ರಾಮನಗರ: ಅನಾರೋಗ್ಯದಿಂದ ಬಳಲುತ್ತಿರುವ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ, ಖ್ಯಾತ ಜಾನಪದ ತಜ್ಞ ಡಾ.ಬಾನಂದೂರು ಕೆಂಪಯ್ಯ ಅವರ ಚಿಕಿತ್ಸಾ ವೆಚ್ಚ ಭರಿಸಲು ಕುಟುಂಬದವರು ಸಂಕಷ್ಟದಲ್ಲಿದ್ದು, ರಾಜ್ಯಸರ್ಕಾರವೇ ಚಿಕಿತ್ಸೆಗೆ ಹಣಕಾಸಿನ ನೆರವು ನೀಡಬೇಕು ಎಂದು ಧಮ್ಮದೀವಿಗೆ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಒತ್ತಾಯಿಸಿದರು.
ಬಹು ಅಂಗ ವೈಫಲ್ಯ:
ಡಾ.ಬಾನಂದೂರು ಕೆಂಪಯ್ಯ ಅವರಿಗೆ ಎರಡು ಬಾರಿ ಹೃದಯ ಶಸ್ತ್ರಚಿಕಿತ್ಸೆಯಾಗಿದೆ. ಅದೇ ರೀತಿ ಕಿಡ್ನಿ ವೈಫಲ್ಯ ಸೇರದಂತೆ ಬಹುಅಂಗ ವೈಫಲ್ಯವಾಗಿದೆ. ತಮ್ಮ ಶಕ್ತಾನಯಸಾರ ಕುಟುಂಬದವರು ಅವರಿಗೆ ಚಿಕಿತ್ಸೆ ಕೊಡಿಸಿದ್ದು, ಹಣವಿಲ್ಲದ ಕಾರಣ ಆಸ್ಪತ್ರೆಯಿಂದ ಕರೆತಂದು ಮನೆಯಲ್ಲಿ ಇರಿಸಿಕೊಂಡಿದ್ದಾರೆ. ಈ ಹಿಂದೆ ಸರ್ಕಾರ ನಟ ಅಂಬರೀಶ್, ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಾಲುಮರದ ತಿಮ್ಮಕ್ಕ ಸೇರಿದಂತೆ ಅನೇಕರ ಚಿಕಿತ್ಸೆಗೆ ನೆರವು ನೀಡಿದೆ. ಅದೇ ರೀತಿ ಜಾನಪದ ಕ್ಷೇತ್ರದ ಉಳಿವಿಗೆ ಶ್ರಮಿಸಿದ ಬಾನಂದೂರು ಕೆಂಪಯ್ಯ ಅವರಿಗೆ ಚಿಕಿತ್ಸೆಗೆ ಸರ್ಕಾರ ಮುಂದಾಗಬೇಕು ಎಂದರು.ಅವರ ಚಿಕಿತ್ಸೆಗೆ ಸುಮಾರು ೨ ಕೋಟಿ ವೆಚ್ಚವಾಗಲಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಕೂಡಲೇ ಇವರ ನೆರವಿಗೆ ಧಾವಿಸಬೇಕು. ಪ್ರಭಾವಶಾಲಿಗಳ ಕುರಿತು ತೋರುವ ಕಾಳಜಿಯನ್ನು ಇಂತಹ ಸಾಧಕರ ಕುರಿತು ತೋರಬೇಕು. ಕೆಂಪಯ್ಯ ನಮ್ಮ ಜಿಲ್ಲೆಯ ಹೆಮ್ಮೆಯ ಸಾಧಕರಾಗಿದ್ದು, ಸರ್ಕಾರ ಹಾಗೂ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಈ ಕುರಿತು ಗಂಭೀರವಾಗಿ ಚಿಂತನೆ ನಡೆಸಬೇಕು ಎಂದರು.
