ಸತಿ ಪತಿ ಉತ್ತಮ ಬದುಕು ಕಟ್ಟಿಕೊಂಡು ಸಾರ್ಥಕ ಜೀವನ ಸಾಗಿಸಲಿ: ಶ್ರೀರಾಮುಲು

KannadaprabhaNewsNetwork |  
Published : Feb 09, 2025, 01:17 AM IST
ಸ | Kannada Prabha

ಸಾರಾಂಶ

ನಂದಿಪುರದ ದೊಡ್ಡಬಸವೇಶ್ವರ ಮಠ ನಿರಂತರವಾಗಿ ಸಮಾಜಮುಖಿ ಕೆಲಸ ಮಾಡುವ ಮೂಲಕ ಜನಮಾನಸದಲ್ಲಿ ಉಳಿದಿದೆ

ಹಗರಿಬೊಮ್ಮನಹಳ್ಳಿ; ನಂದಿಪುರದ ದೊಡ್ಡಬಸವೇಶ್ವರ ಮಠ ನಿರಂತರವಾಗಿ ಸಮಾಜಮುಖಿ ಕೆಲಸ ಮಾಡುವ ಮೂಲಕ ಜನಮಾನಸದಲ್ಲಿ ಉಳಿದಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ತಿಳಿಸಿದರು.

ತಾಲೂಕಿನ ನಂದಿಪುರ ಗ್ರಾಮದಲ್ಲಿ ದೊಡ್ಡಬಸವೇಶ್ವರ ರಥೋತ್ಸವ ನಿಮಿತ್ತ ನಡೆದ ಸಾಮೂಹಿಕ ವಿವಾಹ ಮತ್ತು ಕೃಷಿಮೇಳದ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಾಮೂಹಿಕ ವಿವಾಹಗಳು ಬಡಜನತೆಯ ಆರ್ಥಿಕ ಹೊರೆಯನ್ನು ತಗ್ಗಿಸುವ ಜೊತೆಗೆ ಸಂಸ್ಕಾರ ನೀಡುತ್ತವೆ. ನಂದಿಪುರದ ಮಹೇಶ್ವರ ಸ್ವಾಮೀಜಿಯವರ ಮಠ ಶೈಕ್ಷಣಿಕ, ಧಾರ್ಮಿಕ ಕೊಡುಗೆಗಳನ್ನು ನಿರಂತರವಾಗಿ ನೀಡುತ್ತಿದೆ. ಸತಿ-ಪತಿಗಳು ಉತ್ತಮ ಬದುಕನ್ನು ಕಟ್ಟಿಕೊಂಡಾಗ ಸಾಮೂಹಿಕ ವಿವಾಹಗಳಿಗೆ ಅರ್ಥ ಬರುತ್ತದೆ ಎಂದರು.

ಶಾಸಕ ಕೆ.ನೇಮರಾಜ ನಾಯ್ಕ ಉದ್ಘಾಟಿಸಿ ಮಾತನಾಡಿ, ನೂತನ ದಂಪತಿಗಳು ಮನೆಯ ಹಿರಿಯರನ್ನು ಗೌರವಿಸಿ ಹೊಂದಾಣಿಕೆ ಜೀವನ ನಡೆಸಬೇಕು. ನಂದಿಪುರದ ಮಠ ಸಾಮೂಹಿಕ ವಿವಾಹಗಳ ಮೂಲಕ ಲಕ್ಷಾಂತರ ರುಪಾಯಿ ಉಳಿಸಿ ಮುಂದಿನ ಬದುಕಿಗೆ ನೆರವಾಗಿದೆ ಎಂದು ತಿಳಿಸಿದರು.

ನಂದಿಪುರದ ಡಾ.ಮಹೇಶ್ವರ ಸ್ವಾಮೀಜಿ ನೇತೃತ್ವ ವಹಿಸಿ ಮಾತನಾಡಿ, ಭಕ್ತರ ನೆರವಿನಿಂದ ಮಠದಲ್ಲಿ ನಿರಂತರವಾಗಿ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಸೇವೆಗಳು ನೆಡೆಯುತ್ತಿವೆ ಎಂದರು.

ಹಂಪಸಾಗರ ನವಲಿ ಹಿರೇಮಠದ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ, ಪಂಚಾಕ್ಷರಿ ಸ್ವಾಮೀಜಿ, ಹಾಲಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಜಿ.ಎಂ.ಜಗದೀಶ್ ಪ್ರಾಸ್ತಾವಿಕ ಮಾತನಾಡಿದರು.

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಡಿ.ಗಂಗಣ್ಣ, ಪುರಸಭೆ ಮಾಜಿ ಸದಸ್ಯ ಬದಾಮಿ ಮೃತ್ಯುಂಜಯ, ಗುರು ದೊಡ್ಡಬಸವೇಶ್ವರ ಸೇವಾ ಸಮಿತಿಯ ಬನ್ನಿಗೋಳ ವೆಂಕಣ್ಣ, ಸೋಗಿ ಎಂ.ಬಸವರಾಜ, ನಂದಿಪುರ ಯಮುನಪ್ಪ, ಅಂದಪ್ಪ, ಮೈನಳ್ಳಿ ಕೊಟ್ರೇಶಪ್ಪ, ನಾಗಯ್ಯ ಸ್ವಾಮಿ, ಮೈನಳ್ಳಿ ಕೊಟ್ರೇಶಪ್ಪ, ಚಿತ್ತವಾಡಗಿ ಪ್ರಕಾಶ್, ಹೊಟೇಲ್ ಸಿದ್ದರಾಜು ಇತರರಿದ್ದರು. ಕರಿಬಸವನಗೌಡ ನಿರ್ವಹಿಸಿದರು

ಹಗರಿಬೊಮ್ಮನಹಳ್ಳಿ ತಾಲೂಕಿನ ನಂದಿಪುರ ಗ್ರಾಮದಲ್ಲಿ ಶ್ರೀ ಗುರು ದೊಡ್ಡಬಸವೇಶ್ವರ ರಥೋತ್ಸವದ ನಿಮಿತ್ತ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 37 ಜೋಡಿಗಳು ನೂತನ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!