ಜಾನಪದ ಸಂಸ್ಕೃತಿಯನ್ನು ಉಳಿಸುವ ಕಾರ್ಯವಾಗಬೇಕು : ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಶರಣಪ್ಪ ವಡಗೇರಿ

KannadaprabhaNewsNetwork |  
Published : Aug 26, 2024, 01:45 AM ISTUpdated : Aug 26, 2024, 05:04 AM IST
ಪೋಟೊ22ಕೆಎಸಟಿ4: ಕುಷ್ಟಗಿ ಪಟ್ಟಣದ ಶ್ರೀ ವಿಜಯ ಚಂದ್ರಶೇಖರ ಮಹಾವಿದ್ಯಾಲಯದಲ್ಲಿ ವಿಶ್ವ ಜಾನಪದ ದಿನಾಚರಣೆಯ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಜಾನಪದ ಸಂಸ್ಕೃತಿಯನ್ನು ಉಳಿಸುವ ಕಾರ್ಯವಾಗಬೇಕು ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಶರಣಪ್ಪ ವಡಗೇರಿ ಹೇಳಿದರು.

 ಕುಷ್ಟಗಿ :  ಜಾನಪದ ಸಂಸ್ಕೃತಿಯನ್ನು ಉಳಿಸುವ ಕಾರ್ಯವಾಗಬೇಕು ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಶರಣಪ್ಪ ವಡಗೇರಿ ಹೇಳಿದರು.

ಪಟ್ಟಣದ ಶ್ರೀ ವಿಜಯ ಚಂದ್ರಶೇಖರ ಮಹಾವಿದ್ಯಾಲಯದಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ನಡೆದ ವಿಶ್ವ ಜಾನಪದ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಮ್ಮ ಮೂಲ ಜಾನಪದಗಳಾದ ಬಿಸುಕಲ್ಲು ಪದ, ಜಾನಪದ, ಲಾವಣಿ ಪದ, ಹಂತಿ ಪದ ಸೇರಿದಂತೆ ಅನೇಕ ಜಾನಪದಗಳು ಒಬ್ಬರಿಂದ ಒಬ್ಬರಿಗೆ ಬಾಯಿಂದ ಬಾಯಿಗೆ ಬಂದಿರುವ ಸಂಸ್ಕೃತಿಯ ಪದಗಳಾಗಿವೆ ಎಂದರು.

ನಾವು ನಮ್ಮ ಹಳೆಯ ಸಂಸ್ಕೃತಿ ಉಳಿಸಬೇಕಾಗಿದೆ. ಹಳ್ಳಿಗಳಲ್ಲಿ ಅನೇಕ ಜನಪದ ಕಲಾವಿದರಿದ್ದು, ಅವರನ್ನು ಪತ್ತೆಹಚ್ಚಿ, ಅವರಿಗೆ ತಿಳಿದಿರುವ ಜಾನಪದ ಗೀತೆಗಳನ್ನು ಸಂಗ್ರಹಿಸಿ ಸಂರಕ್ಷಣೆ ಮಾಡಬೇಕಾದ ಅಗತ್ಯತೆ ಇದೆ ಎಂದರು. ನಮ್ಮ ಮೂಲ ಜಾನಪದಗಳ ದಾಟಿಯನ್ನು ಈಗಿನವರು ಸಿನಿಮಾ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಆದ್ದರಿಂದ ನಮ್ಮ ಮೂಲ ಜಾನಪದಗಳನ್ನು ರಕ್ಷಣೆ ಮಾಡಿಕೊಳ್ಳಬೇಕಿದೆ. ಈಗಿನ ಜಾನಪದಗಳಲ್ಲಿ ದ್ವಂದ್ವ ಅರ್ಥಗಳಿವೆ ಎಂದರು.

ಪ್ರಾಂಶುಪಾಲ ಡಾ. ಎಸ್.ಸಿ. ತಿಪ್ಪಾಶೆಟ್ಟಿ ಮಾತನಾಡಿ, ಜಾನಪದ ಅಧ್ಯಯನಕ್ಕಾಗಿ ಶಿಗ್ಗಾಂವಿಯಲ್ಲಿ ವಿಶ್ವವಿದ್ಯಾಲಯವನ್ನೇ ನಿರ್ಮಾಣ ಮಾಡಲಾಗಿದೆ. ಜಾನಪದ ಅಕಾಡೆಮಿ ಆರಂಭವಾಗಿದೆ. ಸಮಾಜದಲ್ಲಿನ ನ್ಯೂನತೆಗಳನ್ನು ಜಾನಪದ ಸರಿಯಾದ ದಾರಿಗೆ ಕೆಲಸ ಮಾಡುತ್ತದೆ ಎಂದರು.

ಕಸಾಪ ತಾಲೂಕಾಧ್ಯಕ್ಷ ವೀರೇಶ ಬಂಗಾರಶೆಟ್ಟರ ಮಾತನಾಡಿ, ಈಗಿನ ಜಾನಪದ ಪರಿಶುದ್ಧವಲ್ಲ. ಮಾನವ ಎಂದು ಹುಟ್ಟಿದನೋ ಅಂದು ಜಾನಪದ ಹುಟ್ಟಿದೆ. ಜಾನಪದ ಸಂಸ್ಕೃತಿಯನ್ನು ಉಳಿಸುವ ಕೆಲಸವಾಗಬೇಕು ಎಂದರು.

ಕಸಾಪ ಸಂಘ-ಸಂಸ್ಥೆ ರಾಜ್ಯ ಪ್ರತಿನಿಧಿ ನಬಿಸಾಬ ಕುಷ್ಟಗಿ ಮಾತನಾಡಿ, ಸರ್ಕಾರ ಜಾನಪದ ಸಾಧಕರಿಗೆ ಸರ್ಕಾರ ಸ್ಪಂದನೆ ಮಾಡಬೇಕು. ಮಾಸಾಶನ ಹೆಚ್ಚಿಗೆ ಮಾಡಬೇಕು. ಬೇರೆ ರಾಜ್ಯದಲ್ಲಿ ₹5000 ಇದ್ದರೆ ನಮ್ಮ ರಾಜ್ಯದಲ್ಲಿ ₹2000 ಮಾತ್ರ ಇದೆ. ವಿದ್ಯಾರ್ಥಿಗಳು ಜಾನಪದ ಸಂಸ್ಕೃತಿ ಉಳಿಸಿ, ಬೆಳೆಸುವ ಕೆಲಸಕ್ಕೆ ಮುಂದಾಗಬೇಕು. ಜಾನಪದ ಲೋಕಕ್ಕೆ ಉತ್ತಮವಾದ ಕೊಡುಗೆ ನೀಡುವಂತಾಗಬೇಕು ಎಂದರು.

ನಿಕಟಪೂರ್ವ ಕಸಾಪ ಅಧ್ಯಕ್ಷ ರವೀಂದ್ರ ಬಾಕಳೆ, ಮೋಹನಲಾಲ್ ಜೈನ, ಭೀಮಪ್ಪ ಪೂಜಾರ ಕೊಡತಗೇರಿ, ಶಿವಪ್ಪ ಡೊಳ್ಳಿನ, ಶಿವಕುಮಾರ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಇತರರು ಇದ್ದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