ಜಾನಪದ ಕ್ಷೇತ್ರಕ್ಕೆ ಡಾ.ಬಾನಂದೂರು ಕೆಂಪಯ್ಯ ಅವರ ಕೊಡುಗೆ ಅಪಾರ. ನಾಡಿನುದ್ದಗಲದಲ್ಲಿ ಸುತ್ತಾಡಿ ಜಾನಪದ ಕ್ಷೇತ್ರದ ಹಲವು ವಿಚಾರಗಳನ್ನು ಬೆಳಕಿಗೆ ತಂದಿದ್ದಾರೆ. ಅವರ ಚಿಕಿತ್ಸೆಗೆ ನಮ್ಮ ಟ್ರಸ್ಟ್‌ನಿಂದ ೨೫ ಸಾವಿರ ರೂ. ನೆರವು ನೀಡಲಾಗಿದೆ. ಆರ್ಥಿಕ ಸಂಕಷ್ಟದಲ್ಲಿರುವ ಇವರಿಗೆ ಜಿಲ್ಲೆ ಹಾಗೂ ರಾಜ್ಯದ ಜನತೆ ಹೆಚ್ಚಿನ ನೆರವು ನೀಡಬೇಕು ಎಂದು ಮನವಿ ಮಾಡಿದರು.
ರೇಣುಕಾಸ್ವಾಮಿ ಪ್ರಕರಣ ೧೯ ಕುಟುಂಬಕ್ಕೆ ಸಂಕಷ್ಟ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಟಿ ಪವಿತ್ರಾಗೌಡ ತನಗೆ ಬಂದ ಅಶ್ಲೀಲ ಮೆಸೇಜ್‌ಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯಲ್ಲಿ ದೂರು ನೀಡಬಹುದಾಗಿತ್ತು. ಮಹಿಳಾ ಠಾಣೆ, ಮಹಿಳಾ ಆಯೋಗದ ಮೊರೆ ಹೋಗಬಹುದಿತ್ತು. ಈ ಸಮಸ್ಯೆ ಪರಿಹಾರಕ್ಕೆ ಹಲವಾರು ಕಾನೂನಾತ್ಮಕ ಮಾರ್ಗಗಳು ಇದ್ದರೂ, ಅದನ್ನು ಬಿಟ್ಟು ಇಂತಹ ಮಾರ್ಗವನ್ನು ಅನುಸರಿಸಬಾರದಿತ್ತು. ಹೆಣ್ಣುಮಕ್ಕಳು ಸ್ವಲ್ಪ ಯೋಚಿಸಿ ಮುಂದಿನ ಹೆಜ್ಜೆ ಇರಿಸಬೇಕು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಈ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸ್ ಇಲಾಖೆ ಆರಂಭದಲ್ಲಿ ಸಮಪರ್ಕವಾಗಿ ಕೆಲಸ ಮಾಡಿದೆ. ಆದರೆ, ಪೊಲೀಸ್ ಠಾಣೆಯಲ್ಲಿ ಆರೋಪಿಗಳಿಗೆ ಬಿರಿಯಾನಿ ತರಿಸಿಕೊಟ್ಟಿರುವುದು, ಸಿಗರೇಟ್ ಸೇದಲು ಅವಕಾಶ ನೀಡಿರುವುದು ಸರಿಯಲ್ಲ. ಪ್ರಭಾವಿಗಳು, ಹಣವಿದ್ದವರು ಕಾನೂನಿನ ಬಲೆಯನ್ನು ಹರಿದುಕೊಂಡು ಹೊರಬರಬಹುದು, ಬಡವರು ಮಾತ್ರ ಕಾನೂನಿನ ಬಲೆಗೆ ಸಿಲುಕಿ ನರಳಬೇಕು ಎಂಬ ಭಾವನೆ ಸಾರ್ವಜನಿಕ ವಲಯದಲ್ಲಿ ಮೂಡದಂತೆ ಮಾಡುವ ಜವಾಬ್ದಾರಿ ಪೊಲೀಸ್ ಇಲಾಖೆಯ ಮೇಲಿದೆ ಎಂದರು.ಪೋಟೋ೧೭ಸಿಪಿಟಿ೫: