ಕೈ ಬೆಂಬಲಿತರ ವಶವಾದ ಮಣ್ಣೆ ಕೃಷಿ ಸಹಕಾರ ಸಂಘ

KannadaprabhaNewsNetwork |  
Published : Feb 05, 2025, 12:34 AM IST
ಪೋಟೋ 2 : ತ್ಯಾಮಗೊಂಡ್ಲು ಹೋಬಳಿಯ ಮಣ್ಣೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ಆಯ್ಕೆಯಾದ ನಿರ್ದೇಶಕರುಗಳನ್ನು ಮುಖಂಡರು ಸನ್ಮಾನಿಸಿದರು. | Kannada Prabha

ಸಾರಾಂಶ

ಮಣ್ಣೆ ಸಹಕಾರ ಸಂಘಕ್ಕೆ ರೈತರ ಪರವಾದ ನೂತನ 12 ನಿರ್ದೇಶಕರು ಆಯ್ಕೆಯಾಗಿದ್ದಾರೆ. ಸರ್ಕಾರದ ಎಲ್ಲ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ನಮ್ಮ ನೂತನ ನಿರ್ದೇಶಕರು ಶ್ರಮಿಸಲಿದ್ದಾರೆ .

ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ

ಮಣ್ಣೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಆಡಳಿತ ಮಂಡಳಿ ಚುನಾವಣೆಯಲ್ಲಿ ಬಗರುಹುಕುಂ ಸಮಿತಿ ಸದಸ್ಯ ಹಾಗೂ ವಕೀಲ ಓಬಳಾಪುರ ಹನುಮಂತೇಗೌಡ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದಾರೆ.

ಸಹಕಾರ ಸಂಘದ ಒಟ್ಟು 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 7 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ ಸಾಲಗಾರರ ಸಾಮಾನ್ಯ ಕ್ಷೇತ್ರದ ಐದು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಚಂದ್ರಶೇಖರ್.ಆರ್., ಜಗದೀಶ್, ಕರಿಗರಿಯಪ್ಪ, ಚೌಡಯ್ಯ, ಮುತ್ತಾಂಜಿನಯ್ಯ ಹೆಚ್ಚು ಮತ ಪಡೆದು ನಿರ್ದೇಶಕ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಭಾಸ್ಕರ್ ಘೋಷಿಸಿದರು.

ಅವಿರೋಧವಾಗಿ ಆಯ್ಕೆ:

ಪರಿಶಿಷ್ಟ ಜಾತಿ ಮೀಸಲು ಸ್ಥಾನಕ್ಕೆ ಲಕ್ಷ್ಮಮ್ಮ, ಪರಿಶಿಷ್ಟ ಪಂಗಡದಿಂದ ಹೊಸಳಯ್ಯ, ಹಿಂದುಳಿದ ವರ್ಗ ಎ ಮೀಸಲು ಸ್ಥಾನದಿಂದ ಎಂ.ಎನ್.ಪಾರ್ಥಸಾರಥಿ, ಮಹಿಳಾ ಮೀಸಲು ಸ್ಥಾನ ದೇವರಾಜಮ್ಮ ಪಾರ್ವತಮ್ಮ, ಸಾಲಗಾರರಲ್ಲದ ಕ್ಷೇತ್ರದಿಂದ ರಾಮಮೂರ್ತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಂತರ ಬಗರಹುಕುಂ ಸಮಿತಿ ಸದಸ್ಯ ಹಾಗೂ ವಕೀಲ ಓಬಳಾಪುರ ಹನುಮಂತೇಗೌಡ ಮಾತನಾಡಿ, ಮಣ್ಣೆ ಸಹಕಾರ ಸಂಘಕ್ಕೆ ರೈತರ ಪರವಾದ ನೂತನ 12 ನಿರ್ದೇಶಕರು ಆಯ್ಕೆಯಾಗಿದ್ದಾರೆ. ಸರ್ಕಾರದ ಎಲ್ಲ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ನಮ್ಮ ನೂತನ ನಿರ್ದೇಶಕರು ಶ್ರಮಿಸಲಿದ್ದಾರೆ ಎಂದು ತಿಳಿಸಿ. ಗೆಲುವಿಗೆ ಕಾರಣರಾದ ಶಾಸಕರಿಗೆ, ಪಕ್ಷದ ಮುಖಂಡರಿಗೆ, ಸಂಘದ ಸದಸ್ಯರಿಗೆ, ಹಿರಿಯರಿಗೆ ಧನ್ಯವಾದಗಳನ್ನು ಅರ್ಪಿಸಿದರು.

ನೂತನ ನಿರ್ದೇಶಕರನ್ನು ಸಂಘದ ಮಾಜಿ ಅಧ್ಯಕ್ಷ ಸೀತಾರಾಮಯ್ಯ, ಮುಖಂಡರಾದ ಹನುಮಂತರಾಯಪ್ಪ, ಗಂಗಣ್ಣ. ಓಬಳಾಪುರ ವಿಜಯಕುಮಾರ್, ಕಾರಳಪ್ಪ, ರಂಗಸ್ವಾಮಿ, ಅನಿಲ್, ಚಿಕ್ಕೇಗೌಡ, ಚಂದ್ರಶೇಖರ್, ಮರುದಿಮ್ಮಯ್ಯ, ರವಿ, ರಾಮಮೂರ್ತಿ, ಗಿರೀಶ್, ಆನಂದ್, ಹೇಮಂತ್, ಗ್ರಾಪಂ ಸದಸ್ಯರಾದ ಸೋಮಶೇಖರ್, ಮುತ್ತರಾಜು, ಶ್ರೀಧರ್, ಕೃಷ್ಣಮೂರ್ತಿ, ಸಂಘದ ಸಿಇಒ ವಿರೂಪಾಕ್ಷ, ಗೀತಾಂಜಲಿ ಮತ್ತಿತರರು ಅಭಿನಂದನೆ ಸಲ್ಲಿಸಿದರು.----

PREV

Recommended Stories

ಏಕಾಏಕಿ ಟೊಮೆಟೋ ಕೇಜಿಗೆ ₹10ಕ್ಕೆ ಕುಸಿತ: ರೈತರು ಕಂಗಾಲು
ವಿಠಲಗೌಡ ತಲೆಬುರುಡೆ ತಂದ ಬಂಗ್ಲೆಗುಡ್ಡೆಯಲ್ಲಿ ಇಂದು ಮಹಜರು?