ಹೆಣ್ಣು ಕರು ಪ್ರದರ್ಶನ ನಿರಂತರವಾಗಿ ನಡೆಯಲಿ

KannadaprabhaNewsNetwork |  
Published : Dec 28, 2025, 02:45 AM IST
ಡ | Kannada Prabha

ಸಾರಾಂಶ

ಹೈನುಗಾರಿಕೆ ಪ್ರೋತ್ಸಾಹಿಸಲು ಹೆಣ್ಣು ಕರುಗಳ ಪ್ರದರ್ಶನ ನಡೆಯುತ್ತಿದ್ದು, ಜಿಲ್ಲೆಯಲ್ಲಿ ನಿರಂತರವಾಗಿ ನಡೆಯಲಿ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಹೇಳಿದರು.

ಹೆಣ್ಣು ಕರುಗಳ ಪ್ರದರ್ಶನದಲ್ಲಿ ಶಾಸಕ ಗಣೇಶ್‌ ಪ್ರಸಾದ್‌ ಅಭಿಮತ । ಈ ಕಾರ್ಯಕ್ರಮದಿಂದ ಆರೋಗ್ಯವಂತ ರಾಸುಗಳ ಪತ್ತೆಗೆ ಸಹಕಾರಿ

ಕನ್ನಡಪ್ರಭ ವಾರ್ತೆ, ಗುಂಡ್ಲುಪೇಟೆ

ಹೈನುಗಾರಿಕೆ ಪ್ರೋತ್ಸಾಹಿಸಲು ಹೆಣ್ಣು ಕರುಗಳ ಪ್ರದರ್ಶನ ನಡೆಯುತ್ತಿದ್ದು, ಜಿಲ್ಲೆಯಲ್ಲಿ ನಿರಂತರವಾಗಿ ನಡೆಯಲಿ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಹೇಳಿದರು.

ತಾಲೂಕಿನ ಹಸಗೂಲಿ ಗ್ರಾಮದಲ್ಲಿ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾ ಮಂಡಳಿ, ಚಾಮರಾಜನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಹಾಗೂ ಹಸಗೂಲಿ ಹಾಲು ಉತ್ಪಾದಕರ ಸಂಘದ ಸಂಯಕ್ತಾಶ್ರಯದಲ್ಲಿ ಹೆಣ್ಣು ಕರುಗಳ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹೆಣ್ಣು ಕರುಗಳ ಪ್ರದರ್ಶನದಲ್ಲಿ ಆರೋಗ್ಯವಂತ ರಾಸುಗಳ ಪತ್ತೆಗೆ ಸಹಕಾರಿಯಾಗಿದೆ. ಹೆಣ್ಣು ಕರುಗಳ ಪ್ರದರ್ಶನದಲ್ಲಿ ಪ್ರಥಮ, ದ್ವಿತೀಯ ಬಹುಮಾನ ಕೊಡುವ ಮೂಲಕ ಪ್ರೋತ್ಸಾಹಿಸುವ ಕೆಲಸ ಆಗಲಿ ಜಿಲ್ಲೆಯಲ್ಲಿ ನಿರಂತರವಾಗಿ ನಡೆಯಲಿ ಎಂದರು.

ಚಾಮುಲ್‌ ಆಡಳಿತ ಮಂಡಳಿ ₹೫೦ ಕೋಟಿ ಅನುದಾನದ ಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದು, ಮುಖ್ಯಮಂತ್ರಿಗಳು ಕೂಡ ಅನುದಾನ ನೀಡಲು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ನಾನೂ ಕೂಡ ಮತ್ತೊಮ್ಮೆ ಮನವಿ ಮಾಡುವುದಾಗಿ ಹೇಳಿದರು.

ಚಾಮುಲ್‌ ಅಧ್ಯಕ್ಷ ಎಂ.ನಂಜುಂಡಸ್ವಾಮಿ ಮಾತನಾಡಿ, ಹೈನುಗಾರಿಕೆಗೆ ಉತ್ತೇಜಿಸಲು ಕರುಗಳ ಪ್ರದರ್ಶನ ಪ್ರೋತ್ಸಾಹಿಸುವ ಕೆಲಸ ಕೆಎಂಎಫ್‌ ಹಾಗೂ ಚಾಮುಲ್‌ ಸ್ಥಳೀಯ ಡೇರಿಗಳ ಮೂಲಕ ಹೆಣ್ಣು ಕರುಗಳ ಪ್ರದರ್ಶನ ಆಯೋಜಿಸಲಾಗಿದೆ ಎಂದರು.

