ಚೆನ್ನಮ್ಮನ ಇತಿಹಾಸ ಕವಿತೆಗಳಲ್ಲಿ ಅನಾವರಣಗೊಳ್ಳಲಿ

KannadaprabhaNewsNetwork |  
Published : Oct 25, 2026, 03:15 AM IST
24್ಚವಚದಚವ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರುಕಿತ್ತೂರು ರಾಣಿ ಚೆನ್ನಮ್ಮನ ಹೋರಾಟ, ಧೈರ್ಯ ಹಾಗೂ ಮಹಿಳಾ ಶಕ್ತಿಯ ಸಂದೇಶ ಸಾರುವ ಕಾವ್ಯ, ಲಾವಣಿ ಮತ್ತು ಸಾಹಿತ್ಯ ಕೃತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹೊರಬರಬೇಕು ಎಂದು ಹಿರಿಯ ಕವಯಿತ್ರಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಡಾ.ಕೆ.ಶರೀಫಾ ಹೇಳಿದರು.

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು

ಕಿತ್ತೂರು ರಾಣಿ ಚೆನ್ನಮ್ಮನ ಹೋರಾಟ, ಧೈರ್ಯ ಹಾಗೂ ಮಹಿಳಾ ಶಕ್ತಿಯ ಸಂದೇಶ ಸಾರುವ ಕಾವ್ಯ, ಲಾವಣಿ ಮತ್ತು ಸಾಹಿತ್ಯ ಕೃತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹೊರಬರಬೇಕು ಎಂದು ಹಿರಿಯ ಕವಯಿತ್ರಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಡಾ.ಕೆ.ಶರೀಫಾ ಹೇಳಿದರು.

ಕಿತ್ತೂರು ರಾಣಿ ಚೆನ್ನಮ್ಮ ಸಭಾಭವನದಲ್ಲಿ ಶನಿವಾರ ನಡೆದ ಕಿತ್ತೂರು ಸಂಸ್ಥಾನದ ಕುರಿತು ಮಹಿಳಾ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು. ಚೆನ್ನಮ್ಮ, ಬೆಳವಡಿ ಮಲ್ಲಮ್ಮ ಹಾಗೂ ರಾಣಿ ಅಬ್ಬಕ್ಕ ದೇವಿಯಂತಹ ವೀರ ಮಹಿಳೆಯರು ತಮ್ಮ ಸಾಹಸ, ನಾಯಕತ್ವ ಮತ್ತು ಹೋರಾಟದ ಮೂಲಕ ಇತಿಹಾಸದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದಾರೆ. ಅವರ ಬದುಕು, ಆದರ್ಶಗಳು ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಬೇಕು ಎಂದರು.

ಕವಿಗೋಷ್ಠಿಯ ಆಶಯ ನುಡಿಗಳನ್ನಾಡಿದ ಪ್ರತಿಭಾ ಬೋರಗಾಂವಕರ, ಮಹಿಳೆಯರ ನೋವು, ಅನುಭವ, ಅಂತರಂಗದ ಭಾವನೆ ಹಾಗೂ ಸಾಮಾಜಿಕ ಸವಾಲುಗಳಿಗೆ ಸಾಹಿತ್ಯದ ಮೂಲಕ ಅಭಿವ್ಯಕ್ತಿ ನೀಡುವ ವೇದಿಕೆಗಳಾಗಿ ಇಂತಹ ಕಾರ್ಯಕ್ರಮಗಳು ರೂಪುಗೊಳ್ಳಬೇಕು ಎಂದರು.

ಕತ್ತಿಗಿಂತ ಲೇಖನಿಗೆ ಹೆಚ್ಚಿನ ಶಕ್ತಿ:

ಕಿತ್ತೂರು ಸಂಸ್ಥಾನದ ರಕ್ಷಣೆಗಾಗಿ ಚೆನ್ನಮ್ಮ ಕತ್ತಿ ಹಿಡಿದು ಹೋರಾಡಿದರೆ, ಇಂದು ಮಹಿಳೆಯರ ಕೈಯಲ್ಲಿ ಲೇಖನಿಯಿದೆ. ಕತ್ತಿ ಒಬ್ಬ ಶತ್ರುವನ್ನು ಎದುರಿಸಬಹುದು; ಆದರೆ ಲೇಖನಿ ಇಡೀ ವ್ಯವಸ್ಥೆಯನ್ನೇ ಬದಲಿಸುವ ಶಕ್ತಿ ಹೊಂದಿದೆ. ಸಾವಿತ್ರಿಬಾಯಿ ಫುಲೆ ಅವರ ಶಿಕ್ಷಣ ಕ್ರಾಂತಿಯನ್ನು ಸ್ಮರಿಸಿದ ಅವರು, ಸಾಹಿತ್ಯ ಮತ್ತು ಶಿಕ್ಷಣದ ಮೂಲಕ ಮಹಿಳೆಯರ ಬದುಕಿನಲ್ಲಿ ಬದಲಾವಣೆ ತರಬಹುದು ಎಂದರು.

ಕವಿಗೋಷ್ಠಿಯಲ್ಲಿ ಭಾರತಿ ಮಠದ, ಹೇಮಾವತಿ ಸೊನ್ನಳ್ಳಿ, ಜ್ಯೋತಿ ಬದಾಮಿ, ಆಶಾ ಯಮಕನಮರಡಿ, ರೇಣುಕಾ ಕಠಾರಿ, ನಿರ್ಮಲಾ ಬಟ್ಟಲ, ದೀಪಿಕಾ ಚಾಟೆ, ಹಮಿದಾ ಬೇಗಂ ದೇಸಾಯಿ, ರಾಜನಂದಾ ಗಾರ್ಗಿ, ಮಲ್ಲವ್ವ ಪಾಟೀಲ, ಡಾ.ಪಾರ್ವತಿ ಪಾಟೀಲ ಸೇರಿದಂತೆ ಹಲವು ಕವಯಿತ್ರಿಯರು ಕವನ ವಾಚಿಸಿದರು. ಚೆನ್ನಮ್ಮನ ಜೀವನ, ಹೋರಾಟ, ಮಹಿಳಾ ಸ್ವಾಭಿಮಾನ ಹಾಗೂ ಕಿತ್ತೂರು ಸಂಸ್ಥಾನದ ಇತಿಹಾಸವನ್ನು ಕವಿತೆಗಳ ಮೂಲಕ ಸ್ಮರಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಸವರಾಜ ಕುಪ್ಪಸಗೌಡರ ಸೇರಿದಂತೆ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಮಖಂಡಿ ಸಕ್ಕರೆ ಕಾರ್ಖಾನೆಯಲ್ಲಿ ಗೂಂಡಾಗಿರಿ: ರೈತರ ಆರೋಪ
ಇಂದು ಕಿತ್ತೂರು ಉತ್ಸವದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಭಾಗಿ