ಕಂಪ್ಲಿ: ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಮಂಗಳವಾರ ತಾಲೂಕು ಆಡಳಿತದ ವತಿಯಿಂದ ಸವಿತಾ ಮಹರ್ಷಿ ಜಯಂತ್ಯುತ್ಸವ ಜರುಗಿತು.
ತಹಸೀಲ್ದಾರ್ ಶಿವರಾಜ ಶಿವಪುರ ಮಾತನಾಡಿ, ಸವಿತಾ ಮಹರ್ಷಿ ಹಿಂದೂ ಪುರಾಣಗಳಲ್ಲಿ ಕಾಣುವ ದೇವತಾ ಅಥವಾ ಋಷಿ ಸಂಬಂಧಿತ ಮಹಾಪುರುಷ. ಪುರಾಣಗಳಲ್ಲಿ ಉಲ್ಲೇಖವಿರುವಂತೆ, ಸವಿತಾ ಎಂಬ ಪದದ ಅರ್ಥ ಸೂರ್ಯ ದೇವನನ್ನು ಸೂಚಿಸುತ್ತದೆ. ಇದರ ಬಗೆಗೆ ಶಿವಪುರಾಣದಲ್ಲಿಯೂ ಉಲ್ಲೇಖಿಸಲಾಗಿದೆ. ವೇದಗಳಲ್ಲಿ ಸಾಮವೇದವನ್ನು ಸೃಷ್ಟಿಸಿದವರು ಸವಿತಾ ಮಹರ್ಷಿಯವರು. ವೇದ ಎಂದರೆ ಜ್ಞಾನ ಎಂಬ ಅರ್ಥವಿದೆ. ಜ್ಞಾನವನ್ನು ಪಸರಿಸುವ ಕಾರ್ಯವನ್ನು ಬಹು ದೊಡ್ಡ ಮಟ್ಟಕ್ಕೆ ಮಾಡಿದವರು ಸವಿತಾ ಮಹರ್ಷಿಗಳು. ಇವರ ಮಗಳೇ ಗಾಯತ್ರಿ ಎಂಬುದು ಇನ್ನೊಂದು ವಿಶೇಷ. ಸೂರ್ಯನ ಉಪಾಸನೆ ಮಾಡುವುದು ಸವಿತಾ ಸಮುದಾಯದ ಹೆಮ್ಮೆಯ ಸಂಗತಿಯಾಗಿದೆ. ಸವಿತಾ ಮಹರ್ಷಿ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು. ಸ್ವಉದ್ಯೋಗಕ್ಕಾಗಿ ತರಬೇತಿಗೊಳಿಸುವಲ್ಲಿ ಯುವಕರು ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಪಿ. ಪಾಂಡುರಂಗ, ಎ. ಆಂಜನೇಯ, ಎನ್. ಶ್ರೀನಿವಾಸುಲು, ಕೆ. ಶ್ರೀನಿವಾಸ್, ಎಚ್. ನಾಗಮ್ಮ, ಎಚ್. ಈರಣ್ಣ, ಬಿ. ಸಿದ್ದಪ್ಪ, ಕೆ. ಮನೋಹರ, ಬಿ. ರಮೇಶ, ಬಿ. ನಾಗೇಂದ್ರ, ವಿ. ವೆಂಕಟರಮಣ, ಭಾಸ್ಕರರೆಡ್ಡಿ, ಬಡಿಗೇರ ಜಿಲಾನ್‌ಸಾಬ್, ಗ್ರೇಡ್-2 ತಹಸೀಲ್ದಾರ್ ಎಂ.ಆರ್. ಷಣ್ಮುಖ, ಡಿಟಿಬಿ ರವೀಂದ್ರಕುಮಾರ್ ಸೇರಿ ತಾಲೂಕು ಮಟ್ಟದ ಅಧಿಕಾರಿಗಳಿದ್ದರು.