ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸುಳ್ಳು ಆರೋಪ ನಿಲ್ಲಿಸಲಿ

KannadaprabhaNewsNetwork |  
Published : Jan 09, 2025, 12:47 AM IST
ಫೋಟೋ: 8 ಹೆಚ್‌ಎಸ್‌ಕೆ 1ದಲಿತ ಸಂಘರ್ಷ ಸಮಿತಿ ಕರ್ನಾಟಕ ರಾಜ್ಯ ಸಂಚಾಲಕ ಆಯುಷ್ಮಾನ್ ಅಣ್ಣಯ್ಯ ಭಾವಚಿತ್ರ. | Kannada Prabha

ಸಾರಾಂಶ

ಅನಾವಶ್ಯಕವಾಗಿ ಪ್ರಿಯಾಂಕ್ ಖರ್ಗೆಯವರ ರಾಜೀನಾಮೆ ಕೇಳುವ ಬಿಜೆಪಿಯವರು ಯಡಿಯೂರಪ್ಪರ ಮೇಲೆ ಪೋಕ್ಸೋ ಕೇಸ್‌ನಲ್ಲಿ ಅವರ ಮಕ್ಕಳು ರಾಜೀನಾಮೆ ಕೊಟ್ಟಿಲ್ಲ.

ಕನ್ನಡಪ್ರಭ ವಾರ್ತೆ ಹೊಸಕೋಟೆಬಿಜೆಪಿಗರ ನೀಚ ಮನಸ್ಥಿತಿಗಳು ಸಚಿವ ಪ್ರಿಯಾಂಕ್ ಖರ್ಗೆರವರ ವಿರುದ್ಧದ ಸುಳ್ಳು ಆರೋಪದ ಹೋರಾಟವನ್ನು ಕೂಡಲೇ ನಿಲ್ಲಿಸದಿದ್ದರೇ ರಾಜ್ಯಾದ್ಯಂತ ಬಿಜೆಪಿಗರ ವಿರುದ್ಧ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ದಲಿತ ಸಂಘರ್ಷ ಸಮಿತಿ ಕರ್ನಾಟಕ ರಾಜ್ಯ ಸಂಚಾಲಕ ಆಯುಷ್ಮಾನ್ ಅಣ್ಣಯ್ಯ ತಿಳಿಸಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗುತ್ತಿಗೆದಾರ ಸಚಿನ್ ಪಾಂಚಾಳ ರವರ ಡೆತ್ ನೋಟ್ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ಹೆಸರು ಉಲ್ಲೇಖಿಸಿಲ್ಲ. ಅನಾವಶ್ಯಕವಾಗಿ ಪ್ರಿಯಾಂಕ್ ಖರ್ಗೆಯವರ ರಾಜೀನಾಮೆ ಕೇಳುವ ಬಿಜೆಪಿಯವರು ಯಡಿಯೂರಪ್ಪರ ಮೇಲೆ ಪೋಕ್ಸೋ ಕೇಸ್‌ನಲ್ಲಿ ಅವರ ಮಕ್ಕಳು ರಾಜೀನಾಮೆ ಕೊಟ್ಟಿಲ್ಲ. ದೇವೇಗೌಡರ ಮೊಮ್ಮಗ ಅತ್ಯಾಚಾರ ಪ್ರಕರಣದಲ್ಲಿ ಅವರ ಕುಟುಂಬದವರು ರಾಜೀನಾಮೆ ಕೊಟ್ಟಿಲ್ಲ. ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಸೋದರ ವಂಚನೆ ಮಾಡಿರುವ ಕೇಸ್ ದಾಖಲಾದಾಗ ಜೋಶಿ ಅವರು ರಾಜೀನಾಮೆ ಕೊಟ್ಟಿಲ್ಲ. ಇವರ್ಯಾರಿಗೂ ಇಲ್ಲದ ನೈತಿಕತೆ ಪ್ರಿಯಾಂಕ್ ಖರ್ಗೆ ಅವರಿಗೆ ಮಾತ್ರ ಯಾಕೆ. ಮೋದಿ ಅವರ ಆಪ್ತ ಆದಾನಿ ಮೇಲೆ ಕೇಸ್ ದಾಖಲಾಗಿಯಿಲ್ಲ ಅವರ ಬಂಧನಕ್ಕೆ ಅಮೇರಿಕಾದ ಕೋರ್ಟ್ ವಾರೆಂಟ್ ಹೊರಡಿಸಿದೆ. ಹಾಗಿದ್ದರೆ ಮೋದಿ ಕೂಡ ರಾಜೀನಾಮೆಗೆ ಒತ್ತಾಯಿಸ್ತೀರಾ? ಎಂದರು.ಸಂವಿಧಾನದ ನೀಡಿದ ಡಾ.ಅಂಬೇಡ್ಕರ್ ರವರ ಹೆಸರೇಳುವುದು ಪ್ಯಾಷನ್ ಎಂದು ಸಂಸತ್ತಿನಲ್ಲಿ ಅವಮಾನಿಸಿದ ಕೇಂದ್ರ ಗೃಹ ಮಂತ್ರಿ ಅಮಿತ್‌ಶಾ ಹೇಳಿಕೆಯನ್ನು ವಿಶ್ವಮಟ್ಟದಲ್ಲಿ ಬುದ್ದಿಜೀವಿಗಳು ಖಂಡಿಸಿ, ಛೀಮಾರಿ ಹಾಕಿದರು. ಅಲ್ಲದೇ, ಭಾರತದಲ್ಲಿ ದೇಶಾದಾದ್ಯಂತ ಪ್ರತಿಭಟನೆಗಳು ನಗರ ಪ್ರದೇಶಗಳ ಬಂದ್ ಮೂಲಕ ಬಿಜೆಪಿಯನ್ನು ಅಟ್ಟಾಡಿಸುತ್ತಿರುವುದನ್ನು ವಿಷಯಾಂತರ ಮಾಡಿ ರಾಜ್ಯದ ಜನರ ದಿಕ್ಕು ತಪ್ಪಿಸುವ ಸಲುವಾಗಿ ಪ್ರಿಯಾಂಕ್ ಖರ್ಗೆಯವರ ವಿರುದ್ದ ಪ್ರತಿಭಟನೆ ಮಾಡುತ್ತಿರುವುದು ಸರಿಯಲ್ಲ.ಪ್ರಿಯಾಂಕ್ ಖರ್ಗರವರು ಕಳೆದ ಬಿಜೆಪಿ ಸರ್ಕಾರದ ಬಿಟ್ ಕಾಯಿನ್ ಮತ್ತು ಕ್ರಿಪ್ಟೋ ಕರೆನ್ಸಿ ಹಗರಣ, ಪಿ.ಎಸ್.ಐ ಪರೀಕ್ಷಾ ಹಗರಣಗಳಂತಹ ಪ್ರಮುಖ ಹಗರಣಗಳನ್ನು ಪತ್ತೆ ಹಚ್ಚಿ ಇಡೀ ಬಿಜೆಪಿ ಸರ್ಕಾರದ ಭ್ರಷ್ಟಾಚಾರವನ್ನು ಬಯಲಿಗೆಳೆದ ಕಾರಣಕ್ಕೆ ಪ್ರಿಯಾಂಕ್ ಖರ್ಗೆರವರನ್ನು ನೀವು ಟಾರ್ಗೆಟ್ ಮಾಡಿರುವುದು ಹೀನ ರಾಜಕಾರಣ ಎಂದು ದೂರಿದರು.

ಫೋಟೋ: 8 ಹೆಚ್‌ಎಸ್‌ಕೆ 1ದಲಿತ ಸಂಘರ್ಷ ಸಮಿತಿ ಕರ್ನಾಟಕ ರಾಜ್ಯ ಸಂಚಾಲಕ ಆಯುಷ್ಮಾನ್ ಅಣ್ಣಯ್ಯ ಭಾವಚಿತ್ರ.

PREV

Recommended Stories

‘ಕನ್ನಡ ಸಂಘ ಬಹರೈನ್‌’ಗೆ ಸರ್ಕಾರದಿಂದ ₹1 ಕೋಟಿ
ತಲೆಬುರುಡೆ ತಂದಿದ್ದು ವಿಠಲಗೌಡ: ಕೋರ್ಟಲ್ಲಿ ಸಾಕ್ಷ್ಯ