ಪತ್ರಿಕೋದ್ಯಮ ಉಳಿಸುವ ಕೆಲಸ ಸರ್ಕಾರ ಮಾಡಲಿ

KannadaprabhaNewsNetwork |  
Published : Jul 03, 2026, 03:15 AM IST
ಐಗಳಿ | Kannada Prabha

ಸಾರಾಂಶ

ಪತ್ರಿಕೆ ಹಂಚುವ ಜನರ ಆರೋಗ್ಯ ವಿಮೆ, ಅವರ ಕುಟುಂಬ ನಿರ್ವಹಣೆಗೆ ಆಸರೆ ಹಾಗೂ ನಿವೃತ್ತಿಯ ನಂತರ ಪಿಂಚಣಿ ಸವಲತ್ತುಗಳನ್ನು ನೀಡಿ ಪತ್ರಿಕೋದ್ಯಮವನ್ನು ತಳಮಟ್ಟದಿಂದ ಉಳಿಸುವ ಕೆಲಸವನ್ನು ಸರ್ಕಾರ ಆದ್ಯತೆಯ ಮೇಲೆ ಮಾಡಬೇಕಾಗಿದೆ ಎಂದು ಮಾಜಿ ಶಾಸಕ ಶಹಜಹಾನ ಡೊಂಗರಗಾಂವ ಹೇಳಿದರು.

ಕನ್ನಡಪ್ರಭ ವಾರ್ತೆ ಐಗಳಿ

ಪತ್ರಿಕೆ ಹಂಚುವ ಜನರ ಆರೋಗ್ಯ ವಿಮೆ, ಅವರ ಕುಟುಂಬ ನಿರ್ವಹಣೆಗೆ ಆಸರೆ ಹಾಗೂ ನಿವೃತ್ತಿಯ ನಂತರ ಪಿಂಚಣಿ ಸವಲತ್ತುಗಳನ್ನು ನೀಡಿ ಪತ್ರಿಕೋದ್ಯಮವನ್ನು ತಳಮಟ್ಟದಿಂದ ಉಳಿಸುವ ಕೆಲಸವನ್ನು ಸರ್ಕಾರ ಆದ್ಯತೆಯ ಮೇಲೆ ಮಾಡಬೇಕಾಗಿದೆ ಎಂದು ಮಾಜಿ ಶಾಸಕ ಶಹಜಹಾನ ಡೊಂಗರಗಾಂವ ಹೇಳಿದರು.

