ಹಿರೇಕೆರೂರು: ಅಂಗವಿಕಲರ ಮಕ್ಕಳ ಪೋಷಣೆ ಶಿಕ್ಷಣ ಅಭಿವೃದ್ಧಿಯಲ್ಲಿ ಪೋಷಕರು ಪಾತ್ರ ಬಹುಮುಖ್ಯವಾಗಿದೆ ಎಂದು ಶಾಸಕ ಯು.ಬಿ. ಬಣಕಾರ ತಿಳಿಸಿದರು.ಪಟ್ಟಣದ ಗುರುಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರದ ಆಶ್ರಯದಲ್ಲಿ ಹಿರೇಕೆರೂರು ಹಾಗೂ ರಟ್ಟೀಹಳ್ಳಿ ತಾಲೂಕಿನ ಅಂಗವಿಕಲರ ಮಕ್ಕಳಿಗೆ ಸಾಧನ- ಸಲಕರಣೆಗಳನ್ನು ವಿತರಿಸಿ ಮಾತನಾಡಿದರು.ಪ್ರತಿ ವರ್ಷದಂತೆ ಈ ವರ್ಷವೂ ಶಿಕ್ಷಣ ಇಲಾಖೆಯಲ್ಲಿರುವ ಅಂಗವಿಕಲರ ಮಕ್ಕಳಿಗೆ ಸರ್ಕಾರ ಸಾಧನ ಸಲಕರಣೆಗಳನ್ನು ನೀಡಿದೆ. 41 ಅಂಗವಿಕಲ ಮಕ್ಕಳಿಗೆ ಟ್ರೈಸಿಕಲ್, ವೀಲ್ ಚೇರ್, ಹಿಯರಿಂಗ್ ಮೊದಲಾದ ಸಾಧನ ಸಲಕರಣೆಗಳನ್ನು ವಿತರಣೆ ಮಾಡಲಾಗಿದ್ದು, ಇವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶ್ರೀಧರ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬುರಡೀಕಟ್ಟಿ, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಂದ್ರ ಬಡಳ್ಳಿ, ಕ್ಷೇತ್ರ ಸಮನ್ವಯಾಧಿಕಾರಿ ಎನ್. ಸುರೇಶಕುಮಾರ್, ಪಿಎಂ ಪೋಷಣ್ ಅಭಿಯಾನದ ಸಹಾಯಕ ನಿರ್ದೇಶಕ ಎಚ್.ಎಚ್. ಜಾಡರ, ಸುರೇಶ ಅಜ್ಜಪ್ಪನವರ, ವಸಂತರಾವ್ ಪಾಟೀಲ, ರವಿಕುಮಾರ್, ನಂದೀಶ್ ಲಮಾಣಿ, ಆರ್.ಎನ್. ದೊಣ್ಣೇರ, ವಾಣಿಶ್ರೀ, ಎಂ.ಬಿ. ಹಾದಿಮನಿ, ಜೆ.ಬಿ. ಜೋಗಿಹಳ್ಳಿ, ಮಹೇಶ್, ಭಾರತಿ, ಬಸಯ್ಯ ಹಾಗೂ ವಿಧ್ಯಾರ್ಥಿಗಳು ಪೋಷಕರು ಇದ್ದರು.ರೋಸ್‌ಮೆರಿ ಬೆಳೆ ಉತ್ಪಾದನೆ, ಮೌಲ್ಯವರ್ಧನೆ ತರಬೇತಿರಾಣಿಬೆನ್ನೂರು: ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿಯ 20ನೇ ಕಂತಿನ ನೇರ ಬಿಡುಗಡೆ ಸಮಾರಂಭದ ಅಂಗವಾಗಿ ರೋಸ್‌ಮೆರಿ ಬೆಳೆಯ ಉತ್ಪಾದನೆ, ಮೌಲ್ಯವರ್ಧನೆ ಮತ್ತು ಇ- ಕೃಷಿ ಮಾಹಿತಿ ತಂತ್ರಜ್ಞಾನ ಕುರಿತು ತರಬೇತಿ ಕಾರ್ಯಕ್ರಮ ನಡೆಯಿತು.ಹನುಮನಮಟ್ಟಿ ಕೃ.ಮ.ವಿ. ಡೀನ್ ಡಾ. ಎ.ಜಿ. ಕೊಪ್ಪದ ಮಾಹಿತಿ ನೀಡಿದರು. ಧಾರವಾಡ ಕೃಷಿ ವಿವಿ ಆಡಳಿತ ಮಂಡಳಿ ಸದಸ್ಯ ವೀರನಗೌಡ ಪೊಲೀಸಗೌಡ್ರ ಕಾರ್ಯಕ್ರಮ ಉದ್ಘಾಟಿಸಿದರು. ಕೃಷಿ ಇಲಾಖೆಯಲ್ಲಿ ದೊರಕುವ ವಿವಿಧ ಯೋಜನೆ ಮತ್ತು ಸೌಲಭ್ಯಗಳ ಬಗ್ಗೆ ರೈತರಿಗೆ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಎ. ಎಚ್. ಬಿರಾದಾರ ಮಾಹಿತಿ ನೀಡಿದರು.ಹಿರಿಯ ತಾಂತ್ರಿಕ ಅಧಿಕಾರಿ ಚಂದ್ರಕಾಂತ ಕೋಟಬಾಗಿ ಮಾಹಿತಿ ನೀಡಿದರು. ಡಾ. ಅಕ್ಷತಾ ರಾಮಣ್ಣನವರ, ಡಾ. ಸಿದ್ದಗಂಗಮ್ಮ ಕೆ.ಆರ್., ಡಾ. ಸಂತೋಷ ಎಚ್.ಎಂ., ಡಾ. ಮಹೇಶ ಕಡಗಿ, ಡಾ. ರಶ್ಮಿ ಸಿ.ಎಂ., ಡಾ. ಬಸಮ್ಮ ಹಾದಿಮನಿ, ಶಿವಪ್ಪ ಹಣ್ಣಿ, ಕೃಷ್ಣಾನಾಯಕ ಎಲ್., ಶಬ್ಬೀರ ಬೆಳಕೇರಿ, ರಮೇಶ ಅಗಸನಹಳ್ಳಿ, ಸಂತೋಷ ನಾಯಕ್ ಎಲ್., ಪ್ರಗತಿಪರ ರೈತರಾದ ಶಿವಕುಮಾರ ಶಿಡಗನಾಳ, ಮಲ್ಲಿಕಾರ್ಜುನ ನೆಗಳೂರ ಹಾಗೂ 100ಕ್ಕೂ ಹೆಚ್ಚು ರೈತರು ಇದ್ದರು.