ವಿಶೇಷಚೇತನರು ಸಮಾಜದ ಮುಖ್ಯವಾಹಿನಿಗೆ ಬರಲಿ: ಅರ್ಲ ಬ್ರಿಟೋ

KannadaprabhaNewsNetwork |  
Published : Feb 28, 2024, 02:31 AM IST
ಸಿದ್ದಾಪುರದಲ್ಲಿ ನಡೆದ ಲಯನ್ಸ ಕ್ಲಬ್ ಕಾರ್ಯಕ್ರಮದಲ್ಲಿ ಜಿಲ್ಲಾ ಗವರ್ನರ್ ಅರ್ಲ ಬ್ರಿಟೋ  ಮಾತನಾಡಿದರು. | Kannada Prabha

ಸಾರಾಂಶ

ಸಿದ್ದಾಪುರ ಲಯನ್ಸ್‌ನವರ ಸಹಕಾರದೊಂದಿಗೆ ನಡೆಸುತ್ತಿರುವ ಅಂಧ ಮಕ್ಕಳ ಶಾಲೆ ದಕ್ಷಿಣ ಭಾರತದಲ್ಲಿಯೇ ಮೊದಲ ಶಾಲೆಯಾಗಿದೆ.

ಸಿದ್ದಾಪುರ:

ಸ್ಥಳೀಯ ಲಯನ್ಸ್ ಕ್ಲಬ್‌ಗೆ ಲಯನ್ಸ್ ಅಂತಾರಾಷ್ಟ್ರೀಯ ಸಂಸ್ಥೆ ೩೧೭-ಬಿ ಜಿಲ್ಲಾ ಗವರ್ನರ್ ಅರ್ಲ ಬ್ರಿಟೋ ತಮ್ಮ ಅಧಿಕೃತ ಭೇಟಿ ನೀಡಿ ಕ್ಲಬ್‌ನ ಚಟುವಟಿಕೆ ವೀಕ್ಷಿಸಿದರು.

ಇತ್ತೀಚೆಗೆ ಬೆಳಗ್ಗೆ ಹಾಳದಕಟ್ಟಾದ ಜೆಎಂಆರ್ ಅಂಧ ಮಕ್ಕಳ ವಸತಿ ಶಾಲೆಯಲ್ಲಿ ಏರ್ಪಡಿಸಿದ್ದ ವಿಶೇಷ ಚೇತನರ ಆರೋಗ್ಯ ಶಿಬಿರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ವಿಶೇಷಚೇತನರು ಸಮಾಜದ ಮುಖ್ಯವಾಹಿನಿಗೆ ಬರಲು ಆರೋಗ್ಯ ಹಾಗೂ ಶಿಕ್ಷಣ ಅಗತ್ಯವಾಗಿದೆ. ಸಿದ್ದಾಪುರ ಲಯನ್ಸ್‌ನವರ ಸಹಕಾರದೊಂದಿಗೆ ನಡೆಸುತ್ತಿರುವ ಅಂಧ ಮಕ್ಕಳ ಶಾಲೆ ದಕ್ಷಿಣ ಭಾರತದಲ್ಲಿಯೇ ಮೊದಲ ಶಾಲೆಯಾಗಿದೆ. ಅವರಿಗೆ ಕೇವಲ ಸಹಾನುಭೂತಿ ದೊರೆತರೆ ಸಾಲದು. ಸೂಕ್ತ ಸಹಾಯ ಸಹಕಾರ ಅಗತ್ಯ ಎಂದರು.

ಶಿಬಿರದಲ್ಲಿ ಜಿಲ್ಲಾ ಸಂಪುಟ ಕಾರ್ಯದರ್ಶಿ ಅಶ್ವಿನ್, ಸಂಪುಟ ಕೋಶಾಧ್ಯಕ್ಷ ಸಖಪಾಲ್, ಡಾ.ಕೆ. ಶ್ರೀಧರ ವೈದ್ಯ ಮಾತನಾಡಿದರು. ಆಶಾಕಿರಣ ಸಮಿತಿ ಅಧ್ಯಕ್ಷ ಡಾ. ರವಿ ಹೆಗಡೆ ಹೂವಿನಮನೆ ಅಧ್ಯಕ್ಷತೆ ವಹಿಸಿದ್ದರು. ನಾಗರಾಜ ದೋಶೆಟ್ಟಿ ಅಂಧರ ಶಾಲೆಯ ಸಾಧನೆ ಪರಿಚಯಿಸಿದರು. ಮೇಧಾ ಭಟ್ಟ ಹೋಬಳಿ ನಿರೂಪಿಸಿದರು.

ಸಂಜೆ, ಸ್ಥಳೀಯ ಲಯನ್ಸ್ ಬಾಲಭವನದಲ್ಲಿ ನಡೆದ ಲಯನ್ಸ್ ಸದಸ್ಯರು, ಸಾರ್ವಜನಿಕರನ್ನು ಉದ್ದೇಶಿಸಿ ಜಿಲ್ಲಾ ಗವರ್ನರ್ ಅರ್ಲ ಬ್ರಿಟೋ ಮಾತನಾಡಿ, ಸಿದ್ದಾಪುರ ಲಯನ್ಸ್‌ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಕುರಿತು ಸಂತಸ ವ್ಯಕ್ತಪಡಿಸಿದರು. ಅಲ್ಲದೇ ಈ ವೇಳೆ ಇಬ್ಬರು ಸಾಧಕರನ್ನು ಸನ್ಮಾನಿಸಲಾಯಿತು. ಕೃಷಿ ಕ್ಷೇತ್ರದ ರಮಾಕಾಂತ ರಾಮಚಂದ್ರ ಹೆಗಡೆ ಹುಣಸೆಕೊಪ್ಪ ಹಾಗೂ ನಾಟಿ ವೈದ್ಯ ಎಂ.ಎನ್. ಹೆಗಡೆ ಹಣಜಿಬೈಲು ಅವರನ್ನು ಸನ್ಮಾನಿಸಿದರು.

ಪ್ರಾದೇಶಿಕ ಅಧ್ಯಕ್ಷೆ ಐಶ್ವರ್ಯಾ ಮಾಸೂರಕರ, ಸ್ನೇಹಾ ಹಾಗೂ ಲಯನ್ಸ್ ಮಾಜಿ ಲಯನ್ಸ್‌ ಗವರ್ನರ್ ಡಾ.ರವಿ ಹೆಗಡೆ ಹೂವಿನಮನೆ, ಸನ್ಮಾನಿತರಾದ ರಮಾಕಾಂತ ಹೆಗಡೆ, ಎಂ.ಎನ್. ಹೆಗಡೆ ಹಾಗೂ ಶಿರಸಿಯ ಎಂ.ಐ. ಹೆಗಡೆ ಮಾತನಾಡಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ರವಿ ಎಂ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಜಿ.ಜಿ. ಹೆಗಡೆ ಬಾಳಗೋಡ ಸನ್ಮಾನಿತರ ಪರಿಚಯಿಸಿದರು. ಶ್ಯಾಮಲಾ ಹೆಗಡೆ ಹೂವಿನಮನೆ, ವೀಣಾ ಶೇಟ ನಿರೂಪಿಸಿದರು. ಕಾರ್ಯದರ್ಶಿ ಕುಮಾರ ಗೌಡರ ಹೊಸೂರು ವರದಿ ವಾಚಿಸಿದರು. ಎಂ.ಆರ್. ಪಾಟೀಲ ವಂದಿಸಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