ಸಮೀಪದ ಅರಟಾಳ ಗ್ರಾಮದಲ್ಲಿ ಅಥಣಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿತರಕರ ಹಾಗೂ ಸಣ್ಣ ಪತ್ರಕರ್ತರ ಕುಟುಂಬ ನಿರ್ವಹಣೆ, ಆರೋಗ್ಯದ ಸ್ಥಿತಿ ಆಶಾದಾಯಕವಾಗಿಲ್ಲ.ಬೆಳ್ಳಂಬೆಳಗ್ಗೆ ಚಳಿ, ಮಳೆ, ಗಾಳಿ ಎನ್ನದೇ ಸೈಕಲ್ ತುಳಿದು ಪ್ರತಿಯೊಬ್ಬರ ಮನೆ ಮನೆಗೆ ಪತ್ರಿಕೆ ತಲುಪಿಸುವ ಪತ್ರಿಕೆ ವಿತರಕರ ಶ್ರಮ ಬೆಲೆಕಟ್ಟಲಾಗದ್ದು. ಬೆಳಗ್ಗೆದ್ದು ಪತ್ರಿಕೆ ಓದದಿದ್ದರೇ ಏನೋ ಕಳೆದುಕೊಂಡ ಅನುಭವ. ಆ ಅನುಭವದ ಹಿಂದೆ ಈ ವಿತರಕರ ಬೆವರಿನ ಹನಿಗಳಿವೆ ಎಂದು ಶ್ಲಾಘಿಸಿದರು. ಸಂತನೆಂದರೆ ಯಾರು ದಿವ್ಯತೆಯ ಅರಿತವನು ಸರಳತೆಯ ಸುತ್ರದಲ್ಲಿ ಸುಖವನ್ನು ಕಂಡವನು ಸಂತನೆಂದರೆ ಯಾರು ಹಾಡು ಹಾಡಿ ಜನ ಮನ ಸೆಳೆದರು.ಯುವ ನಾಯಕ ಚಿದಾನಂದ ಸವದಿ ಮಾತನಾಡಿ, ಇಂದು ಸಾಮಾಜಿಕ ಜಾಲತಾಣಗಳು ಸುಳ್ಳು ಸುದ್ದಿಗಳ ಗೂಡಾಗುತ್ತಿವೆ. ಅಲ್ಲಿ ಹರಡುವ ವದಂತಿಗಳಿಗೆ ಬ್ರೇಕ್ ಬಿದ್ದು, ಅಸಲಿ ಸತ್ಯ ಏನೆಂಬುವುದು ಜಗತ್ತಿಗೆ ಗೊತ್ತಾಗುವುದು ಮರುದಿನ ಬೆಳಗ್ಗೆ ಪತ್ರಿಕೆಯಲ್ಲಿ ಅಧಿಕೃತ ವರದಿ ಪ್ರಕಟವಾದಾಗ ಮಾತ್ರ. ಹಾಗಾಗಿಯೇ, ಇಂದಿನ ಡಿಜಿಟಲ್ ಯುಗದಲ್ಲೂ ಮುದ್ರಣ ಮಾಧ್ಯಮದ ವಿಶ್ವಾಸಾರ್ಹತೆ ಕುಗ್ಗಿಲ್ಲ. ಆಧುನಿಕ ಯುಗದಲ್ಲೂ ಮುದ್ರಣ ಮಾಧ್ಯಮಕ್ಕೆ ಶಕ್ತಿ ನೀಡಿ, ಸಮಾಜವನ್ನು ತಿದ್ದುವ ಬಹುದೊಡ್ಡ ಜವಾಬ್ದಾರಿ ಹೊತ್ತು ಮುನ್ನಡೆಯುತ್ತಿರುವ ಪತ್ರಕರ್ತರಿಗೆ ಹಾಗೂ ಒಟ್ಟಾರೆ ಪತ್ರಿಕೋದ್ಯಮಕ್ಕೆ ನಾವು ಕೃತಜ್ಞತೆ ಸಲ್ಲಿಸಲೇಬೇಕು ಎಂದರು.ನ್ಯಾಯವಾದಿ ಅಮೋಘಸಿದ್ದ ಖೊಬ್ರಿ ಉಪನ್ಯಾಸ ನೀಡಿ, ಇಂದು ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಅವರ ಭವಿಷ್ಯ ಹಾಳುಮಾಡುವ ಬದಲು ಅವರ ಕೈಗೆ ದಿನಪತ್ರಿಕೆ ನೀಡಿ ಜ್ಞಾನ ಬೆಳೆಸಬೇಕಾದ ತುರ್ತು ಅಗತ್ಯವಿದೆ. ನಮ್ಮ ಹೆಮ್ಮೆಯ ಕನ್ನಡ ಪತ್ರಿಕೆಗಳ ಉಳಿವಿಗಾಗಿ ಅನಿವಾರ್ಯತೆ ಬಂದಿರುವುದು ಇಂದಿನ ಸಮಾಜದ ದೊಡ್ಡ ವಿಪರ್ಯಾಸ. ಪತ್ರಿಕೆಗಳನ್ನು ಓದುವುದು ಮತ್ತು ಅವುಗಳನ್ನು ಬೆಳೆಸುವುದು ನಮ್ಮ ಕರ್ತವ್ಯ ಎಂಬುವುದನ್ನು ನಾವು ಮರೆತು ಕುಳಿತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.

