆಯರು, ವಿದ್ಯಾರ್ಥಿನಿಯರು ಮತ್ತು ಮಕ್ಕಳ ರಕ್ಷಣೆಗಾಗಿ ರಚಿಸಲಾದ ವಿಶೇಷ ಮಹಿಳಾ ಪೊಲೀಸ್‌ ತಂಡ ಅಕ್ಕಪಡೆಯಾಗಿದೆ. ಮಹಿಳೆಯರ ಸಬಲೀಕರಣ ಮತ್ತು ಸುರಕ್ಷತೆಗೆ ಈ ಯೋಜನೆ ಒಂದು ಭದ್ರತಾ ಗುರಾಣಿಯಾಗಿದೆ ಎಂದು ಅನವೇರಿ ಅಕ್ಕಪಡೆ ಆರಕ್ಷಕರಾದ ಲಕ್ಷ್ಮೀ ತಿಳಿಸಿದರು.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ದಾವಣಗೆರೆ ಅಕ್ಕಪಡೆ, ದಾವಣಗೆರೆ ಆರಕ್ಷಕ ಠಾಣೆ ಹಾಗೂ ಕರ್ನಾಟಕ ಪಬ್ಲಿಕ್‌ ಶಾಲೆಯ ಸರ್ಕಾರಿ ಪದವಿಪೂರ್ವ ಕಾಲೇಜು ವಿಭಾಗ ಮತ್ತು ರಾಷ್ಟ್ರೀಯ ಸೇವಾ ಘಟಕದ ಆಶ್ರಯದಲ್ಲಿ ನಡೆದ ಮಹಿಳಾ ಸುರಕ್ಷತೆ ಮತ್ತು ಜಾಗೃತಿ ಹಾಗೂ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಕಾಲೇಜು, ಬಸ್‌ ನಿಲ್ದಾಣ, ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಕಿರುಕುಳ ನೀಡುವವರ ವಿರುದ್ಧ ಈ ಪಡೆ ಕಠಿಣ ಕ್ರಮ ಕೈಗೊಳ್ಳುತ್ತದೆ. ಪ್ರತಿಯೊಬ್ಬ ಮಹಿಳೆಯರು ಇದರ ಸೌಲಭ್ಯ ಪಡೆದು ಧೈರ್ಯವಾಗಿ ಮುನ್ನಡೆಯಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಎಚ್ಚರಿಕೆ ವಹಿಸಬೇಕು. ಯಾವುದೇ ರೀತಿಯ ಸಮಸ್ಯೆಗಳಾದಲ್ಲಿ ಎದೆಗುಂದದೇ ಕೂಡಲೇ 112 ತುರ್ತು ಕರೆ ಮಾಡುವ ಮೂಲಕ ಸಹಾಯ ಪಡೆಯಬೇಕು ಎಂದು ಹೇಳಿದರು.

ದಿನೇದಿನೇ ಹೆಣ್ಣುಮಕ್ಕಳಿಗೆ ಸಮಸ್ಯೆಗಳು ಬಹಳ ಹೆಚ್ಚಾಗುತ್ತಿವೆ. ಯಾವುದೇ ಸಮಸ್ಯೆಗಳು ಉಂಟಾದರೂ ಅಕ್ಕಪಡೆಗೆ ಪೋನ್‌ ಮಾಡಿದರೆ ಸಹಾಯ, ಸಹಕಾರ ಸಂರಕ್ಷಣೆ ನಮ್ಮ ಉದ್ದೇಶವಾಗಲಿದೆ. ಪೋಕ್ಸೋ ಕಾಯಿದೆ ಸೈಬರ್‌ ಸಹಾಯವಾಣಿ 1930, ಮಹಿಳಾ ಸಹಾಯವಾಣಿ 1098,181ನ್ನು ಬಳಸಿಕೊಳ್ಳಿ ಸುರಕ್ಷಿತ ಜೀವನ ನಿಮ್ಮದಾಗಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಅಗತ್ಯ ಜಾಗೃತಿ ವಹಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ವಿ.ಪಿ.ಪೂರ್ಣಾನಂದ ಮಾತನಾಡಿ ಮಹಿಳೆಯರು, ಹೆಣ್ಣುಮಕ್ಕಳು ಬಹಳ ಜಾಗೃತಿ ಹೊಂದಬೇಕು. ಮಹಿಳೆಯರಿಗೆ ಧೈರ್ಯ ತುಂಬಲು ಅವರಿಗೆ ಸ್ವಯಂರಕ್ಷಣೆ ನೀಡಲು ಮುಂದಾಗಿರುವ ಅಕ್ಕ ಪಡೆ ಯೋಜನೆ ನೆರವನ್ನು ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.

ಅಕ್ಕಪಡೆಯ ಶಿಲ್ಪಾ, ಶಶಿಕಲಾ, ಉಪನ್ಯಾಸಕರಾದ ಗಂಗಾಧರ ನವುಲೆ, ಕೋಮಲಮ್ಮ, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದ್ದರು.

- - -

-ಚಿತ್ರ4.20261_191.JPG:

ನ್ಯಾಮತಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಮಹಿಳಾ ಸುರಕ್ಷತೆ ಮತ್ತು ಜಾಗೃತಿ ಹಾಗೂ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅನವೇರಿ ಅಕ್ಕಪಡೆ ಆರಕ್ಷಕರಾದ ಲಕ್ಷ್ಮೀ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿಂಡಿಕೇಟ್ ಸದಸ್ಯತ್ವದಿಂದ ಕನ್ನಾಳೆ ವಜಾಗೊಳಿಸಿ
ಅನಿಷ್ಟ ಕಟ್ಟುಪಾಡುಗಳನ್ನು ಬಿಡಬೇಕಾಗಿದೆ