ಕನ್ನಡಪ್ರಭ ವಾರ್ತೆ ಹಾಸನ
ನಗರದ ಸಂಗಮೇಶ್ವರ ಬಡಾವಣೆ, ಜವೇನಹಳ್ಳಿ ಕೆರೆ ಬಳಿ ಇರುವ ಹಿರಿಯ ನಾಗರಿಕರ ಸಭಾಂಗಣದಲ್ಲಿ ಕರ್ನಾಟಕ ಮಾನವ ಹಕ್ಕುಗಳ ಜನಸೇವಾ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಸಮಿತಿಯ ನೂತನ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಗುರುತಿನ ಚೀಟಿ ವಿತರಣೆ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಸಮಾಜದಲ್ಲಿ ಜೀವನ ಮಾಡುವುದಕ್ಕೆ ಪ್ರಮುಖವಾದುದ್ದು ವ್ಯಕ್ತಿಯ ಹಕ್ಕು ಮತ್ತು ಕರ್ತವ್ಯಗಳು. ಪ್ರಪಂಚದಲ್ಲಿ ಬುದ್ಧಿಜೀವಿಗಳು ಎನಿಸಿಕೊಂಡಿರುವವರು ಮಾನವರೇ. ಆದರೇ ಅವರ ಹಕ್ಕುಗಳ ಉಳಿಸಿಕೊಳ್ಳಲು ಕೂಡ ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದರೆ ಆಲೋಚನೆ ಮಾಡಬೇಕಾಗಿದೆ. ಮಾನವನ ಸ್ಥಿತಿ ಎಲ್ಲಿಗೆ ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ೧೯೪೮ನೇ ಸಾಲಿನಲ್ಲಿ ಇದೊಂದು ಮಾನವ ಹಕ್ಕಗಳ ಆಯೋಗ ಸ್ಥಾಪನೆ ಆದ ನಂತರ ಹಲವಾರು ಸಂಘಸಂಸ್ಥೆಗಳು ಮಾನವ ಹಕ್ಕುಗಳ ವಿಚಾರವಾಗಿ ಮಾನವನಿಗಿರುವ ಹಕ್ಕುಗಳಿಗಾಗಿ ಹುಟ್ಟಿಕೊಂಡಿದೆ. ಹಾಸನದಲ್ಲೂ ಕೂಡ ಮಾನವ ಹಕ್ಕುಗಳ ಜನಸೇವಾ ಸಮಿತಿ ಜನ್ಮತಾಳಿದೆ. ಏನಾದರೂ ಸಮಸ್ಯೆ ಇದ್ದರೆ ನಮ್ಮ ಸಂಸ್ಥೆಗಳ ಪದಾಧಿಕಾರಿಗಳಿಗೆ ತಿಳಿಸಿದರೆ ಸ್ಪಂದಿಸುವ ಕೆಲಸ ಮಾಡಲಾಗುವುದು ಎಂದರು.
ಲಿಂಗತಾರತಮ್ಯ ಬರಬಾರದು. ಮಾನವರೆಲ್ಲರೂ ಒಂದೇ, ಅದೇ ಮಾನವ ಧರ್ಮ ಎಂದು ಕಿವಿಮಾತು ಹೇಳಿದರು. ಯಾರು ಮಾನವ ಧರ್ಮ ಪಾಲನೆ ಮಾಡುತ್ತಾರೆ, ಯಾರು ಮಾನವೀಯ ಗುಣಗಳನ್ನು ಮತ್ತು ಮೌಲ್ಯಗಳನ್ನು ಬೆಳೆಸಿಕೊಂಡಿರುತ್ತಾರೆ ಅವರೆಲ್ಲರೂ ಕೂಡ ನಿಜ ಮಾನವರು ಎಂದರು.ರಾಜ್ಯ ರೈತ ಹಾಗೂ ಹಸಿರು ಜನಜಾಗೃತಿ ಸಂಘಟನೆ ರಾಜ್ಯಾಧ್ಯಕ್ಷೆ ಸಿ.ಎಂ. ನಾಗರತ್ನ ಮಾತನಾಡಿ, ಇವತ್ತು ಭ್ರಷ್ಟಾಚಾರ ಮಿತಿಮೀರಿದೆ. ಇನ್ನು ಹೆಣ್ಣುಮಕ್ಕಳಿಗೆ ರಕ್ಷಣೆಯೇ ಇಲ್ಲ. ಯಾವಾಗ ನಡುರಾತ್ರಿಯಲ್ಲಿ ಹೆಣ್ಣು ಮಗಳು ಓಡಾಡುತ್ತಾಳೋ ಅವತ್ತು ದೇಶಕ್ಕೆ ಸ್ವಾತಂತ್ರ್ಯ. ನಮ್ಮನ್ನೆಲ್ಲಾ ಕಾಯುತ್ತಿರುವುದು ಆರಕ್ಷಕರು. ಕೆಲ ದಿನಗಳ ಹಿಂದೆ ಹೆಣ್ಣುಮಗಳು ಪೊಲೀಸ್ ಠಾಣೆಗೆ ದೂರು ಕೊಡಲು ಬಂದರೇ ಅತ್ಯಚಾರದ ಪ್ರಕರಣ ನಡೆದಿದೆ. ರಕ್ಷಣೆ ಕೊಡುವವರೇ ಭಕ್ಷಕರಾದರೇ ಹೇಗೆ ನಮ್ಮ ದೇಶ ಉದ್ಧಾರವಾಗುತ್ತದೆ ಎಂದು ತುಮಕೂರಿನಲ್ಲಿ ಪೊಲೀಸ್ ಅಧಿಕಾರಿಯಿಂದ ನಡೆದ ದೌರ್ಜನ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.