ಕೇವಲ ಮೊಬೈಲ್ ಪರದೆಯ ಮೇಲೆ ಹೆಡ್‌ಲೈನ್ಸ್ ನೋಡಿ ಸ್ಕ್ರಾಲ್ ಮಾಡುವ ಇಂದಿನ ಕಾಲದಲ್ಲಿ, ಪತ್ರಿಕೆಯನ್ನು ಕೈಯಲ್ಲಿ ಹಿಡಿದು ಅದರಲ್ಲಿನ ಆಳವಾದ ವಿಶ್ಲೇಷಣಾತ್ಮಕ ಲೇಖನಗಳು, ಅಂಕಣಗಳು ಮತ್ತು ಸಾಹಿತ್ಯ ಓದುವುದರಲ್ಲಿ ಸಿಗುವ ಆನಂದ ಹಾಗೂ ಜ್ಞಾನ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ. ಇಂತಹ ಸತ್ವಯುತ ಲೇಖನಗಳನ್ನು ಪ್ರಕಟಿಸಿ, ಓದುಗರ ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವ ಇಂದಿನ ಪತ್ರಿಕೋದ್ಯಮದ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.ಕಕಮರಿಯ ಆತ್ಮಾರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಗಿರೀಶ ಬುಟಾಳೆ, ಶಿವು ಗುಡ್ಡಾಪೂರ, ರಾಮಪ್ಪ ಪೂಜಾರಿ ಮಾತನಾಡಿದರು. ಸಾಧಕರಿಗೆ ಪತ್ರಕರ್ತರ ಸಂಘದಿಂದ ಸತ್ಕರಿಸಿದರು. ಈ ವೇಳೆ ಅರಟಾಳ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಕಾಂತಾಬಾಯಿ ಹಟ್ಟಿ, ಶಿವಪ್ಪ ಹಟ್ಟಿ, ಈಶ್ವರಲಿಂಗ ಕಲಫಟಗಿ, ಡಾ.ವಿಲಾಸ ಜಂಬಗಿ, ಮಲ್ಲಪ್ಪ ಪೂಜಾರಿ, ಮಲ್ಲಪ್ಪ ಡಂಗಿ, ಕಳಸಪ್ಪ ಹೊನಗೌಡ, ಹಣಮಂತ ಪೂಜಾರಿ, ರಾಕೇಶ ಮೈಗೂರ, ಪಾಂಡಪ್ಪ ಮಾಂಗ, ಮಡಿವಾಳಪ್ಪ ರಾಮಗೊಂಡ, ಪರಮಾನಂದ ಖ್ಯಾಡಿ ಉಪಸ್ಥಿತರಿದ್ದರು. ಪ್ರಕಾಶ ಪೂಜಾರಿ ಸ್ವಾಗತಿಸಿದರು. ಸದಾನಂದ ಮಾಡಿಗ್ಯಾಳ ನಿರೂಪಿಸಿದರು. ಮಲಗೌಡ ಪಾಟೀಲ ವಂದಿಸಿದರು. ಸಮಾಜವನ್ನು ಜಾಗೃತಗೊಳಿಸುವಲ್ಲಿ ಪತ್ರಿಕೆಗಳ ಪಾತ್ರ ಅನನ್ಯವಾಗಿತ್ತು. ಆದರೆ, ಇಂದು ಓದುಗರ ಹವ್ಯಾಸ ಕಡಿಮೆಯಾಗುತ್ತಿರುವುದು ನಿಜಕ್ಕೂ ವಿಷಾದದ ಸಂಗತಿ.

-ಶಹಜಾನ ಡೊಂಗರಗಾಂವ. ಮಾಜಿ ಶಾಸಕ ಅಥಣಿ.ಒಂದು ಪತ್ರಿಕೆ ಮುದ್ರಣವಾಗಿ ನಮ್ಮ ಮನೆ ತಲುಪಬೇಕಾದರೇ ಅದರ ಹಿಂದೆ ಬಹುದೊಡ್ಡ ಪರಿಶ್ರಮವಿದೆ. ಹಗಲು, ರಾತ್ರಿ ಎನ್ನದೇ ಪ್ರಾಣದ ಹಂಗು ತೊರೆದು ಸುದ್ದಿ ಕಲೆಹಾಕುವ ಪತ್ರಕರ್ತರು, ಬಂದ ಸುದ್ದಿಗಳನ್ನು ಸತ್ಯಾಸತ್ಯತೆಯ ನೋಡಿ ತಿದ್ದಿ ತೀಡುವ ಉಪಸಂಪಾದಕರು, ಮಧ್ಯರಾತ್ರಿಯಿಡೀ ನಿದ್ದೆಗೆಟ್ಟು ಪತ್ರಿಕೆ ಮುದ್ರಿಸುವ ತಾಂತ್ರಿಕ ಸಿಬ್ಬಂದಿ ಈ ಇಡೀ ವ್ಯವಸ್ಥೆಯ ಪರಿಶ್ರಮವನ್ನು ಪ್ರತಿಯೊಬ್ಬ ನಾಗರಿಕನೂ ಅರ್ಥ ಮಾಡಿಕೊಳ್ಳಬೇಕು.

-ಚಿದಾನಂದ ಸವದಿ,

ಯುವ ನಾಯಕರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕರಾಟೆ, ಯೋಗಕ್ಕೆ ಒಬ್ಬರೇ ಶಿಕ್ಷಕರ ನೇಮಕ ಅವೈಜ್ಞಾನಿಕ
ಪೌರಕಾರ್ಮಿಕರ ಹುದ್ದೆ ಭರ್ತಿಗೆ ಪಪಂ ಸದಸ್ಯರ ಒಪ್ಪಿಗೆ