ಹಸು ಕರು ಹಾಕಿದ ಬಳಿಕ ಕನಿಷ್ಟ ೨೦ ದಿನಗಳ ಕಾಲ ಹಾಲು ಕುಡಿಯಲು ಅವಕಾಶ ಮಾಡಿಕೊಟ್ಟರೆ ಕರುಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಕೃಷಿ ಹೊತೆಗೆ ಹೈನುಗಾರಿಕೆಗೆ ರೈತರು ಹೆಚ್ಚು ನೀಡಬೇಕು ಜೊತೆಗೆ ಚಾಮುಲ್‌ ನಲ್ಲಿ ಸಿಗುವ ಸೌಲಭ್ಯ ಪಡೆದುಕೊಳ್ಳಿ ಎಂದರು.ಚಾಮುಲ್‌ ೨೦೧೫ ರಲ್ಲಿ ಆರಂಭಗೊಂಡ ಬಳಿಕ ವಾರ್ಷಿಕ ₹೫೦೦ ಕೋಟಿ ವಹಿವಾಟು ನಡೆಸುತ್ತಿದೆ ಎಂದು ಚಾಮುಲ್‌ ವ್ಯವಸ್ಥಾಪಕ ನಿರ್ದೇಶಕ ಕೆ.ರಾಜಕುಮಾರ್‌ ಹೇಳಿದರು.೨೦೧೫ ರಲ್ಲಿ ಮಾಜಿ ಸಚಿವ ದಿವಂಗತ ಎಚ್.ಎಸ್.‌ಮಹದೇವಪ್ರಸಾದ್‌ ಆಸಕ್ತಿ ಫಲವಾಗಿ ಉದಯವಾದ ಬಳಿಕ ಆಡಳಿತಾಧಿಕಾರಿ ಹಾಗೂ ಆಡಳಿತ ಮಂಡಳಿ ಅಧಿಕಾರ ನಡೆಸಿದ್ದು,ಇದೀಗ ವಾರ್ಷಿಕ ೫೦೦ ಕೋಟಿ ವಹಿವಾಟು ನಡೆಸುತ್ತಿದೆ ಇದೇನು ಕಡಿಮೆ ಸಾಧನೆಯಲ್ಲ ಎಂದರು. ಚಾಮುಲ್‌ ೩ ಲಕ್ಷ ಲೀಟರ್‌ ಹಾಲು ಶೇಖರಣೆ ಮಾಡುತ್ತಿದೆ. ಲೀಟರ್‌ ಹಾಲಿಗೆ ಸರಾಸರಿ ೩೭ ರು.ನೀಡುತ್ತಿದೆ. ೮೫ ಸಾವಿರ ಲೀಟರ್‌ ಹಾಲು ಮಾರಾಟವಾಗುತ್ತಿದೆ. ಯುಎಚ್‌ ಡಿ ಹಾಲು ೧ ಲಕ್ಷ ಲೀಟರ್‌ ಮಾರಾಟವಾಗುತ್ತಿದೆ. ಹೆಣ್ಣು ಕರುಗಳ ಪ್ರದರ್ಶನ ಕೆಎಂಎಫ್‌, ಚಾಮುಲ್ ಹಾಗೂ ಸ್ಥಳೀಯ ಸಂಘಗಳ ಮೂಲಕ ನಡೆಸಲಾಗುತ್ತಿದ್ದು, ಹಸುಯೊಂದು ಕರು ಹಾಕಿದ ಬಳಿಕ ಹಸುವಿನ ಹಾಲು ೨೦ ದಿನಗಳ ಕಾಲ ಸಂಪೂರ್ಣವಾಗಿ ಕೊಟ್ಟರೆ ಹಸು ೧ ವರ್ಷದಲ್ಲೇ ತೆನೆಗೆ ಬರುತ್ತದೆ ಎಂದರು.

ಚಾಮುಲ್‌ ನಿರ್ದೇಶಕ ಎಂ.ಪಿ.ಸುನೀಲ್‌ ಮಾತನಾಡಿದರು. ಸಮಾರಂಭದಲ್ಲಿ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್‌, ಟಿಎಪಿಸಿಎಂಎಸ್‌ ಅಧ್ಯಕ್ಷ ಜಿ.ಮಡಿವಾಳಪ್ಪ, ಹಸಗೂಲಿ ಡೇರಿ ಅಧ್ಯಕ್ಷ ನಾಗರಾಜು, ಸಂಘದ ಉಪಾಧ್ಯಕ್ಷ ನಿಂಗಪ್ಪ, ತಾಪಂ ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು, ತೀರ್ಪುಗಾರರಾದ ಡಾ.ಶರತ್‌ ಎನ್‌,ಡಾ.ತೇಜಸ್‌, ಚಾಮುಲ್‌ ವ್ಯವಸ್ಥಾಪಕ ಶರತ್‌ ಕುಮಾರ್‌, ಉಪ ವ್ಯವಸ್ಥಾಪಕರಾದ ಅಮರ್‌, ಮಂಜು, ಗುಂಡ್ಲುಪೇಟೆ ಉಪ ವಿಭಾಗದ ಪ್ರಕಾಶ್‌, ಸಂಘದ ನಿರ್ದೇಶಕರಾದ ಎಚ್.ಎಸ್.ಬಸವಣ್ಣ, ಎಚ್.ಎಂ.ಮಹದೇವಪ್ಪ, ಬಸವರಾಜು, ಮಹದೇವಶೆಟ್ಟಿ, ಬಸಮ್ಮಣ್ಣಿ, ದ್ರಾಕ್ಷಾಯಿಣಿ, ನಾಗಪ್ಪ, ಸಂಘದ ಸಿಇಒಗಳಾದ ಮಹೇಶ್‌, ಹಕ್ಕಲಪುರ ನಾಗೇಶ್‌, ಮಹೇಂದ್ರ ಹಾಗೂ ಗ್ರಾಮದ ಅಶೋಕ್‌, ಗೌಡಿಕೆ ಉಮೇಶ್ ಸೇರಿದಂತೆ ಗ್ರಾಮಸ್ಥರು ಇದ್ದರು..........

೨೭ಜಿಪಿಟಿ೨ಹಸಗೂಲಿಯಲ್ಲಿ ನಡೆದ ಹೆಣ್ಣು ಕರುಗಳ ಪ್ರದರ್ಶನದಲ್ಲಿ ಪ್ರಥಮ ಬಹುಮಾನ ಪಡೆದ ಕರು ಮಾಲೀಕರಿಗೆ ಶಾಸಕ ಎಚ್.ಎಂ.ಗಣೇಶ ಪ್ರಸಾದ್‌ ಪ್ರಮಾಣ ಪತ್ರವನ್ನು ವಿತರಿಸಿದರು.

.......

೨೭ಜಿಪಿಟಿ೧ಗುಂಡ್ಲುಪೇಟೆ ತಾಲೂಕಿನ ಹಸಗೂಲಿಯಲ್ಲಿ ನಡೆದ ಹೆಣ್ಣು ಕರುಗಳ ಪ್ರದರ್ಶನವನ್ನು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಉದ್ಘಾಟಿಸಿದರು.

...............

ಬಾಕ್ಸ್‌

ಸೃಜನ್‌, ನಾಗಲಿಂಗಮೂರ್ತಿ, ಗುರುಪ್ರಸಾದ್‌

ಸೇರಿದ ಕರುಗಳಿಗೆ ಪ್ರಥಮ ಬಹುಮಾನ

ಗುಂಡ್ಲುಪೇಟೆ: ತಾಲೂಕಿನ ಹಸಗೂಲಿಯಲ್ಲಿ ನಡೆದ ಹೆಣ್ಣು ಕರುಗಳ ಪ್ರದರ್ಶನದಲ್ಲಿ ೧ ತಿಂಗಳಿಂದ ೬ ತಿಂಗಳ ತನಕದ ಎಚ್‌ಎಫ್‌ ತಳಿ ( ದಡದಹಳ್ಳಿ ಗ್ರಾಮದ ಸೃಜನ್‌) ಸೇರಿದ ಕರು ,ಜರ್ಸಿ ತಳಿ ಕರು (ಮಂಚಹಳ್ಳಿ ನಾಗಲಿಂಗಮೂರ್ತಿ), ದೇಶಿ ತಳಿ ಕರು (ಮಂಚಹಳ್ಳಿ ಗುರುಪ್ರಸಾದ್‌) ಪ್ರಥಮ ಸ್ಥಾನ ಪಡೆದುಕೊಂಡಿವೆ.

೭ ರಿಂದ ೧೨ ತಿಂಗಳ ಎಚ್‌ಎಫ್‌ ತಳಿ (ಶಿವಪುರ ಮನು) ಸೇರಿದ ಕರು, ಜರ್ಸಿ ತಳಿ (ಹಸಗೂಲಿ ಸುವರ್ಣಮ್ಮ) ಸೇರಿದ ಕರು,ಹಸಗೂಲಿಕೃಷ್ಣ ಶೆಟ್ಟಿಗೆ ಸೇರಿದ ಕರು, ದೇಶಿ ತಳಿ ಹಾಲಹಳ್ಳಿ ಬಸವರಾಜುಗೆ ಸೇರಿದ ಕರು ೨ ನೇ ಬಹುಮಾನ ಪಡೆದಿದ್ದಾರೆ. ಹೆಣ್ಣು ಕರುಗಳ ಸ್ಪರ್ಧೆಗೆ ಬಂದರೂ ಅವಧಿ ಮೀರಿ ಬಂದ ಅವಳಿ,ಜವಳಿ ಕರುಗಳಿಗೆ(ಲಿಂಗರಾಜು)ಶಾಸಕ ಎಚ್.ಎಂ.ಗಣೇಶ ಪ್ರಸಾದ್‌ ಬಹುಮಾನ ವಿತರಿಸಿ ರೈತರಿಗೆ ಶುಭ ಕೋರಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೇಖಕ ತನ್ನನ್ನು ತಾನು ವಿಮರ್ಶೆಗೊಳಪಡಿಸಿಕೊಳ್ಳಬೇಕು
ಕುಂದಾನಗರಿಯಲ್ಲಿ ಬೆಳಗಾವಿ ಉತ್ಸವ